ಲಂಗಾ ಧರಿಸಿ ಭರ್ಜರಿ ಸ್ಟೆಪ್ಸ್ ಹಾಕಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಬೇಸರ ಗೊಂಡ ಅಭಿಮಾನಿಗಳು…!

ಬಾಲಿವುಡ್ ಸ್ಟಾರ್‍ ನಟ ಅಕ್ಷಯ್ ಕುಮಾರ್‍ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಇಂದಿಗೂ ಸಹ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಗಾಗ ಕೆಲವೊಮ್ಮೆ ಸ್ಟಾರ್‍ ನಟರು ಮಾಡುವಂತಹ ಕೆಲಸಗಳ ಕಾರಣದಿಂದ ಅಭಿಮಾನಿಗಳೇ ಬೇಸರ ಆಗುತ್ತಿರುತ್ತಾರೆ. ಸೆಲೆಬ್ರೆಟಿಗಳು ಒಳ್ಳೆಯ ಕೆಲಸಗಳನ್ನು ಮಾಡಿದರೇ ಯಾವ ರೀತಿಯಲ್ಲಿ ಸಪೋರ್ಟ್ ಮಾಡುತ್ತಾರೋ ಅದೇ ಮಾದರಿಯಲ್ಲಿ ಅವರು ಮಾಡುವ ಕೆಲವೊಂದು ಕೆಟ್ಟ ಕೆಲಸಗಳ ಕಾರಣದಿಂದ ವಿರೋಧ ಸಹ ಮಾಡುತ್ತಾರೆ. ಇದೀಗ ಅಕ್ಷಯ್ ಕುಮಾರ್‍ ಮಾಡಿದ ಕೆಲಸದಿಂದಾಗಿ ಅವರ ಅಭಿಮಾನಿಗಳು ಆತನ ವಿರುದ್ದ ಆಕ್ರೋಷಗೊಂಡಿದ್ದಾರೆ.

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಏನೇ ಮಾಡಿದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಒಳ್ಳೆಯ ಕೆಲಸಗಳನ್ನು ಮಾಡಿದರೇ ಅವರಿಗೆ ಅದೇ ರೀತಿಯಲ್ಲಿ ತುಂಬಾ ಬೆಂಬಲ ಸಿಗುತ್ತದೆ. ಅವರು ಮಾಡಿದಂತಹ ಕೆಲಸಗಳ ಕಾರಣದಿಂದ ಅವರನ್ನು ದೇವರಂತೆ ಕಾಣುತ್ತಾರೆ. ಅವರ ಮನೆಗಳಲ್ಲಿ ಸಭೆ ಸಮಾರಂಭಗಳು ನಡೆದರೇ ಸೆಲೆಬ್ರೆಟಿಗಳ ಅಭಿಮಾನಿಗಳು ತಮ್ಮ ಮನೆಯಲ್ಲೇ ಕಾರ್ಯಕ್ರಮಗಳು ನಡೆದಿದೆ ಎಂಬಂತೆ ಸಂತೋಷ ಪಡುತ್ತಾರೆ. ಅದೇ ರೀತಿ ಏನಾದರೂ ತಪ್ಪು ಮಾಡಿದರೂ ಅದೇ ರೀತಿ ವಿರೋಧ ಸಹ ವ್ಯಕ್ತಪಡಿಸುತ್ತಾರೆ.  ಹಣಕ್ಕಾಗಿ ಹುಚ್ಚಾಟಗಳನ್ನು ಆಡಿದರೇ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಆಕ್ರೋಷ ಹೊರಹಾಕು‌ತ್ತಾರೆ. ಇದೀಗ ಅಕ್ಷಯ್ ಕುಮಾರ್‍ ಮಾಡಿದ ಹುಚ್ಚಾಟಕ್ಕಾಗಿ ಅವರ ಅಭಿಮಾನಿಗಳೇ ಆತನ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್‍ ಸದ್ಯ ಅಮೇರಿಕಾ ವೆಕೇಷನ್ ನಲ್ಲಿದ್ದಾರೆ. ಒಂದು ಕಾರ್ಯಕ್ರಮದ ನಿಮಿತ್ತ ಅವರು ಅಮೇರಿಕಾಗೆ ಹೋಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ಸ್ಟಾರ್‍ ಗಳು ಹೋಗಿದ್ದಾರೆ. ಸೋನಂ ಬಾಜ್ವಾ, ಮೌನಿ ರಾಯ್, ನೋರಾ ಫತೇಹಿ, ದಿಶಾಪಟಾನಿ ರವರಂತಹ ಅನೇಕರ ಸ್ಟಾರ್‍ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್‍ ಒಂದು ನೃತ್ಯ ಪ್ರದರ್ಶನ ಮಾಡಿದ್ದರು. ಅಟ್ಲಾಂಟ ದಲ್ಲಿ ಒಂದು ಡ್ಯಾನ್ಸ್ ಈವೆಂಟ್ ಜರುಗಿದೆ. ಈ ವೇಳೆ ಅಕ್ಷಯ್ ಕುಮಾರ್‍ ಮಾಡಿದ ನೃತ್ಯ ಮಾತ್ರ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಕ್ಷಯ್ ಲಂಗಾ ಧರಿಸಿ ಮೈ ಖಿಲಾಡಿ ತು ಅನಾರಿ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಇನ್ನೂ ಅಕ್ಷಯ್ ಲಂಗಾ ಧರಿಸಿ ಈ ನೃತ್ಯ ಮಾಡಿದ್ದ ಕಾರಣದಿಂದ ಆತನ ವಿರುದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಈ ನೃತ್ಯದ ಕಾರಣದಿಂದ ಅಕ್ಷಯ್ ವಿರುದ್ದ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಅಕ್ಷಯ್ ಕುಮಾರ್‍ ಈ ನೃತ್ಯ ಕಂಡ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಣಕ್ಕಾಗಿ ಈ ರೀತಿಯಾಗಿ ಡ್ಯಾನ್ಸ್ ಮಾಡಬೇಕಾ. ಸ್ಟಾರ್‍ ನಟರಾಗಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸಿನೆಮಾಗಳಲ್ಲಿ ಹಣ ಬರದೇ ಇದ್ದರೇ ಈ ರೀತಿಯಾಗಿ ಕುಣಿಯುವುದೇ ಎಂದು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ತಮ್ಮ ಅಸಮಧಾನ ಹೊರಹಾಕುತ್ತಿದ್ದಾರೆ.