News

ಇನ್ಸ್ಟಾದಲ್ಲಿ ರೀಲ್ಸ್ ಪೋಸ್ಟ್ ಮಾಡಿದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ……!

ಇಂದಿನ ಕಾಲದಲ್ಲಿ ಸ್ಮಾರ್ಟ್‌ಪೋನ್ ಇಲ್ಲದ ಕುಟುಂಬ ಇರೋದು ತುಂಬಾನೆ ವಿರಳ ಎನ್ನಬಹುದಾಗಿದೆ. ಅದರಲ್ಲೂ ಪ್ರತಿಯೊಬ್ಬರೂ ಸೋಷಿಯಲ್ ಮಿಡಿಯಾ ಪ್ಲಾಟ್ ಫಾರಂಗಳಾದ ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಗಳನ್ನು ಬಳಸುತ್ತಾರೆ. ಪ್ರತಿ ನಿತ್ಯ ರೀಲ್ಸ್ ಗಳನ್ನು ನೋಡಿಯೇ ಮಲಗುವಂತಹ ಅನೇಕರು ಸಹ ಇದ್ದಾರೆ. ಜೊತೆಗೆ ರೀಲ್ಸ್ ಮಾಡುವಂತಹ ಅನೇಕರು ಸಹ ಇದ್ದಾರೆ. ಇದೀಗ ರೀಲ್ಸ್ ಪೋಸ್ಟ್ ಮಾಡಿದಂತಹ ಮಹಿಳೆಯನ್ನು ಆಕೆಯ ಪತಿಯೇ ಕತ್ತು ಸೀಳಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ.

ಇಂದಿನ ಕಾಲದಲ್ಲಿ ಅನೇಕರು ಸೋಷಿಯಲ್ ಮಿಡಿಯಾ ಮೂಲಕವೇ ಹೆಸರು ಗಳಿಸುವುದರ ಜೊತೆಗೆ ಹಣ ಸಂಪಾದನೆಯ ಮೂಲ ಸಹ ಆಗಿದೆ. ಫೇಮಸ್ ಆಗೋ ನಿಟ್ಟಿನಲ್ಲಿ ಯುವಕ-ಯುವತಿಯರು ಮಾತ್ರವಲ್ಲದೇ ಎಲ್ಲಾ ವಯಸ್ಸಿನವರು ರೀಲ್ಸ್ ಮಾಡುತ್ತಾ ಟ್ರೆಂಡ್ ಆಗುವಂತಹ ಹಾಡುಗಳಿಗೆ ರೀಲ್ಸ್ ಮಾಡಿ ಫೇಮಸ್ ಆಗುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಮದುವೆಯಾದ ಕಪಲ್ಸ್ ಸಹ ರೀಲ್ಸ್ ಮಾಡುತ್ತಾ ತುಂಬಾನೆ ಫೇಮಸ್ ಆಗುತ್ತಿದ್ದಾರೆ. ಆದರೆ ಕೋಲ್ಕತ್ತಾದಲ್ಲಿ ಒಂದು ಘಟನೆ ನಡೆದಿದ್ದು, ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಮೃತ ದುರ್ದೈವಿಯನ್ನು ಅಪರ್ಣಾ(35) ಎಂದು ಗುರ್ತಿಸಲಾಗಿದೆ. ಇನ್ಸ್ಟಾದಲ್ಲಿ ಎರಡು ರೀಲ್ಸ್ ಪೋಸ್ಟ್ ಮಾಡಿದ್ದ ಅಪರ್ಣಾ ಎಂಬಾಕೆಯನ್ನು ಆಕೆಯ ಪತಿ ಪರಿಮಳ್ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಮೃತ ದುರ್ದೈವಿ ಅಪರ್ಣಾ ಗೃಹಿಣಿಯಾಗಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದರು. ಇನ್ಸ್ಟಾಗ್ರಾಂನಲ್ಲಿ ಆಕೆ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಕಾರಣದಿಂದ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಮೂಡಿ, ಅವಿರಬ್ಬರ ನಡುವೆ ಜಗಳಗಳು ಸಹ ನಡೆಯಲು ಶುರುವಾಯ್ತು. ಮೃತ ಮಹಿಳೆಯ ಪತಿ ಆರೋಪಿ ಪರಿಮಳ ಬೈದ್ಯ ಅಪರ್ಣಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರ ಮಾಹಿತಿಯಂತೆ ಅಪರ್ಣಾ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡಲು ಪ್ರಾರಂಭ ಮಾಡಿದಾಗಿನಿಂದಲೇ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ನಡುವೆ ಅಪರ್ಣಾಗೆ ಹಣ ಸಾಲ ನೀಡುವ ಏಜೆನ್ಸಿಯ ಅಧಿಕಾರಿಯೊಬ್ಬರೊಂದಿಗೆ ಸ್ನೇಹ ಬೆಳೆದಿದ್ದ ವಿಚಾರದಿಂದಲೂ ಸಹ ಆರೋಪಿ ಪರಿಮಳ್ ಗೆ ಕೋಪ ಬಂದಿದೆ. ಈ ಕಾರಣದಿಂದ ಇಬ್ಬರ ನಡುವೆ ಜಗಳ ಶುರುವಾಗಿ ಕೊಲೆಯೊಂದಿಗೆ ಅತ್ಯವಾಗಿದೆ. ಸದ್ಯ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಆರೋಪಿ ಇದೀಗ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Most Popular

To Top