ನಾಗಚೈತನ್ಯ ಅಂದರೇ ತುಂಬಾ ಇಷ್ಟ, ಐ ಲವ್ ನಾಗಚೈತನ್ಯ, ಆತ ನನ್ನ ಕ್ರಷ್ ಎಂದ ನಟಿ ದಿವ್ಯಾಂಶ ಕೌಶಿಕ್….!

ತೆಲುಗು ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ನಾಗಚೈತನ್ಯ ಹಾಗೂ ಸಮಂತಾ ಜೋಡಿ ಒಂದಾಗಿತ್ತು. ಆದರೆ ಇಬ್ಬರೂ ವಿಚ್ಚೇದನ ಪಡೆದುಕೊಂಡು ಬೇರೆಯಾಗಿದ್ದಾರೆ. ವಿಚ್ಚೇದನದ ಬಳಿಕ ಅವರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಾಗಚೈತನ್ಯ ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಮತ್ತೊರ್ವ ನಟಿ ನಾಗಚೈತನ್ಯ ಅಂದರೇ ಕ್ರಷ್ ಎಂದು ಹೇಳಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ನಾಗಚೈತನ್ಯ ಜೊತೆಗೆ ಮಜಲಿ ಸಿನೆಮಾದಲ್ಲಿ ನಟಿಸಿದ್ದ ದಿವ್ಯಾಂಶ ಕೌಶಿಕ್.

ನಟ ಅಕ್ಕಿನೇನಿ ನಾಗಚೈತನ್ಯ ಸಮಂತಾ ರೊಂದಿಗೆ ಬೇರೆಯಾದ ಬಳಿಕ ಗೂಢಚಾರಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೂ ಈ ಬಗ್ಗೆ ಶೋಭಿತಾ ಸಹ ಸುಳ್ಳು ಸುದ್ದಿ ಎಂದು ವಿಡಿಯೋ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದರು. ಜೊತೆಗೆ ನಾಗಚೈತನ್ಯ ಸಹ ಲಾಲ್ ಸಿಂಗ್ ಚಡ್ಡಾ ಸಿನೆಮಾದ ಪ್ರಮೋಷನ್ ವೇಳೆ ನಕ್ಕು ಸುಮ್ಮನಾಗಿದ್ದರು. ಇದೀಗ ನಟಿ ದಿವ್ಯಾಂಶ ಕೌಶಿಕ್ ಜೊತೆಗೆ ನಾಗಚೈತನ್ಯ ಮದುವೆ ನಡೆಯಲಿದೆ. ಇವರಿಬ್ಬರೂ ಹೈದರಾಬಾದ್ ನ ಜೂಬ್ಲಿ ಹಿಲ್ಸ್ ನಲ್ಲಿ ಸಂಸಾರ ನಡೆಸಲಿದ್ದಾರೆ ಎಂದೂ ಸಹ ಸುದ್ದಿಗಳು ಕೇಳಿಬಂದಿತ್ತು. ಈ ರೂಮರ್‍ ಗಳಿಗೆ ಇದಿಗ ದಿವ್ಯಾಂಶ ಕೌಶಿಕ್ ರಿಯಾಕ್ಟ್ ಆಗಿದ್ದಾರೆ.

ನಟಿ ದಿವ್ಯಾಂಶ ಕೌಶಿಕ್ ನಟ ಸಂದೀಪ್ ಕಿಷನ್ ಜೊತೆಗೆ ಮೈಖೆಲ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಇದೇ ಫೆಬ್ರವರಿ 3 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿ ನಡೆಯುತ್ತಿದ್ದು, ಈ ಪ್ರಮೋಷನ್ ಭಾಗವಾಗಿ ಸಂದರ್ಶನವೊಂದರಲ್ಲಿ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನಾಗಚೈತನ್ಯ ಜೊತೆಗೆ ಮದುವೆಯ ಸುದ್ದಿ ಬಗ್ಗೆ ಪ್ರಶ್ನೆ ಎದುರಾಗಿದ್ದು, ಈ ಬಗ್ಗೆ ದಿವ್ಯಾಂಶ ಉತ್ತರ ನೀಡಿದ್ದಾರೆ. ಐ ಲವ್ ನಾಗ ಚೈತನ್ಯ, ಆತನ ಮೇಲೆ ನನಗೆ ತುಂಬಾನೆ ಕ್ರಷ್ ಇದೆ. ನೋಡಲು ಆತ ತುಂಬಾ ಚೆನ್ನಾಗಿರುತ್ತಾರೆ. ಆತ ನನ್ನ ಸೀನಿಯರ್‍, ಶೂಟಿಂಗ್ ಸೆಟ್ ನಲ್ಲಿ ನಾನು ಆತನನ್ನು ಸೀನಿಯರ್‍ ಆಗಿಯೇ ನೋಡುತ್ತೇನೆ. ಆತ ಬಂದ ಕೂಡಲೇ ನಾನು ಎದ್ದು ಹಿರೋ ಅವರೇ ಬನ್ನಿ ಎಂದು ಗೌರವಿಸುತ್ತೇನೆ ಎಂದಿದ್ದಾರೆ ದಿವ್ಯಾಂಶ.

ಇನ್ನೂ ನನಗೆ ರಾಮಾರಾವ್ ಆನ್ ಡ್ಯೂಟಿ ಸಿನೆಮಾ ಆಫರ್‍ ಬರಲು ನಾಗಚೈತನ್ಯ ಕಾರಣ ಎಂಬ ರೂಮರ್‍ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ನಾನು ಆ ರೂಮರ್‍ ಕೇಳಿಲ್ಲ. ನನಗೆ ಆ ಸಿನೆಮಾಗಾಗಿ ಹೆಲ್ಪ್ ಮಾಡಿಲ್ಲ. ನಾವು ಏನು ಮದುವೆಯಾಗುತ್ತಿಲ್ಲ. ನಾಗ ಚೈತನ್ಯ ಜಪಾನ್ ನಲ್ಲಿ ರೆಸ್ಟೋರೆಂಟ್ ಪ್ರಾರಂಭ ಮಾಡುತ್ತಿದ್ದು, ಅದರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಮಾತ್ರ ನಾವು ವಿಷಸ್ ಹೇಳಿಕೊಳ್ಳುತ್ತೇವೆ ಅಷ್ಟೆ. ನಾವು ಅಷ್ಟೊಂದು ಟಚ್ ನಲ್ಲೂ ಸಹ ಇಲ್ಲ ಎಂದು ದಿವ್ಯಾಂಶ ಕೌಶಿಕ್ ತಮ್ಮ ಬಗೆಗಿನ ರೂಮರ್‍ ಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Previous articleಸೆಲ್ಫಿ ಗಾಗಿ ಬಂದ ಅಭಿಮಾನಿಯ ಮೊಬೈಲ್ ಕಿತ್ತು ಎಸೆದ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್, ವೈರಲ್ ಆದ ವಿಡಿಯೋ….!
Next articleಹೂವಿನ ಗೌನ್ ನಲ್ಲಿ ಟಾಪ್ ಆಂಗಲ್ ನಲ್ಲಿ ಕ್ಲೀವೇಜ್ ಶೋ ಮಾಡಿದ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್….!