Film News

ಅನಿಮಲ್ ಸಿನೆಮಾದ ರೋಮ್ಯಾಂಟಿಕ್ ಹಾಡಿಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಕಿಷನ್-ಚೈತ್ರಾ ಆಚಾರ, ವೈರಲ್ ಆದ ವಿಡಿಯೋ…..!

ಸ್ಯಾಂಡಲ್ ವುಡ್ ನಟಿ ಚೈತ್ರಾ ಆಚಾರ್‍ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿರುತ್ತಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಆಕೆಯನ್ನು ಅನೇಕರು ಸ್ಯಾಂಡಲ್ ವುಡ್ ಆಲಿಯಾ ಭಟ್ ಎಂತಲೇ ಕರೆಯುತ್ತಾರೆ. ಇದೀಗ ಬಿಗ್ ಬಾಸ್ ಫೇಂ ಕಿಷನ್ ಬೆಳಗಲಿ ಹಾಗೂ ಚೈತ್ರಾ ಆಚಾರ್‍ ಬ್ಲಾಕ್ ಬ್ಲಸ್ಟರ್‍ ಅನಿಮಲ್ ಸಿನೆಮಾದ ರೊಮ್ಯಾಂಟಿಕ್ ಹಾಡಿಗೆ ತುಂಬಾ ರೊಮ್ಯಾಂಟಿಕ್ ಆಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಇಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಬಿಗ್ ಬಾಸ್ ಫೇಂನ ಕಿಷನ್ ಬೆಳಗಲಿ ಕೆಲವು ಸೆಲಬ್ರೆಟಿಗಳ ಜೊತೆಗೆ ಪಾಪ್ಯುಲರ್‍ ಹಾಡುಗಳಿಗೆ ನೃತ್ಯ ಮಾಡುತ್ತಿರುತ್ತಾರೆ. ಇದೀಗ ಕಿಷನ್ ನಟಿ ಚೈತ್ರಾ ಆಚಾರ್‍ ಜೊತೆಗೆ ರೊಮ್ಯಾಂಟಿಕ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಬಾಲಿವುಡ್ ಸ್ಟಾರ್‍ ರಣಬೀರ್‍ ಕಪೂರ್‍ ಹಾಗೂ ನಟಿ ತೃಪ್ತಿ ಡಿಮ್ರಿ ನಟನೆಯ ಅನಿಮಲ್ ಸಿನೆಮಾದ ಪೆಹೆಲೆ ಬಿ ಮೇ ತುಮ್ಸೆ ಮಿಲಾ ಹು ಎಂಬ ರೊಮ್ಯಾಂಟಿಕ್ ಹಾಡಿಗೆ ಮಾದಕ ನೃತ್ಯ ಮಾಡಿದ್ದಾರೆ. ಈ ವಿಡಿಯೋದಲ್ಲಿ ಚೈತ್ರಾ ಬಿಳಿ ಬಣ್ಣದ ಕೆಂಪು ಝರಿಅಂಚಿನ ಸೀರೆಯನ್ನು ಧೋತಿ ಸ್ಟೈಲ್ ನಲ್ಲಿ ಧರಿಸಿದ್ದಾರೆ. ಹಣೆಗೆ ಕೆಂಪು ಬಣ್ಣದ ಬಿಂದಿಯನ್ನು ಇಟ್ಟು, ಕೂದಲನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಆಕರ್ಷಕವಾದ ರವಿಕೆಯನ್ನು ಧರಿಸಿದ್ದಾರೆ. ಕಿಷನ್ ಬೆಳಗಲಿ ವೈಟ್ ಶರ್ಟ್ ಹಾಗೂ ಬ್ಲಾಕ್ ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ಕ್ಲಾಸಿಕಲ್ ಲುಕ್ಸ್ ನಲ್ಲಿ ಮಿಂಚಿದ್ದಾರೆ.

ಅನಿಮಲ್ ಸಿನೆಮಾದ ರೊಮ್ಯಾಂಟಿಕ್ ಹಾಡಿಗೆ ಇಬ್ಬರೂ ತುಂಬಾ ಮಸ್ತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವ್ಯೂವ್ಸ್ ಪಡೆದುಕೊಂಡಿದೆ. ರಿಯಲ್ ಹಾಡನ್ನು ಸಹ ಮೀರಿಸುವಂತಿದೆ ಎಂದು ವಿಡಿಯೋ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ವಿಡಿಯೋ ಸುಮಾರು 75 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಕೆಲವರಂತೂ ನಿಮ್ಮಬ್ಬರ ನಡುವೆ ಒಳ್ಳೆಯ ಕೆಮಿಸ್ಟ್ರಿ ವರ್ಕೌಟ್ ಆಗಿದೆ ಎಂದು ಹೇಳುತ್ತಿದ್ದಾರೆ. ಕಿಷನ್ ಬೆಳಗಲಿ ಆಗಾಗ ಕಿರುತೆರೆ ನಟಿಯರು, ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಪಾಪ್ಯುಲರ್‍ ರೊಮ್ಯಾಂಟಿಕ್ ಹಾಡುಗಳಿಗೆ ನೃತ್ಯ ಮಾಡುತ್ತಿರುತ್ತಾರೆ.

Most Popular

To Top