ಸ್ಕಿನ್ ಶೋ ಮಾಡೋದು ತಪ್ಪೇನು ಅಲ್ಲ ಎಂದ ಮಿಲ್ಕಿ ಬ್ಯೂಟಿ ತಮನ್ನಾ, ವೈರಲ್ ಆದ ಕಾಮೆಂಟ್…..!

Follow Us :

ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ ಮೂಲಕವೇ ದಶಕಗಳ ಕಾಲ ಸಕ್ಸಸ್ ಕಂಡಂತಹ ನಟಿ ಎಂದರೇ ತಮನ್ನಾ ಭಾಟೀಯಾ ಎಂದು ಹೇಳಬಹುದು. ಕಡಿಮೆ ಸಮಯದಲ್ಲೇ ಭಾರ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡ ಅನೇಕ ಯುವಕರ ಕ್ರಷ್ ಆದ ತಮನ್ನಾ ರನ್ನು ಮಿಲ್ಕಿ ಬ್ಯೂಟಿ ಎಂತಲೇ ಕರೆಯುತ್ತಾರೆ. ಬಾಲಿವುಡ್ ನಲ್ಲಿ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್ 2 ವೆಬ್ ಸಿರೀಸ್ ಗಳ ಬಳಿಕ ತಮನ್ನಾ ತುಂಬಾನೆ ಬೋಲ್ಡ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಸ್ಕಿನ್ ಶೋ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ತಮನ್ನಾ ಭಾಟಿಯಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳು ಕಳೆಯುತ್ತಿದೆ. ಎರಡು ದಶಕಗಳ ಕಾಲ ಆಕೆ ಸೌತ್ ಸಿನಿರಂಗವನ್ನು ಆಳಿದಂತಹ ನಟಿ ಎಂದೇ ಹೇಳಬಹುದು. ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸುತ್ತಾ, ಮ್ಯೂಜಿಕ್ ಆಲ್ಬಂಗಳು, ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ತಮನ್ನಾ ಗ್ಲಾಮರ್‍ ಸಹ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಆಕೆ ಜೀ ಖರ್ದಾ ಸಿರೀಸ್ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಈ ಸೀರೀಸ್ ನಲ್ಲಿ ಬೆಡ್ ರೂಂ ಸೀನ್ ಗಳಲ್ಲಿ ಕಾಣಿಸಿಕೊಂಡರು. ಈ ಹಿಂದೆ ತಮನ್ನಾ ಎಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಈ ಸಿರೀಸ್ ನಲ್ಲಿ ಕಾಣಿಸಿಕೊಂಡರು. ಬಳಿಕ ನೆಟ್ ಫ್ಲಿಕ್ಸ್ ನಲ್ಲಿ ತೆರೆಕಂಡ ಲಸ್ಟ್ ಸ್ಟೋರೀಸ್-2 ಸಿರೀಸ್ ನಲ್ಲೂ ಸಹ ತಮನ್ನಾ ಕಾಣಿಸಿಕೊಂಡರು. ಈ ಸಿರೀಸ್ ನಲ್ಲೂ ಸಹ ತಮನ್ನಾ ಬೋಲ್ಡ್ ಆಗಿಯೇ ನಟಿಸಿದರು. ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೈಲರ್‍ ಸಿನೆಮಾದಲ್ಲೂ ಕಾವಲಯ್ಯ ಹಾಡಿನಲ್ಲೂ ಸಹ ಆಕೆ ಬೋಲ್ಡ್ ಆಗಿಯೇ ಹೆಜ್ಜೆ ಹಾಕಿದ್ದರು. ಈ ಹಾಡಿನಲ್ಲಿ ಆಕೆಯ ಮೇಲೆ ಕೆಲವರು ವಿಮರ್ಶೆ ಸಹ ಮಾಡಿದ್ದರು.

ಇನ್ನೂ ನಟಿ ತಮನ್ನಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ಗ್ಲಾಮರ್‍ ಬಗ್ಗೆ ಮಾತನಾಡಿದ್ದಾರೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು, ಐಟಂ ಸಾಂಗ್ಸ್ ನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವುದು ಸಿನಿ ಪ್ರೇಕ್ಷಕರನ್ನು ರಂಜಿಸಲು ಮಾತ್ರವೇ ಎಂಬ ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಮರ್ಷಿಯಲ್ ಸಿನೆಮಾಗಳಲ್ಲಿ ಮುಖ್ಯವಾಗಿ ಹಾಡುಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ತಪ್ಪೇನಲ್ಲ ಎಂದು ಹೇಳಿದ್ದಾರೆ. ಅಂತಹ ಹಾಡುಗಳ ವಿಚಾರದಲ್ಲಿ ಸ್ಕಿನ್ ಶೋ ವಿಚಾರದಲ್ಲಿ ಜನರ ಮೈಂಡ್ ಸೆಟ್ ಬದಲಾಗಬೇಕೆಂದು ತಮನ್ನಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ತಮನ್ನಾ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸಿನೆಮಾಗಳ ಜೊತೆಗೆ ತಮನ್ನಾ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ವಿಲಕ್ಷಣ ನಟ ವಿಜಯ್ ವರ್ಮಾ ಜೊತೆಗೆ ಆಕೆ ಲವ್ ನಲ್ಲಿರುವ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೂ ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಯಾವಾಗ ಮದುವೆಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.