ಸೆಕ್ಸ್ ಬಗ್ಗೆ ಹೇಳಿಕೆ ಕೊಟ್ಟ ನಟಿ ಅತುಲ್ಯಾ ರವಿ, 21-25ರೊಳಗೆ ಕನ್ಯತ್ವ ಕಳೆದುಕೊಳ್ಳಬೇಕು ಎಂದ ನಟಿ, ವೈರಲ್ ಆದ ಕಾಮೆಂಟ್ಸ್……!

Follow Us :

ಕೆಲವು ಸೆಲೆಬ್ರೆಟಿಗಳು ಆಗಾಗ ಕೆಲವೊಂದು ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಕೆಲವು ಸೆಲೆಬ್ರೆಟಿಗಳಂತೂ ಬೋಲ್ಡ್ ಕಾಮೆಂಟ್ ಗಳ ಮೂಲಕ ವೈರಲ್ ಆಗುವಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಯುಟ್ಯೂಬ್ ಹಾಗೂ ಕಿರುಚಿತ್ರಗಳಲ್ಲಿ ಹಾಗೂ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಅತುಲ್ಯಾ ರವಿ ಸೆಕ್ಸ್ ಬಗ್ಗೆ ಒಪೆನ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಮದುವೆಯಾದ ಬಳಿಕ ಸೆಕ್ಸ್ ಒಳ್ಳೆಯದಾಗಿದ್ದು, ಯಾವ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮೊದಲಿಗೆ ಯುಟ್ಯೂಬ್ ಕಿರುಚಿತ್ರಗಳಲ್ಲಿ ನಟಿಸಿ ಬಳಿಕ 2017 ರಲ್ಲಿ ಕಾದಲ್ ಕಣ್ ಕಟ್ಟುದೆ ಸಿನೆಮಾದಲ್ಲಿ ನಟಿಸಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ನಟಿ ಅತುಲ್ಯಾ ರವಿ ಇದೀಗ ಸಿನಿಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ತಮಿಳು ಸಿನೆಮಾಗಳಲ್ಲೇ ಆಕೆ ನಟಿಸಿ ಫೇಮಸ್ ಆಗಿದ್ದಾರೆ. ಇನ್ನೂ ಆಗಾಗ ಅತುಲ್ಯಾ ರವಿ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಆಕೆಗೆ ಸೆಕ್ಸ್ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಆಕೆ ಹಿಂದೆ ಮುಂದೆ ನೋಡದೇ ನೇರವಾಗಿ ಉತ್ತರ ನೀಡಿದ್ದಾರೆ. ಕನ್ಯತ್ವ ಕಳೆದುಕೊಳ್ಳಲು ಸರಿಯಾದಂತಹ ವಯಸ್ಸು ಯಾವುದು ಎಂಬ ಪ್ರಶ್ನೆಗೆ ಆಕೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ.

ಈ ಪ್ರಶ್ನೆಗೆ ಉತ್ತರ ಕೊಟ್ಟ ಅತುಲ್ಯಾ, ನನ್ನ ಪ್ರಕಾರ ಕನ್ಯತ್ವ ಕಳೆದುಕೊಳ್ಳುವುದು 21-25ವರ್ಷದ ಒಳಗೆ ಸೂಕ್ತ ಎಂದಿದ್ದಾರೆ. ಬಳಿಕ ಮದುವೆಗೂ ಮುಂಚೆ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ ಅಥವಾ ಮದುವೆಯಾದ ಬಳಿಕ ಇದೆಲ್ಲಾ ಇಟ್ಟುಕೊಳ್ಳಬೇಕೆ ಎಂಬ ಪ್ರಶ್ನೆ ಸಹ ಎದುರಾಗಿದೆ. ಈ ಪ್ರಶ್ನೆಗೂ ಅತುಲ್ಯಾ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಏನೆ ಇರಲಿ, ಮದುವೆಗೂ ಮುಂಚೆ ಸೆಕ್ಸ್ ಸರಿಯಲ್ಲ. ಇವೆಲ್ಲವನ್ನೂ ಮದುವೆ ಬಳಿಕ ಇಟ್ಟುಕೊಳ್ಳಬೇಕು. ಸೆಕ್ಸ್ ಎನ್ನುವುದು ಮದುವೆಯಾದ ಬಳಿಕ ನಡೆದರೇ ಆ ಲೈಂಗಿಕ ಸಂಬಂಧ ಉತ್ತಮವಾಗಿರುತ್ತದೆ. ಮದುವೆಯಾದ ಬಳಿಕ ಲೈಂಗಿಕತೆಯ ಕುರಿತು ಕಾಮೆಂಟ್ ಮಾಡಿದ್ದು, ಅದು ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ವಿಚಾರ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಲಿವ್ ಇನ್ ರಿಲೇಷನ್ ಶಿಪ್ ಗಳ ಬಗ್ಗೆ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.