ಈಗಲ್ ಈವೆಂಟ್ ನಲ್ಲಿ ಮಿಂಚಿದ ಅನುಪಮಾ, ಈವೆಂಟ್ ನಲ್ಲಿ ಎಲ್ಲರ ಕಣ್ಣು ಆಕೆಯ ಕಣ್ಣುಗಳ ಮೇಲೆ…….!

Follow Us :

ಯಂಗ್ ಬ್ಯೂಟಿ ಅನುಪಮಾ ಪರಮೇಶ್ವರನ್ ಕ್ಯೂಟ್ ನಟಿ ಎಂತಲೇ ಫೇಂ ಸಂಪಾದಿಸಿಕೊಂಡಿದ್ದರು. ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ತೆಲುಗು ಪ್ರೇಕ್ಷರಿಗೆ ತುಂಬಾ ಹತ್ತಿರವಾದರು. ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಸದ್ಯ ಆಕೆ ಅಭಿನಯದ ಈಗಲ್ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಪ್ರಮೋಷನ್ ಈವೆಂಟ್ ನಲ್ಲಿ ಅನುಪಮಾ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಇದೀಗ ಮಾಸ್ ಮಹಾರಾಜ ರವಿತೇಜ ಜೊತೆಗೆ ಈಗಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದ್ದು, ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಸಹ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು.

ಈಗಲ್ ಸಿನೆಮಾ ಸಂಕ್ರಾಂತಿ ಹಬ್ಬದಂದೇ ಬಿಡುಗಡೆಯಾಗಬೇಕಿತ್ತು. ಆ ಸಮಯದಲ್ಲಿ ಕೆಲವೊಂದು ಸಿನೆಮಾಗಳು ಬಿಡುಗಡೆಯಾದ ಕಾರಣದಿಂದ ಸಿನೆಮಾ ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಈ ಸಿನೆಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈವೆಂಟ್ ನಲ್ಲಿ ನಟಿ ಅನುಪಮಾ ಪರಮೇಶ್ವರನ್ ವೈಟ್ ಎಂಬ್ರಾಡರಿ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಸ್ಲೀವ್ ಲೆಸ್ ಬ್ಲೌಜ್, ಈಯರ್‍ ರಿಂಗ್ಸ್, ನೆಕ್ಲೇಸ್ ಧರಿಸಿ ಮಿಂಚಿದ್ದಾರೆ. ಮಿಂಚುತ್ತಿರುವಂತಹ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಸೀರೆಯಲ್ಲಿ ಕ್ಯೂಟ್ ಲುಕ್ಸ್ ಕೊಡುತ್ತಾ ಎಲ್ಲರನ್ನೂ ಕಟ್ಟಿಹಾಕಿದ್ದಾರೆ. ಜೊತೆಗೆ ಆಕೆಯ ಕಣ್ಣುಗಳ ಮೇಲೆಯೇ ಎಲ್ಲರ ಕಣ್ಣು ಇತ್ತು ಎಂದೂ ಸಹ ಹೇಳಬಹುದಾಗಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇನ್ನೂ ಈಗಲ್ ಸಿನೆಮಾದಲ್ಲಿ ರವಿತೇಜ ಜೊತೆಗೆ ಅನುಪಮಾ ಪರಮೇಶ್ವರನ್ ಹಾಗೂ ಕಾವ್ಯ ಥಾಪರ್‍ ನಟಿಸುತ್ತಿದ್ದಾರೆ. ಈ ಸಿನೆಮಾವನ್ನು ಪಿಪುಲ್ ಮಿಡಿಯಾ ಸಂಸ್ಥೆ ನಿರ್ಮಾಣ ಮಾಡಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನ ಮಾಡಿದ್ದು, ಫೆ.9 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದ ಜೊತೆಗೆ ಶೀಘ್ರದಲ್ಲೇ ಅನುಮಪಾ ಟಿಲ್ಲು ಸ್ಕ್ವೇರ್‍ ಮೂಲಕ ರಂಜಿಸಲಿದ್ದಾರೆ.