ಜೈಲಿನಲ್ಲಿದ್ದ ಮುಸ್ಲಿಂ ಖೈದಿ ತನ್ನ ಸಂಪಾದನೆಯನ್ನು ರಾಮಲಲ್ಲಾಗೆ ದೇಣಿಗೆ, ಮುಸ್ಲಿಂ ಖೈದಿಯ ರಾಮಭಕ್ತಿ….!

Follow Us :

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣವಾಗಿ, ರಾಮಲಲ್ಲಾ ವಿಗ್ರಹ ಪ್ರಾಣಪತ್ರಿಷ್ಟೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ವಿಶ್ವದಾದ್ಯಂತ ರಾಮಭಕ್ತರು ದೇಣಿಗೆ ಸಹ ನೀಡುತ್ತಿದ್ದಾರೆ. ಇದೀಗ ಜೈಲಿನಲ್ಲಿದ್ದ ಮುಸ್ಲಿಂ ಖೈದಿಯೊರ್ವ ರಾಮ ಭಕ್ತನಾಗಿದ್ದು, ತನ್ನ ಸಂಪಾದನೆಯನ್ನು ದೇಣಿಗೆ ನೀಡಿದ್ದು, ಎಲ್ಲಡೆ ಚರ್ಚೆಯಾಗುತ್ತಿದೆ.

ರಾಮಮಂದಿರಕ್ಕೆ ದೇಣಿಗೆಯಾಗಿ ದೇಶ ಮಾತ್ರವಲ್ಲದೇ ವಿದೇಶಗಳಿಂದ ದೇಣಿಗೆ ಹರಿದುಬರುತ್ತಿದೆ. ಕೇವಲ ಹಿಂದೂಗಳು ಮಾತ್ರವಲ್ಲದೇ ಮುಸ್ಲೀಂರೂ ಸಹ ದೇಣಿಗೆ ನೀಡುತ್ತಾ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇದೀಗ ಮುಸ್ಲಿಂ ರಾಮಭಕ್ತ ಜೈಲಿನಲ್ಲಿದ್ದು ಆತ ದುಡಿದ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಮುಸ್ಲಿಂ ರಾಮಭಕ್ತ ಫತೇಪುರ್‍ ಜೈಲಿನಲ್ಲಿದ್ದಾನೆ. ಆತನ ಹೆಸರು ಜಿಯಾವುಲ್ ಖಾನ್. ಜೈಲಿನಲ್ಲಿ ಸ್ವೀಪರ್‍ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಆತ ಮಾಡುವ ಕೆಲಸಕ್ಕೆ ದೇಣಿಗೆ ಸಹ ನೀಡಲಾಗುತ್ತದೆ. ಈ ಮುಸ್ಲಿಂ ಭಕ್ತ ತನ್ನ ಒಂದೂವರೆ ತಿಂಗಳ ಸಂಪಾದನೆಯನ್ನು ರಾಮಮಂದಿರಕ್ಕೆ ನೀಡಿದ್ದಾನೆ. ರಾಮಮಂದಿರ ಟ್ರಸ್ಟ್ ಗೆ 1075 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಕುರಿತು ರಾಮಮಂದಿರ ಟ್ರಸ್ಟ್ ನ ಕಚೇರಿಯ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾತನಾಡಿ, ಫತೇಪುರ್‍ ಜಿಲ್ಲೆಯಲ್ಲಿ ಝಿಯಾವುಲ್ ಹಸನ್ ಎಂಬ ಮುಸ್ಲಿಂ ಖೈದಿ ಜೈಲಿನಲ್ಲಿದ್ದಾನೆ. ಆತ ಜೈಲಿನಲ್ಲಿ ಕೆಲಸ ಮಾಡಿ ಗಳಿಸಿದ ಹಣವನ್ನು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ರಾಮಮಂದಿರ ಟ್ರಸ್ಟ್ ಹೆಸರಿನಲ್ಲಿ 1075 ರೂಪಾಯಿಯ ಚೆಕ್ ನೀಡಿದ್ದಾರೆ. ಇನ್ನೂ ಆತ ರಾಮನ ಭಕ್ತ ಎನ್ನುವುದಕ್ಕೆ ಪುರಾವೆ ಸಹ ನೀಡಿದ್ದಾನೆ. ನಾಲ್ಕೈದು ತಲೆಮಾರುಗಳ ಹಿಂದೆ ಎಲ್ಲಾ ಮುಸ್ಲಿಂರು ಹಿಂದೂಗಳಾಗಿದ್ದರು. ಒಬ್ಬ ವ್ಯಕ್ತಿ ತನ್ನ ಸ್ಥಾನವನ್ನು ತಿಳಿದಾಗ ಅವನು ದೇವರಿಗಾಗಿ ಏನಾದರೂ ಮಾಡಲು ಸಿದ್ದವಾಗಿರುತ್ತಾನೆ ಎಂದು ಹೇಳಿದ್ದಾರೆ.