ರಶ್ಮಿಕಾ ಮಂದಣ್ಣ ಜೊತೆಗಿನ ಅಫೈರ್ ಸುದ್ದಿಯ ಬಗ್ಗೆ ರಿಯಾಕ್ಟ್ ಆದ ಬೆಲ್ಲಂಕೊಂಡ ಶ್ರೀನಿವಾಸ್, ಅಫೈರ್ ಬಗ್ಗೆ ಆತ ಹೇಳಿದ್ದಿಷ್ಟು…..!

Follow Us :

ಮೊದಲನೇ ಸಿನೆಮಾದ ಮೂಲಕ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆ ಪಡೆದುಕೊಂಡ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಟಾಪ್ ಸ್ಥಾನದಲ್ಲಿರುತ್ತಾರೆ. ಇತ್ತೀಚಿಗೆ ರಶ್ಮಿಕಾ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಈ ಮೊದಲು ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಲವ್ ಟ್ರಾಕ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯೊಂದು ಸಹ ವೈರಲ್ ಆಗಿದ್ದು, ಇದೀಗ ಈ ಬಗ್ಗೆ ಬೆಲ್ಲಂಕೊಂಡ ಶ್ರೀನಿವಾಸ್ ರಿಯಾಕ್ಟ್ ಆಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಹಾಗೂ ಬೆಲ್ಲಕೊಂಡ ಶ್ರೀನಿವಾಸ್ ನಡುವೆ ಲವ್ ಟ್ರಾಕ್ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡಲು ಶುರುವಾಗಿತ್ತು. ಈ ರೂಮರ್‍ ಹರಿದಾಡಲು ಒಂದೆರಡು ಕಾರಣಗಳು ಸಹ ಇದೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಈ ರೂಮರ್‍ ಶುರುವಾಗಿತ್ತು. ಬಳಿಕ ವಿಮಾನ ನಿಲ್ದಾಣದಲ್ಲೂ ಸಹ ಒಂದೆರಡು ಬಾರಿ ಕಾಣಿಸಿಕೊಂಡಿದ್ದರು. ಇದರಿಂದಾಗಿ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡಲು ಶುರುವಾಗಿತ್ತು. ಇದೀಗ ಈ ರೂಮರ್‍ ಬಗ್ಗೆ ಬೆಲ್ಲಂ ಕೊಂಡ ಶ್ರೀನಿವಾಸ್ ರಿಯಾಕ್ಟ್ ಆಗಿದ್ದಾರೆ. ಸದ್ಯ ಹರಿದಾಡುತ್ತಿರುವ ರೂಮರ್‍ ಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ತಳ್ಳಿಹಾಕಿದ್ದಾರೆ.

ತಮ್ಮ ಬಗ್ಗೆ ಕೇಳಿಬರುತ್ತಿರುವ ಡೇಟಿಂಗ್ ರೂಮರ್‍ ಬಗ್ಗೆ ಸ್ಪಷ್ಟನೆ ನೀಡಿರುವ ಬೆಲ್ಲಂಕೊಂಡ ಶ್ರೀನಿವಾಸ್ ಸದ್ಯ ಕೇಳಿಬರುತ್ತಿರುವ ಈ ರೂಮರ್‍ ಶುದ್ದ ಸುಳ್ಳು. ನಿಜಕ್ಕೂ ನಾವು ಭೇಟಿಯಾಗೋದೆ ಕಡಿಮೆ. ನಾವಿಬ್ಬರೂ ಸ್ನೇಹಿತರಷ್ಟೆ. ನಾವಿಬ್ಬರೂ ಸಿನೆಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಗಾಗ ಒಟ್ಟಾಗಿ ಕಾಣಸಿಕೊಳ್ಳುತ್ತೇವೆ. ಹೈದರಾಬಾದ್ ನಿಂದ ಮುಂಬೈಗೆ ಹೋಗುತ್ತಿರುತ್ತೇವೆ. ಆ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಬೇಕಾಗುತ್ತದೆ. ಇಬ್ಬರೂ ಪಕ್ಕ ಪಕ್ಕ ಕಾಣಿಸಿಕೊಂಡರೇ ಅಂತಹ ರೂಮರ್‍ ಗಳನ್ನು ಹರಿಬಿಡುತ್ತಾರೆ. ರಶ್ಮಿಕಾ ಜೊತೆಗೆ ಸ್ನೇಹ ಸಂಬಂಧ ಬಿಟ್ಟರೇ ಬೇರೆ ಏನು ಇಲ್ಲ ಎಂದು ಹೇಳಿದ್ದಾರೆ.

ಸದ್ಯ ಬೆಲ್ಲಂಕೊಂಡ ಶ್ರೀನಿವಾಸ್ ತೆಲುಗಿನ ಚತ್ರಪತಿ ಸಿನೆಮಾದ ಹಿಂದಿ ರಿಮೇಕ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ವಿ.ವಿ.ವಿನಾಯಕ್ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಈ ಸಿನೆಮಾ ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಮೇ.12 ರಂದು ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದ ಪ್ರಮೊಷನ್ ಸಹ ಜೋರಾಗಿಯೇ ನಡೆಯುತ್ತಿದೆ. ಇನ್ನೂ ಇತ್ತಿಚಿಗಷ್ಟೆ ಈ ಸಿನೆಮಾದ ಟ್ರೈಲರ್‍ ಸಹ ರಿಲೀಸ್ ಆಗಿದ್ದು, ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ.