ನನಗೂ ಕುಟುಂಬ ಇದೆ, ಆ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ ಎಂದ ಅನಸೂಯ, ವೈರಲ್ ಆದ ಅನಸೂಯ ಕಾಮೆಂಟ್ಸ್…..!

Follow Us :

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡು ಸದ್ಯ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿರುವ ಅನಸೂಯ ಸದಾ ಒಂದಲ್ಲ ಒಂದು ರೀತಿಯ ವಿಚಾರಗಳಿಂದ ಸುದ್ದಿಯಲ್ಲೆ ಇರುತ್ತಾರೆ. ಅದರಲ್ಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ, ಆ ಟ್ರೋಲರ್‍ ಗಳಿಗೆ ತಕ್ಕ ಕೌಂಟರ್‍ ಸಹ ನೀಡುತ್ತಿರುತ್ತಾರೆ. ಇತ್ತೀಚಿಗೆ ವಿಜಯ್ ದೇವರಕೊಂಡ ಫ್ಯಾನ್ಸ್ ಹಾಗೂ ಅನಸೂಯ ನಡುವೆ ದೊಡ್ಡ ರದ್ದಾಂತವೇ ನಡೆದಿತ್ತು. ಇದೀಗ ಅನಸೂಯ ತನ್ನ ಟ್ವಿಟರ್‍ ಖಾತೆಯಲ್ಲಿ ಕಾಮೆಂಟ್ ಒಂದನ್ನು ಮಾಡಿದ್ದು, ಅದು ಸಖತ್ ವೈರಲ್ ಆಗುತ್ತಿದೆ.

ಕಿರುತೆರೆಯಿಂದ ದೂರವಾದ ಬಳಿಕ ಅನಸೂಯ ಸಿನೆಮಾಗಳು ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ಸ್ ನೀಡುವುದರ ಜೊತೆಗೆ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಪ್ರತಿನಿತ್ಯ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಜೊತೆಗೆ ಕೆಲವೊಂದು ಅನವಶ್ಯಕವಾದ ವಿಚಾರಗಳಲ್ಲೂ ಸಹ ಆಕೆ ತಲೆ ಹಾಕುತ್ತಾ ವಿವಾದಗಳಲ್ಲಿ ಸಿಲುಕುತ್ತಿರುತ್ತಾರೆ. ಆಕೆ ಕಾಮೆಂಟ್ ಗಳ ಮೂಲಕ ಸದಾ ಇಂಟರ್‍ ನೆಟ್ ನಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಇದೀಗ ಆಕೆ ಮತ್ತೊಮ್ಮೆ ಬಾಂಬ್ ನಂತಹ ಕಾಮೆಂಟ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಇದೀಗ ಹಾಟ್ ಟಾಪಿಕ್ ಆಗಿದೆ.

ನಟಿ ಅನಸೂಯ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ತನ್ನ ಮನದಲ್ಲಿರುವ ಮಾತುಗಳನ್ನು ಹೊರಹಾಕಿದ್ದಾರೆ. ಎಲ್ಲರಿಗೂ ನಮಸ್ಕಾರ, ನನ್ನಿಂದ ಒಂದು ಮನವಿ, ಕೆಲವು ದಿನಗಳಿಂದ ಅನೇಕ ಟ್ವೀಟ್ ಗಳು ಬರುತ್ತಿವೆ. ರಾಜಕೀಯ, ಸಿನಿರಂಗದಲ್ಲಿನ ಇತರರನ್ನು ಅಗೌರವ ಪಡಿಸಲು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಗೌರವದಿಂದ ಕೂಡಿದ ವಿಚಾರವಾಗಿದೆ. ಅಂತಹ ವಿಚಾರಗಳೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ನನ್ನಿಷ್ಟದಂತೆ ಬದುಕಲು ಪ್ರಯತ್ನ ಮಾಡುತ್ತಿದ್ದೇನೆ. ಇದನ್ನೇ ನಾನು ಕಲಿತಿರೋದು. ಆದ್ದರಿಂದ ಯಾರ ವಿಚಾರಕ್ಕೂ ನಾನು ಹೋಗುತ್ತಿಲ್ಲ. ನಿಮ್ಮೆಲ್ಲರಿಗೂ ಒಂದು ಮನವಿ, ನಾನು ಸೆಲ್ಫ್ ಮೇಡ್ ವುಮೆನ್, ಈ ವಿಚಾರದಲ್ಲಿ ನನ್ನನ್ನು ನಂಬಿ. ನನಗೆ ಪಿ.ಆರ್‍ ಟೀಂ ಇಲ್ಲ. ಅದಕ್ಕಾಗಿ ನಾನೆ ನಿಮಗೆ ಎಲ್ಲಾ ವಿಚಾರಗಳನ್ನು ಹೇಳುತ್ತಿದ್ದೇನೆ. ನನ್ನನ್ನು ಪ್ರೋತ್ಸಾಹಿಸುವುದು ನಿಮಗೆ ಇಷ್ಟವಾಗದೇ ಇದ್ದರೇ  ನನ್ನಿಂದ ದೂರವೇ ಇರಿ.

ಅಷ್ಟೇ ಆಗಲಿ ನನಗೆ ಸಂಬಂಧವಿಲ್ಲದ ವಿಚಾರಗಳಲ್ಲಿ ನನ್ನ ಹೆಸರು ತರಬೇಡಿ. ಪ್ಲೀಜ್ ನನಗೂ ಸಹ ಕುಟುಂಬ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಅನಸೂಯ ಟ್ವೀಟ್ ವೈರಲ್ ಆಗುತ್ತಿದೆ. ಇನ್ನೂ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಆಕ್ಟೀವ್ ಆಗಿದ್ದಾರೆ. ಆಕೆ ಕೊನೆಯದಾಗಿ ವಿಮಾನಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಪುಷ್ಪಾ-2 ಸಿನೆಮಾದಲ್ಲೂ ಸಹ ಅನಸೂಯ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.