ಆ ಪೋಸ್ಟ್ ಮೂಲಕ ವಿಚ್ಚೇದನದ ಬಗ್ಗೆ ಸ್ಪಷ್ಟನೆ ಕೊಟ್ರಾ ಕಲ್ಯಾಣ್ ದೇವ್, ವೈರಲ್ ಆದ ಪೋಸ್ಟ್…..!

ಸುಮಾರು ದಿನಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಆಕೆಯ ಪತಿ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟು ಇಬ್ಬರೂ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಚೇದನ ಸಹ ಪಡೆದುಕೊಳ್ಳಲಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದವು. ಆದರೆ…

ಸುಮಾರು ದಿನಗಳಿಂದ ಮೆಗಾಸ್ಟಾರ್‍ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಆಕೆಯ ಪತಿ ಕಲ್ಯಾಣ್ ದೇವ್ ನಡುವೆ ವಿಬೇದಗಳು ಏರ್ಪಟ್ಟು ಇಬ್ಬರೂ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಚೇದನ ಸಹ ಪಡೆದುಕೊಳ್ಳಲಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದವು. ಆದರೆ ಈ ಬಗ್ಗೆ ಮೆಗಾ ಫ್ಯಾಮಿಲಿ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಮೆಗಾ ಕುಟುಂಬದಿಂದ ಕಲ್ಯಾಣ್ ದೇವ್ ದೂರವೇ ಇದ್ದಾರೆ. ಆಗಾಗ ಅವರು ಸೋಷಿಯಲ್ ಮಿಡಿಯಾದಲ್ಲಿ ಮಾಡುವ ಪೋಸ್ಟ್ ಗಳು ಅವರ ವಿಚ್ಚೇದನದ ಸುದ್ದಿಗೆ ಮತಷ್ಟು ಬಲ ತಂದುಕೊಡುವಂತಿರುತ್ತವೆ. ಇದೀಗ ಕಲ್ಯಾಣ್ ದೇವ್ ಮತ್ತೊಂದು ಪೋಸ್ಟ್ ಮೂಲಕ ತಮ್ಮ ವಿಚ್ಚೇದನದ ಬಗ್ಗೆ ಸುಳಿವು ಕೊಟ್ರಾ ಎಂಬ ಅನುಮಾನಗಳು ಹುಟ್ಟುವಂತೆ ಮಾಡಿದ್ದಾರೆ.

ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ಇದೀಗ ಎರಡನೇ ಪತಿಗೆ ವಿಚ್ಚೇದನ ನೀಡಿದ್ದಾರೆ ಎಂಬ ಸುದ್ದಿಗಳು ಸುಮಾರು ದಿನಗಳಿಂದ ಕೇಳಿಬರುತ್ತಲೇ ಇದೆ. ಶ್ರೀಜಾ ತನ್ನ ಪತಿಯಿಂದ ದೂರವೇ ಇದ್ದಾರೆ. ಇಬ್ಬರೂ ಬೇರೆ ಬೇರೆಯಾಗಿದ್ದು, ಅವರಿಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಮೆಗಾ ಕುಟುಂಬದಿಂದ ಯಾವುದೇ ಸ್ಪಷ್ಟನೆ ಮಾತ್ರ ದೊರೆತಿಲ್ಲ. ಇನ್ನೂ ಶ್ರೀಜಾ ಪತಿಯಿಂದ ದೂರವಿದ್ದು, ಮಕ್ಕಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.  ಆದರೆ ಶ್ರೀಜಾ ಮಾತ್ರ ತಮ್ಮ ಮಕ್ಕಳನ್ನು ನೆನಪಿಸಿಕೊಂಡು ಆಗಾಗ ಎಮೋಷನಲ್ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಮಕ್ಕಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಆತ ಸದಾ ಪೊಸ್ಟ್ ಗಳ ಮೂಲಕ ಎಮೋಷನಲ್ ಆಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಆತ ಎಮೊಷನಲ್ ಪೋಸ್ಟ್ ಒಂದನ್ನು ಮಾಡಿದ್ದು, ಹಂಚಿಕೊಂಡಿದ್ದು, ಆ ಮೂಲಕ ವಿಚ್ಚೇದನಕ್ಕೆ ಪಕ್ಕಾ ಸುಳಿವು ಕೊಟ್ಟಂತಿದೆ ಎಂದು ಹೇಳಲಾಗುತ್ತಿದೆ.

ನಟ ಕಲ್ಯಾಣ್ ದೇವ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ವಾರದಲ್ಲಿ ನಾಲ್ಕು ಗಂಟೆಗಳು ಮಾತ್ರ ಸಂತೋಷದ ಕ್ಷಣಗಳು ಎಂದು ಪೋಸ್ಟ್ ಮಾಡಿದಾರೆ. ತನ್ನ ಮಗಳ ಪೊಟೋ ಶೇರ್‍ ಮಾಡಿ ವಾರದಲ್ಲಿ ನಾಲ್ಕು ಗಂಟೆಗಳ ಕಾಲ ಸಂತೋಷದ ಕ್ಷಣಗಳು ಎಂದು ಮಾಡಿದ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಇನ್ನೂ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಶ್ರೀಜಾ ಹಾಗೂ ಕಲ್ಯಾಣ್ ದೇವ್ ನಡುವೆ ಅಧಿಕೃತವಾಗಿ ವಿಚ್ಚೇದನ ಬಂದಂತಿದೆ ಎಂದು ಅರ್ಥವಾಗುತ್ತಿದೆ. ಸಾಮಾನ್ಯವಾಗಿ ಯಾರಾದರೂ ವಿಚ್ಚೇದನ ಪಡೆದುಕೊಂಡರೇ ಕೋರ್ಟ್ ಇಬ್ಬರ ವಾದಗಳನ್ನು ಕೇಳಿ ಅವರಿಗೆ ಮಕ್ಕಳಿದ್ದರೇ ಯಾರ ಬಳಿ ಇರಬೇಕು, ಎಷ್ಟು ಸಮಯ ಇರಬೇಕು ಎಂಬುದನ್ನು ಕೋರ್ಟ್ ನಿರ್ಧಾರ ಮಾಡುತ್ತೆ.

ಈ ಹಾದಿಯಲ್ಲೇ ಕಲ್ಯಾಣ್ ದೇವ್ ಸಹ ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೋರ್ಟ್ ಕಲ್ಯಾಣ್ ದೇವ್ ತನ್ನ ಮಗಳನ್ನು ಭೇಟಿ ಆಗಲು ನಾಲ್ಕು ಗಂಟೆ ಸಮಯ ನೀಡಿದ್ದಾರೆ. ಅವರ ವಿಚ್ಚೇದನ ಪಕ್ಕಾ ಆಗಿದೆ ಎಂಬೆಲ್ಲಾ ಮಾತುಗಳೂ ಸಹ ಕೇಳಿಬರುತ್ತಿವೆ. ಸದ್ಯ ಕಲ್ಯಾಣ್ ದೇವ್ ಹಂಚಿಕೊಂಡ ಪೋಸ್ಟ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಮೆಗಾ ಕುಟುಂಬದಿಂದ ಯಾವ ರೀತಿಯ ಸ್ಪಷ್ಟನೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.