Film News

ಟಾಲಿವುಡ್ ಯಂಗ್ ಹಿರೋ ರಾಣಾ ಕ್ಷಮೆ, ರಾಣಾ ನಾಯುಡು ಸಿರೀಸ್ ಗಾಗಿ ಕ್ಷಮೆ ಕೋರಿದ ನಟ…!

ಮಾ.10 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ ರಾಣಾ ನಾಯುಡು ಸಿರೀಸ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡರೂ ಸಹ ಭಾರಿ ವಿರೋಧವನ್ನು ಕಾಣುತ್ತಿದೆ. ಈ ಸಿರೀಸ್ ನಲ್ಲಿ ಪ್ರಮುಖ ಪಾತ್ರಗಳಲ್ಲಿ ತೆಲುಗು ಸೀನಿಯರ್‍ ನಟ ವಿಕ್ಟರಿ ವೆಂಕಟೇಶ್ ಹಾಗೂ ಯಂಗ್ ಹಿರೋ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿರೀಸ್ ಗಾಗಿ ಅಭಿಮಾನಿಗಳು ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರು. ಇನ್ನೂ ಈ ಸಿರೀಸ್ ಇದೀಗ ಸ್ಟ್ರೀಮಿಂಗ್ ಆಗುತ್ತಿದ್ದು, ತುಂಬಾ ವಿರೋಧವನ್ನು ಸಹ ಕಾಣುತ್ತಿದೆ.

ಈ ಸೀರಿಸ್ ನಲ್ಲಿ ಯಾವುದೇ ಸೆನ್ಸಾರ್‍ ಇಲ್ಲದಂತೆ ಅಸಭ್ಯಕರವಾದ ಮಾತುಗಳು, ಕೆಲವೊಂದು ದೃಶ್ಯಗಳು ಕ್ರೈಂ ದೃಶ್ಯಗಳು ಇದೆ. ಸಾಮಾನ್ಯವಾಗಿ ವೆಬ್ ಸಿರೀಸ್ ಗಳಿಗೆ ಸೆನ್ಸಾರ್‍ ನಿಂಬಂಧನೆಗಳು ಹೆಚ್ಚು ಇರುವುದಿಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ನ್ಯೂಡಿಟಿ ತುಂಬಾನೆ ಇರುತ್ತದೆ ಎನ್ನಬಹುದಾಗಿದೆ. ಈ ಹಾದಿಯಲ್ಲೇ ರಾಣಾ ನಾಯುಡು ಸಿರೀಸ್ ನಲ್ಲೂ ಸಹ ಅಸಭ್ಯಕರವಾದ ಮಾತುಗಳು, ಕೆಲವೊಂದು ದೃಶ್ಯಗಳು ಹೆಚ್ಚಾಗಿದೆ. ಈ ಕಾರಣದಿಂದ ವೆಂಕಟೇಶ್ ಹಾಗೂ ರಾಣಾ ಅಭಿಮಾನಿಗಳು ತುಂಬಾ ನಿರಾಸೆಯನ್ನು  ವ್ಯಕ್ತಪಡಿಸಿದ್ದರು. ಫ್ಯಾಮಿಲಿ ಕಥೆಗಳಿಗೆ ಹೆಚ್ಚು ಫೇಮಸ್ ಆದ ವೆಂಕಟೇಶ್ ಇದೀಗ ಇಂತಹ ಸೀರಿಸ್ ನಲ್ಲಿ ನಟಿಸಿದ್ದು ಅವರ ಅಭಿಮಾನಿಗಳಿಗೆ ಕೊಂಚವೂ ಇಷ್ಟವಾಗುತ್ತಿಲ್ಲ ಎಂದೇ ಹೇಳಬಹುದಾಗಿದೆ.

ಈ ಹಾದಿಯಲ್ಲೇ ರಾಣಾ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಕ್ಷಮೆ ಕೋರಿದ್ದಾರೆ. ಜೊತೆಗೆ ಈ ಸಿರೀಸ್ ಮೆಚ್ಚಿದ ಪ್ರೇಕ್ಷಕರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಸೀರಿಸ್ ಇಷ್ಟವಾಗದವರಿಗೂ ಸಹ ಹೃದಯಪೂರ್ವಕವಾಗಿ ಕ್ಷಮೆ ಕೋರಿದ್ದಾರೆ. ಇನ್ನೂ ಈ ಸಿರೀಸ್ ಮಾತ್ರ ಟಾಪ್-10 ಸಿರೀಸ್ ಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆಕ್ಷನ್ ಹಾಗೂ ಕ್ರೈಂ ಕಥೆಯನ್ನಾಧರಿಸಿ ಈ ಸಿರೀಸೆ ನಿರ್ಮಾಣ ಮಾಡಲಾಗಿದೆ. ಈ ಸಿರೀಸ್ ಹಾಲಿವುಡ್ ನ ರೆಡೊನೋವನ್ ಸಿರೀಸ್ ನ ರಿಮೇಕ್ ಆಗಿದೆ.ಈ ಸಿರೀಸ್ ಅನ್ನು ಕರಣ್ ಹಾಗೂ ಸುಪ್ರನ್ ವರ್ಮಾ ನಿರ್ದೇಶನ ಮಾಡಿದ್ದಾರೆ.

ಇನ್ನೂ ವಿಕ್ಟರಿ ವೆಂಕಟೇಶ್ ಹಿಟ್ ಸಿರೀಸ್ ಖ್ಯಾತಿಯ ಸೈಲೇಷ್ ಕೋಲನು ನಿರ್ದೇಶನದಲ್ಲಿ ಸೈಂಧವ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದ ಟೈಟಲ್ ಪೋಸ್ಟರ್‍ ಸಹ ರಿಲೀಸ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಸದ್ಯ ರಾಣಾ ನಾಯುಡು ಸಿರೀಸ್ ನಿಂದಾಗಿ ವೆಂಕಟೇಶ್ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ. ವೆಂಕಟೇಶ್ ರವರು ಅಂತಹ ಸೀರಿಸ್ ಗಳನ್ನು ಮಾಡಬಾರದು ಎಂಬ ಅಭಿಪ್ರಾಯಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top