Film News

ಅವರಿಂದಲೇ ಜಬರ್ದಸ್ತ್ ಶೋನಿಂದ ಹೊರಬಂದೆ ಎಂದ ಅನಸೂಯ, ಕೊನೆಗೂ ಸತ್ಯ ಹೊರಹಾಕಿದ ನಟಿ…..!

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನಸೂಯ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಅನಸೂಯ ಪೊಟೋಶೂಟ್ಸ್, ವೀಡಿಯೋಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಆಕೆಗೆ ಕ್ರೇಜ್ ತಂದುಕೊಟ್ಟ ಜಬರ್ದಸ್ತ್ ಶೋ ನಿಂದ ಆಕೆ ಹೊರಬಂದಿದ್ದು ಯಾಕೆ ಎಂಬ ಸತ್ಯಾಂಶವನ್ನು ಹೊರಹಾಕಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ಜಬರ್ದಸ್ತ್ ಎಂದರೇ ಅನಸೂಯ ಎಂದೇ ಹೇಳಲಾಗುತ್ತಿದ್ದು, ಆಕೆಗಾಗಿಯೇ ಅನೇಕರು ಈ ಶೋ ನೋಡುತ್ತಿದ್ದರು ಎನ್ನಲಾಗುತ್ತಿತ್ತು. ಈ ಶೋ ಮೂಲಕ ಅನಸೂಯ ತುಂಬಾನೆ ಕ್ರೇಜ್ ಪಡೆದುಕೊಂಡರು. ಆದರೆ ಅನೂಹ್ಯವಾಗಿ ಅನಸೂಯ ಈ ಶೋನಿಂದ ಹೊರಬಂದರು. ವೈಯುಕ್ತಿಕ ಕಾರಣಗಳಿಂದ ತಾನು ಜಬರ್ದಸ್ತ್ ಶೋನಿಂದ ಹೊರಬಂದಿದ್ದಾಗಿ ಹೇಳಲಾಗಿತ್ತು. ಅನಸೂಯ ಹೊರಬಂದ ಬಳಿಕ ರಶ್ಮಿಗೆ ಚಾನ್ಸ್ ದೊರೆತಿತ್ತು. ಆಕೆಗೂ ಸಹ ಜಬರ್ದಸ್ತ್ ಶೋ ತುಂಬಾನೆ ಹೆಸರು ತಂದುಕೊಟ್ಟಿತ್ತು. ಬಳಿಕ ಮತ್ತೆ ಜಬರ್ದಸ್ತ್ ಹಾಗೂ ಎಕ್ಸ್ಟಾ ಜಬರ್ದಸ್ತ್ ಅಂತಾ ಎರಡು ಶೋಗಳನ್ನು ಮಾಡಿದರು. ಅನಸೂಯ ಮತ್ತೆ ರೀ ಎಂಟ್ರಿ ಮಾಡಿದ್ದರು. ಅನಸೂಯ ಶಾರ್ಟ್ ಬಟ್ಟೆಗಳನ್ನು ಧರಿಸಿ ಹಾಟ್ ಆಂಕರ್‍ ಆಗಿ ಫೇಮಸ್ ಆದರು. ಇನ್ನೂ ಅನಸೂಯ ಧರಿಸುವ ಬಟ್ಟೆಗಳ ಕಾರಣದಿಂದ ಟ್ರೋಲ್ ಸಹ ಆಗುತ್ತಿದ್ದರು. ಅದಕ್ಕೆ ಆಕೆ ಕೌಂಟರ್‍ ಸಹ ಕೊಡುತ್ತಿದ್ದರು.

ಆದರೆ ಆಕೆ 2022 ರಲ್ಲಿ ಜಬರ್ದಸ್ತ್ ಗೆ ಗುಡ್ ಬೈ ಹೇಳಿದ್ದರು. ಆಕೆ ಈ ಶೋನಿಂದ ಹೊರಬಂದಿದ್ದಾದರೂ ಏಕೆ ಎಂಬುದರ ಬಗ್ಗೆ ಮಾತ್ರ ತಿಳಿದಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅನಸೂಯ ಜಬರ್ದಸ್ತ್ ಶೋನಿಂದ ಹೊರಬಂದಿದ್ದು ಯಾಕೆ ಎಂಬ ಸತ್ಯಾಂಶವನ್ನು ಹೊರಹಾಕಿದ್ದಾರೆ. ಸಂದರ್ಶನದಲ್ಲಿ ಆಂಕರ್‍ ಜಬರ್ದಸ್ತ್ ಶೋನಿಂದ ನೀವೆ ಹೊರಹೋದ್ರಾ ಅಥವಾ ಇಲ್ಲಾ ಅವರೇ ತೆಗೆದು ಹಾಕಿದ್ರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅನಸೂಯ, ನನ್ನನ್ನು ಯಾರಾದರೂ ತೆಗೆದು ಹಾಕುತ್ತಾರೆಯೇ? ನಾನೇ ಶೋ ನಿಂದ ಹೊರಬಂದೆ. ಅದಕ್ಕೆ ಕಾರಣ ಆ ಸಮಯದಲ್ಲಿ ನಾನು ಮೂರು ತೆಲುಗು ಹಾಗೂ ಮೂರು ತಮಿಳು ಸಿನೆಮಾಗಳಲ್ಲಿ ನಟಿಸುತ್ತಿದೆ. ಬ್ಯುಸಿ ಶೆಡ್ಯೂಲ್ಡ್ ಕಾರಣದಿಂದ ಹಾಗೂ ನನ್ನಿಂದ ಬೇರೆ ಕಮೆಡಿಯನ್ಸ್ ಸಹ ಸಮಸ್ಯೆಗೆ ಸಿಲುಕಿಕೊಂಡಿದ್ದರು. ನನ್ನಿಂದ ಯಾರೂ ಸಮಸ್ಯೆಗೆ ಸಿಲುಕಿಕೊಳ್ಳಬಾರದೆಂದು ಜಬರ್ದಸ್ತ್ ಬಿಟ್ಟುಬಿಟ್ಟೆ ಎಂದು ಹೇಳಿದ್ದಾರೆ.

ಅಷ್ಟೇಅಲ್ಲದೇ ನನಗೂ ಹಾಗೂ ಮಲ್ಲೆಮಾಲ ಸಂಸ್ಥೆಯೊಂದಿಗೆ ಒಳ್ಳೆಯ ರಿಲೇಷನ್ ಶಿಪ್ ಇದೆ. ಈಗಲೂ ಕೆಲವೊಂದು ಈವೆಂಟ್ ಗಳ ಬಗ್ಗೆ ಮಾತನಾಡಿಕೊಳ್ಳುತ್ತಿರುತ್ತೇವ. ನಟಿಯಾಗಿ ಬ್ಯುಸಿಯಿರುವ ಕಾರಣದಿಂದಲೇ ಜಬರ್ದಸ್ತ್ ಬಿಟ್ಟುಬಿಟ್ಟೆ ಎಂದು ಹೇಳಿದ್ದಾರೆ. ಈ ಹಿಂದೆ ಅನಸೂಯ ಜಬರ್ದಸ್ತ್ ಕಮೆಡಿಯನ್ಸ್ ನನ್ನ ಬಗ್ಗೆ ಬಾಡಿ ಶೇಮಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು ಅದಕ್ಕಾಗಿಯೇ ನಾನು ಶೋನಿಂದ ಹೊರಬಂದೆ ಎಂದು ಹೇಳಿದ್ದರು.

Most Popular

To Top