Film News

ಬಾಡಿ ಶೇಮಿಂಗ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸೀನಿಯರ್ ನಟಿ ಪ್ರಿಯಾಮಣಿ, ಇಂಟ್ರಸ್ಟಿಂಗ್ ಕಾಮೆಂಟ್ಸ್ ವೈರಲ್…..!

ಬಣ್ಣದ ಲೋಕದಲ್ಲಿ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ತೆರೆಕಂಡ ಬ್ಲಾಕ್ ಬ್ಲಸ್ಟರ್‍ ಜವಾನ್ ಸಿನೆಮಾದಲ್ಲಿ ಸಹ ಪ್ರಿಯಮಣಿ ನಟಿಸಿ ಫೇಂ ಪಡೆದುಕೊಂಡರು. ಇದೀಗ ಆಕೆ ಬಾಡಿ ಶೆಮಿಂಗ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಹೆಚ್ಚಾಗಿ ಬಾಡಿ ಶೇಮಿಂಗ್ ಕುರಿತು ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ. ಕಲರ್‍, ದೇಹದ ಅಂಗಾಗಗಳ ಕುರಿತು ನಟಿಯರು ವಿಮರ್ಶೆಗೆ ಗುರಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‍ ನಟಿಯರು ಸಹ ಬಾಡಿ ಶೇಮಿಂಗ್ ಗೆ ಗುರಿಯಾಗಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಹಿರೋಯಿನ್ ಗಳ ಬಗ್ಗೆ ಬಾಡಿ ಶೇಮಿಂಗ್ ಕುರಿತು ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಈ ಕಾರಣದಿಂದ ಅನೇಕ ನಟಿಯರು ಟ್ರೋಲ್ ಆಗಿದ್ದ ಉದಾಹರಣೆಗಳೂ ಸಹ ಇದೆ. ಇದೀಗ ಪ್ರಿಯಮಣಿ ಈ ಕುರಿತು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾದ ಪ್ರಿಯಾಮಣಿ ಜಿರೋ ಸೈಜ್ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಕೆ ಬಾಲಿವುಡ್ ಹಾಗೂ ಸೌತ್ ಸಿನಿರಂಗದ ಬಗ್ಗೆ ಸಹ ಮಾತನಾಡಿದ್ದಾರೆ.

ಇನ್ನೂ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಮಣಿ ಬಾಲಿವುಡ್ ನಲ್ಲಿ ಹೆಚ್ಚಾಗಿ ಗ್ಲಾಮರ್‍ ಗೆ ಪ್ರಾಧಾನ್ಯತೆ ಇರುತ್ತದೆ. ಆದರೆ ಮಲಯಾಳಂ ಸೇರಿ ದಕ್ಷಿಣದಲ್ಲಿ ಗ್ಲಾಮರ್‍ ಗಿಂತ ನಟನೆಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ ಎಂದಿದ್ದಾರೆ. ಚೆನ್ನಾಗಿ ಕಾಣಿಸಿಕೊಳ್ಳಲು ಏನು ಮಾಡಬೇಕು ಎಂಬುದು ಅದು ನಿಮ್ಮ ವೈಯುಕ್ತಿಕ ಆಯಕೆ. ನಾನು ಇರುವ ಪರಿಶ್ರಮದಲ್ಲಿ ಇಂತಹವು ನಡೆಯುತ್ತಲೇ ಇರುತ್ತದೆ. ಸೌತ್ ನಲ್ಲಿ ಜಿರೋ ಸೈಜ್ ಇರಬೇಕೆಂದು ಯಾರು ಹೇಳಲಿಲ್ಲ. ನಮ್ಮ ನಟಿಯರು ಈಗ ತುಂಬಾ ಫಿಟ್ ಆಗಿದ್ದಾರೆ. ಅವರು ಏನು ತಿನ್ನುತ್ತಾರೆ, ಹೇಗೆ ಕಾಣಿಸುತ್ತಾರೆ ಎಂಬುದರ ಬಗ್ಗೆ ಕ್ಲಾರಿಟಿ ಕೊಟ್ಟರು. ಆದರೆ ಈ ಹಿಂದೆ ಎಲ್ಲಾ ಕ್ಲಾರಿಟಿ ಇರುವಂತಹ ನಟಿಯರು ತುಂಬಾನೆ ಕಡಿಮೆ. ಏನು ಬೇಕೋ ಅದು ತಿನ್ನುತ್ತಿದ್ದರು. ಸದ್ಯ ಸೈಜ್ ಜಿರೋ ಎಂಬುದು ಹೆಚ್ಚಾಗಿ ಚರ್ಚನೀಯವಾದ ವಿಚಾರವಾಗಿದೆ ಎಂದಿದ್ದಾರೆ.

ತಾನು ಮುಸ್ಲೀಂ ವ್ಯಕ್ತಿಯನ್ನು ಮದುವೆಯಾಗಿದ್ದ ಕಾರಣದಿಂದ ಅನೇಕರು ವಿಮರ್ಶೆ ಮಾಡಿದ್ದರು. ಆದರೆ ಈ ಎಲ್ಲಾ ವಿಮರ್ಶೆಗಳಿಗೆ ತನ್ನ ಪತಿ ಬೆಂಬಲವಾಗಿ ನಿಂತರು. ಜೊತೆಗೆ ಸಿನೆಮಾ ಮಾಡೋಕೆ ಪತಿಯಿಂದಲೂ ಸಹ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಇತ್ತೀಚಿಗೆ ಆಕೆ ಮೈದಾನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

Most Popular

To Top