ನಡುರಾತ್ರಿಯವರೆಗೂ ಶೂಟಿಂಗ್ ನಲ್ಲಿ ಬ್ಯುಸಿ, ನಿದ್ದೆಯಿಲ್ಲದೇ ಸುಸ್ತಾದ ಅನಸೂಯ, ವೈರಲ್ ಆದ ಇನ್ಸ್ಟಾ ಸ್ಟೋರಿ….!

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ಹಾಟ್ ಆಂಕರ್‍ ಅನಸೂಯ ಸದ್ಯ ಕಿರುತೆರೆಗೆ ಗುಡ್ ಬೈ ಹೇಳಿ ಸಿನೆಮಾಗಳಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಸದ್ಯ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿರುವ ಅನಸೂಯ ಕೊನೆಯದಾಗಿ ವಿಮಾನಂ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಆಕೆ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ನಿದ್ದೆಯಿಲ್ಲದೇ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಹಂಚಿಕೊಂಡ ಇನ್ಸ್ಟಾ ಸ್ಟೋರಿ ಮೂಲಕ ತನ್ನ ನೋವುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಪುಷ್ಪಾ-2 ಸಿನೆಮಾದ ಮೇಳೆ ನಟಿ ಅನಸೂಯ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸುಮಾರು ದಿನಗಳಿಂದ ಈ ಸಿನೆಮಾದ ಶೂಟಿಂಗ್ ನಡೆಯುತ್ತಿದೆ. ಹೈದರಾಬಾದ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ದಿನಗಳಿಂದ ಶೂಟಿಂಗ್ ನಡೆಯುತ್ತಿದೆ. ಈಗಾಗಲೇ ತುಂಬಾ ತಡವಾಗಿಯೇ ಈ ಸಿನೆಮಾದ ಶೂಟಿಂಗ್ ಆರಂಭವಾದ ಹಿನ್ನೆಲೆಯಲ್ಲಿ ಮೇಕರ್ಸ್ ಗ್ಯಾಪ್ ಇಲ್ಲದೇ ಶೂಟೀಂಗ್ ಮಾಡುತ್ತಿದ್ದಾರೆ. ಪುಷ್ಪಾ-2 ಸಿನೆಮಾದ ಶೂಟಿಂಗ್ ರಾತ್ರಿ ವೇಳೆಯಲ್ಲೇ ಹೆಚ್ಚಾಗಿ ನಡೆಯುತ್ತಿದೆಯಂತೆ. ಕೆಲವು ದಿನಗಳ ಹಿಂದೆಯಷ್ಟೆ ಅನಸೂಯ ಸಹ ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಈ ವಿಚಾರವನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಜೊತೆಗೆ ಆಕೆ ಶೂಟಿಂಗ್ ವೇಳೆ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬ ವಿಚಾರವನ್ನು ಸಹ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ನಟಿ ಅನಸೂಯ ಪುಷ್ಪಾ ಸಿನೆಮಾದಲ್ಲಿ ಸುನೀಲ್ ಪತ್ನಿಯಾಗಿ ದಾಕ್ಷಾಯಣಿ ಎಂಬ ನೆಗೆಟೀವ್ ಪಾತ್ರವನ್ನು ಪೋಷಣೆ ಮಾಡಿದ್ದರು. ಇದೀಗ ಪುಷ್ಪಾ-2 ನಲ್ಲೂ ಸಹ ಅನಸೂಯ ಪಾತ್ರ ಮುಂದುವರೆಯಲಿದೆ. ಮೊದಲ ಭಾಗಕ್ಕಿಂತಲೂ ಎರಡನೇ ಭಾಗದಲ್ಲಿ ಅನಸೂಯ ಪಾತ್ರ ಮತಷ್ಟು ಖಡಕ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಆಕೆಯ ಪಾತ್ರ ಪ್ರಮುಖವಾಗಿರುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಅನಸೂಯ ಹಂಚಿಕೊಂಡ ಲೇಟೆಸ್ಟ್ ಪೊಟೋದಲ್ಲೂ ಸಹ ಆಕೆ ದಾಕ್ಷಾಯಣಿಯಂತೆ ಕಾಣಿಸಿಕೊಂಡಿದ್ದಾರೆ. 3.16 ರಾತ್ರಿ ಸಮಯದಲ್ಲಿ ಆಕೆ ಪೊಟೋ ಒಂದನ್ನು ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅನಸೂಯ ಸುಸ್ತಾಗಿ ಕಾಣಿಸಿಕೊಂಡಿದ್ದಾರೆ. ನೈಟ್ ಶೂಟಿಂಗ್ ನಿಂದ ಆಕೆ ತುಂಬಾ ಸುಸ್ತಾಗಿದ್ದು, ನಿದ್ದೆ ಸಹ ಇಲ್ಲ ಎಂಬ ವಿಚಾರವನ್ನು ಈ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಇನ್ನೂ ಅನಸೂಯ ಹಂಚಿಕೊಂಡ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಭಿನ್ನ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನಸೂಯ ನೋಡಿ ಹೇಗಾಗಿದ್ದಾಳೆ, ನಿದ್ದೆಯಿಲ್ಲದೇ ಸುಸ್ತಾಗಿದ್ದಾಳೆ ಪಾಪ. ಸೌಂದರ್ಯವತಿ ಅನಸೂಯ ಬಾಡಿ ಹೋಗಿದ್ದಾಳೆ, ಸುಕುಮಾರ್‍ ನಿಮಗೆ ಇದು ನ್ಯಾಯವೇ ಎಂದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಅನಸೂಯ ಕೊನೆಯದಾಗಿ ವಿಮಾನಂ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಆಕೆಯ ಕೈಯಲ್ಲಿ ಸಿಂಬಾ ಎಂಬ ತಮಿಳು ಸಿನೆಮಾದ ಜೊತೆಗೆ ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿವೆ.