Film News

ರಾತ್ರಿ ಮಲಗೋದು ಅದಕ್ಕಾಗಿಯೇ ಎಂದ ಅನಸೂಯ, ಶಾಕಿಂಗ್ ಕಾಮೆಂಟ್ಸ್ ವೈರಲ್……!

ತೆಲುಗು ಸಿನಿರಂಗದ ಸ್ಟಾರ್‍ ಬ್ಯೂಟಿ ಅನಸೂಯ ಭಾರದ್ವಾಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇರುವಂತಹ ಅನಸೂಯ ಇದೀಗ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಅನಸೂಯರವರ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅನಸೂಯ ಮಾಡಿದ ಕಾಮೆಂಟ್ಸ್ ಆದರೂ ಏನು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗದಲ್ಲಿ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ನಟಿಯರ ಸಾಲಿಗೆ ಅನಸೂಯ ಭಾರದ್ವಾಜ್ ಸಹ ಸೇರುತ್ತಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಕಿರುತೆರೆಯಿಂದ ದೂರವುಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಅನಸೂಯ ಪ್ರತಿನಿತ್ಯ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತನ್ನ ವೈಯುಕ್ತಿಕ ವಿಚಾರಗಳು, ಸಿನೆಮಾ ಅಪ್ಡೇಟ್ ಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಂದು ಪೋಸ್ಟ್ ಮೂಲಕ ಸದ್ದು ಮಾಡಿದ್ದಾರೆ.

ಇನ್ನೂ ವೀಕೆಂಡ್ ಸಖತ್ ಎಂಜಾಯ್ ಮಾಡುತ್ತಿರುವ ಅನಸೂಯ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ತನ್ನ ದಿನಚರಿ ಹೇಗೆ ಆರಂಭವಾಯ್ತು ಎಂಬುದನ್ನು ಹೇಳುತ್ತಾ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಮುಂಜಾನೆ ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಮಾಡಿದ್ದೇನೆ, ನಿದ್ದೆಯೆಂದರೇ ನನಗೆ ತುಂಬಾ ಇಷ್ಟ. ಪ್ರತಿ ನಿತ್ಯ ರಾತ್ರಿ ನಾನು ನಿದ್ದೆ ಹೋಗುವುದು ಮುಂಜಾನೆಯ ಬ್ರೇಕ್ ಫಾಸ್ಟ್ ಮಾಡಲು ಎಂದು ಮುಂಜಾನೆಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಈ ಪೊಟೋಗಳು ಹಾಗೂ ಕಾಮೆಂಟ್ಸ್ ವೈರಲ್ ಆಗುತ್ತಿವೆ. ಇನ್ನೂ ಅಭಿಮಾನಿಗಳು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಅನಸೂಯ ಕೊನೆಯದಾಗಿ ವಿಮಾನಂ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಅನಸೂಯ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅನಸೂಯ ಅಲ್ಲು ಅರ್ಜುನ್ ಸುಕುಮಾರ್‍ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಮೇಲೆ ಅಸನೂಯ ಸಹ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top