Film News

ನಿಹಾರಿಕಾ ಮತ್ತೆ ಮದುವೆಗೆ ಸಿದ್ದವಾಗುತ್ತಿದ್ದಾರಂತೆ, ವೈರಲ್ ಆದ ಹೊಸ ರೂಮರ್…..!

ಟಾಲಿವುಡ್ ಸಿನಿರಂಗದ ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಆಕೆಯ ಪತಿ ಚೈತನ್ಯ ಜೊನ್ನಲಗಡ್ಡ ರಿಂದ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆಂದು ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಲೇ ಇದ್ದು, ಕೆಲವು ದಿನಗಳ ಹಿಂದೆಯಷ್ಟೆ ಅಧಿಕೃತವಾಗಿ ಈ ವಿಚಾರ ಹೊರಬಂದಿದೆ. ಈ ಬಗ್ಗೆ ನಿಹಾರಿಕಾ ರವರೇ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ತಿಳಿಸಿದ್ದಾರೆ. ಇದೀಗ ನಿಹಾರಿಕಾ ಮತ್ತೆ ಮದುವೆಗೆ ಸಿದ್ದವಾಗಿದ್ದಾರೆಂಬ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

ಮೆಗಾಸ್ಟಾರ್‍ ಚಿರಂಜೀವಿ ಸಹೋದರ ನಾಗಬಾಬು ರವರ ಪುತ್ರಿ ನಿಹಾರಿಕಾ ಸಿನೆಮಾಗಳಲ್ಲಿ ನಟಿಯಾಗಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದರು. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ಸಹ ನಿಹಾರಿಕಾ ನಟಿಸಿದ್ದಾರೆ. ಆದರೆ ಆ ಸಿನೆಮಾಗಳು ಆಕೆಗೆ ನಿರಾಸೆಯನ್ನು ತಂದುಕೊಟ್ಟಿತ್ತು. ಬಳಿಕ ಆಕೆ ಚೈತನ್ಯ ಜೊನ್ನಲಗಡ್ಡ ಎಂಬಾತನೊಂದಿಗೆ ವಿವಾಹವಾದರು. ಅವರ ಮದುವೆ ರಾಜಸ್ಥಾನದ ಜೈಪುರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿ ವೆಬ್ ಸಿರೀಸ್ ಗಳ ಮೂಲಕ ನಿರ್ಮಾಪಕಿಯಾದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಹೈದರಾಬಾದ್ ನಲ್ಲಿ ಪಿಂಕ್ ಎಲಿಫೆಂಟಾ ಎಂಬ ಪ್ರೊಡಕ್ಷನ್ ಹೌಸ್ ಕಛೇರಿಯನ್ನು ಸಹ ಆರಂಭಿಸಿದ್ದರು. ಕೊನೆಯದಾಗಿ ಆಕೆ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದರು.

ಇನ್ನೂ ನಿಹಾರಿಕಾ ಹಾಗೂ ಚೈತನ್ಯ ನಡುವೆ ಕೆಲವೊಂದು ವಿಬೇದಗಳು ಹುಟ್ಟಿಕೊಂಡಿದ್ದು, ಅವರಿಬ್ಬರೂ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಇಬ್ಬರೂ ತಮ್ಮ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಪೊಟೋಗಳನ್ನು ಸಹ ಡಿಲೀಟ್ ಮಾಡಿಕೊಂಡರು. ಕೆಲವೊಂದು ಕಾರಣಗಳಿಂದ ಅವರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿತ್ತು. ಆದರೆ ಕಳೆದ ಮೆ.19 ರಂದು ಅವರಿಗೆ ನ್ಯಾಯಲಯದಲ್ಲಿ ಡಿವೋರ್ಸ್ ಸಹ ಮಂಜೂರಾಗಿದೆ. ಇನ್ನೂ ಈ ಬಗ್ಗೆ ತಾವಿಬ್ಬರೂ ತಮ್ಮಿಚ್ಚೆಯಂತೆ ವಿಚ್ಚೇದನ ಪಡೆದುಕೊಂಡಿದ್ದಾಗಿ ನಿಹಾರಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ನೋಟ್ ಒಂದನ್ನು ಹಂಚಿಕೊಂಡಿದ್ದರು. ಇದೀಗ ನಿಹಾರಿಕಾ ಮತ್ತೆ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನೂ ನಿಹಾರಿಕಾ ಇದೀಗ ಯೂಟ್ಯೂಬರ್‍ ಒಬ್ಬರನ್ನು ಮದುವೆಯಾಗಲಿದ್ದಾರಂತೆ. ಆತ ನಿಹಾರಿಕಾ ಗೆ ಒಳ್ಳೆಯ ಸ್ನೇಹಿತನಂತೆ. ಆತನೊಂದಿಗೆ ಮದುವೆಯಾಗಲಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬ ವಿಚಾರ ಒಂದು ಕಡೆಯಾದರೇ, ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಬಗ್ಗೆ ನಿಹಾರಿಕಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

Most Popular

To Top