ತಾಯಿಯಾಗುತ್ತಿದ್ದಾರೆ ಡಸ್ಕಿ ಬ್ಯೂಟಿ ಅಮಲಾಪಾಲ್, ನಾವು ಇಬ್ಬರು, ಮೂವರು ಆಗುತ್ತಿದ್ದೇವೆ ಎಂದ ನಟಿ…..!

Follow Us :

ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಅಮಲಾಪಾಲ್ ರವರ ಬಗ್ಗೆ ಹೆಚ್ಚು ಪರಿಚಯದ ಅವಶ್ಯಕತೆಯಿಲ್ಲ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಕಳೆದ ನವೆಂಬರ್‍ ಮಾಹೆಯಲ್ಲಿ ಅಮಲಾಪಾಲ್ ಜಗತ್ ದೇಸಾಯಿ ಎಂಬಾತನೊಂದಿಗೆ ಮದುವೆಯಾದರು. ಇದೀಗ ಆಕೆ ಗರ್ಭಿಣಿಯಾಗಿದ್ದು, ಈ ಸಂತಸವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಡಸ್ಕಿ ಬ್ಯೂಟಿ ಅಮಲಾಪಾಲ್ ತಾಯಿಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸುದ್ದಿಯನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ನವೆಂಬರ್‍ ಮಾಹೆಯಲ್ಲಿ ಅಮಲಾಪಾಲ್ ಹಾಗೂ ಜಗತ್ ದೇಸಾಯಿ ಮದುವೆ ನಡೆಯಿತು. ಕೇರಳದ ಕೊಚ್ಚಿಯಲ್ಲಿ ಈ ಜೋಡಿಯ ಮದುವೆ ನೆರವೇರಿತು. ಅಮಲಾಪಾಲ್ ಈ ಹಿಂದೆ ತಮಿಳು ನಿರ್ದೇಶಕ ಎ.ಎಲ್.ವಿಜಯ್ ಜೊತೆಗೆ ಮದುವೆಯಾಗಿದ್ದರು. 2014 ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ಇದಾದ ಬಳಿಕ ಸುಮಾರು ದಿನಗಳ ಕಾಲ ಒಂಟಿಯಾಗಿದ್ದ ಅಮಲಾಪಾಲ್ ತನ್ನ ಬಾಯ್ ಫ್ರೆಂಡ್ ಜಗತ್ ದೇಸಾಯಿ ಎಂಬಾತನನ್ನು ವಿವಾಹವಾದರು. ಈ ಜೋಡಿಯ ಮದುವೆಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಸದ್ಯ ಅಮಲಾಪಾಲ್ ಹಾಗೂ ಜಗತ್ ಪೋಷಕರಾಗುತ್ತಿದ್ದಾರೆ. ಅಮಲಾಪಾಲ್ ಇದೀಗ ತನ್ನ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸುದ್ದಿಯನ್ನು ಅಮಲಾಪಾಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾವಿಬ್ಬರು ಮೂವರಾಗುತ್ತಿದ್ದೇವೆ ಎಂದು ಆಕೆ ಕ್ಯಾಪ್ಷನ್ ಹಾಕಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಎಲ್ಲರೂ ಶುಭಾಷಯಗಳನ್ನು ಕೋರುತ್ತಿದ್ದಾರೆ. ಅಮಲಾಪಾಲ್ ರವರಿಗೆ ಇದು ಎರಡನೇ ಮದುವೆಯಾಗಿದ್ದು, ಆಕೆ ತಾಯಿಯಾಗಿರಲಿಲ್ಲ. ಸದ್ಯ ಆಕೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನೂ ನಟಿ ಅಮಲಾಪಾಲ್ ಕಳೆದ 2009 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕೇರಳ ಮೂಲದ ನಟಿಯಾದ ಅಮಲಾಪಾಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಕೆಲವೊಂದು ವೆಬ್ ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ತುಂಬಾನೆ ಬೋಲ್ಡ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.