Film News

ಮ್ಯಾಕ್ಸ್ ಸಿನೆಮಾದ ಕ್ಲೈಮ್ಯಾಕ್ಸ್ ಲುಕ್ ಹೇಗಿದೆ ಎಂದ ಕಿಚ್ಚ, ವೈರಲ್ ಆದ ರಗಡ್ ಪೊಟೋ…..!

ಕನ್ನಡದ ಸ್ಟಾರ್‍ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಕನ್ನಡ ಸಿನೆಮಾಗಳಲ್ಲಿ ಮಾತ್ರವಲ್ಲದೇ ಪರಭಾಷಾ ಸಿನೆಮಾಗಳಲ್ಲೂ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಕೆಲವೊಂದು ಪ್ಯಾನ್ ಇಂಡಿಯಾ ಸಿನೆಮಾದಲ್ಲೂ ನಟಿಸಿ ಫ್ಯಾನ್ ಇಂಡಿಯಾ ನಟನಾಗಿದ್ದಾರೆ. ಸದ್ಯ ಸುದೀಪ್ ರವರು ಮ್ಯಾಕ್ಸ್ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಮೇಲೆ ಸಿನಿಪ್ರಿಯರು ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಈ ಸಿನೆಮಾದ ಪೊಟೋ ಒಂದು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಬಗ್ಗೆ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಪ್ರತಿನಿತ್ಯ ಸೋಷಿಯಲ್ ಮಿಡಿಯಾದಲ್ಲೂ ಮ್ಯಾಕ್ಸ್ ಸಿನೆಮಾದ ಬಗ್ಗೆ ಒಂದಲ್ಲ ಒಂದು ಸುದ್ದಿ ಕೇಳಿಬರುತ್ತಲೇ ಇದೆ. ಸ್ಯಾಂಡಲ್ ವುಡ್ ನಲ್ಲಿ ಮ್ಯಾಕ್ಸ್ ಸಿನೆಮಾ ಭಾರಿ ನಿರೀಕ್ಷೆಯನ್ನು ಮೂಡಿಸಿದೆ. ಇದೀಗ ಕಿಚ್ಚ ಸುದೀಪ್ ರವರ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ರವರ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ರಗಡ್ ಪೊಟೋ ಒಂದು ಹಂಚಿಕೊಂಡಿದ್ದಾರೆ. ಹೇಗಿದೆ “Maxxxx” climaxx ಲುಕ್? ಅನ್ನೋ ಸಾಲುಗಳನ್ನ ಬರೆದು ಸುದೀಪ್ ಪೊಟೋ ಒಂದು ಹಂಚಿಕೊಳ್ಳಲಾಗಿದೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನೆಮಾದ ಹೊಸ ಪೊಟೋ ಒಂದನ್ನು ಕಿಚ್ಚ ಕ್ರಿಯೇಷನ್ ಎಂಬ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೊಟೋಗೆ “ಹೇಗಿದೆ “Maxxxx” climaxx ಲುಕ್?” ಎಂದು ಕ್ಯಾಪ್ಷನ್ ಹಾಕಲಾಗಿದೆ. ಆ ಮೂಲಕ ಮ್ಯಾಕ್ಸ್ ಸಿನೆಮಾದ ಕ್ಲೈಮ್ಯಾಕ್ಸ್ ನಲ್ಲಿ ಸುದೀಪ್ ಈ ಮಾದರಿಯಲ್ಲಿ ಕಾಣುತ್ತಾರೆ ಎಂದು ಹೇಳಲಾಗುತ್ತಿದೆ. ಮ್ಯಾಕ್ಸ್ ಸಿನೆಮಾದಲ್ಲಿ ಭಾರಿ ಆಕ್ಷನ್ ದೃಶ್ಯಗಳು ಇರಲಿದೆ ಎಂದು ಮೊದಲಿನಿಂದ ಹೇಳಲಾಗುತ್ತಿತ್ತು. ಇದೀಗ ಹೊರಬಂದ ಹೊಸ ಪೊಟೋ ಕಾರಣದಿಂದ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ ಎನ್ನಬಹುದಾಗಿದೆ. ಕಿಚ್ಚ ಸುದೀಪ್ ರವರು ವಿಕ್ರಾಂತ್ ರೋಣ ಹಾಗೂ ಕಬ್ಜಾ ಸಿನೆಮಾದ ಬಳಿಕ ಅವರ ಸಿನೆಮಾ ಬಂದಿರಲಿಲ್ಲ. ಆದ್ದರಿಂದ ಸುದೀಪ್ ಅಭಿಮಾನಿಗಳು ಮ್ಯಾಕ್ಸ್ ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.

ಇನ್ನೂ ಮ್ಯಾಕ್ಸ್ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಈ ವರ್ಷ ಈ ಸಿನೆಮಾದ ರಿಲೀಸ್ ಆಗಬಹುದು ಎಂದು ಹೇಳಲಾಗು‌ತ್ತಿದೆ. ವಿಜಯ್ ಕಾರ್ತಿಕೇಯನ್ ಈ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಮೂರು ಹಿರೋಯಿನ್ ಗಳು ಕಿಚ್ಚನ ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

Most Popular

To Top