Film News

ನನಗ್ಯಾರು ಬೇಕಾಗಿಲ್ಲ, ಸಿಂಗಲ್ ಆಗಿಯೇ ಇರ್ತೀನಿ ಎಂದ ಸೀನಿಯರ್ ನಟಿ ಪ್ರಗತಿ, ವೈರಲ್ ಆದ ಕಾಮೆಂಟ್ಸ್…..!

ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಕಲಾವಿದೆಯಾಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡ ನಟಿ ಪ್ರಗತಿ ಇತರೆ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸದ್ಯ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಅತ್ತೆ, ತಾಯಿ ಮೊದಲಾದ ಪಾತ್ರಗಳಲ್ಲಿ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ನನಗ್ಯಾರು ಬೇಕಾಗಿಲ್ಲ, ಸಿಂಗಲ್ ಆಗಿಯೇ ಇರ್ತೀನಿ ಎಂದು ಹೇಳಿದ್ದು, ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೀನಿಯರ್‍ ನಟಿ ಪ್ರಗತಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಹೆವಿ ವರ್ಕೌಟ್, ಡ್ಯಾನ್ಸ್, ರೀಲ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಆಕೆಯ ಪೋಸ್ಟ್ ಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿರುತ್ತಾರೆ. ಆದರೆ ಪ್ರಗತಿ ಮಾತ್ರ ಅದ್ಯಾವುದಕ್ಕೂ ತಲೆಗೆಡಿಸಿಕೊಳ್ಳದೇ ತನ್ನಿಷ್ಟದಂತೆ ನಡೆಯುತ್ತಿರುತ್ತಾರೆ. ಇನ್ನೂ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿರುತ್ತಾರೆ. ಕಳೆದೆರಡು ದಿನಗಳಿಂದ ನಟಿ ಪ್ರಗತಿ ಖ್ಯಾತ ನಿರ್ಮಾಪಕರೊಬ್ಬರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡಿತ್ತು. ಆದರೆ ಅದೆಲ್ಲಾ ಕೇವಲ ರೂಮರ್‍ ಗಳು ಮಾತ್ರ ಎಂದು ತಿಳಿದುಬಂತು. ಸದ್ಯ ಆಕೆ ಸೀರಿಯಲ್ ನಲ್ಲೂ ಸಹ ನಟಿಸುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರಗತಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಡೈಲಾಗ್ ಒಂದಕ್ಕೆ ಆಕೆ ಲಿಪ್ ಮೂಮೆಂಟ್ ಕೊಟ್ಟಿದ್ದಾರೆ. ನನಗೆ ಯಾರೂ ಬೇಕಾಗಿಲ್ಲ, ಹುಟ್ಟಿದಾಗ ಜೊತೆಗೆ ಇದ್ರಾ, ಸಾಯೋವಾಗ ಜೊತೆ ಬರ್ತಾರಾ ನಾನು ಸಿಂಗಲ್ ಆಗಿಯೇ ಇರ್ತೀನಿ, ಸಿಂಗಲ್ ಆಗಿಯೇ ಹೋಗ್ತೀನಿ ಎಂದು ವಿಡಿಯೋದಲ್ಲಿ ರೀಲ್ಸ್ ಮಾಡಿದ್ದಾರೆ. ಇನ್ನೂ ಪ್ರಗತಿ ಹಂಚಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಟಿ ಪ್ರಗತಿ ಮದುವೆಯಾಗಿ ಮಕ್ಕಳಾದ ಬಳಿಕ ವಿಚ್ಚೇದನ ಪಡೆದುಕೊಂಡು ಪತಿಯಿಂದ ದೂರವಾದರು. ಬಳಿಕ ಈಕೆ ಎರಡನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳೂ ಸಹ ಕೇಳಿಬಂದವು. ಈ ಹಿನ್ನೆಲೆಯಲ್ಲಿ ಆಕೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಪುರುಷರು ಹಾಗೂ ಮಹಿಳೆಯರ ರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಡೆದಿತ್ತು. ಈ ಸ್ಪರ್ಧೆಯಲ್ಲಿ ನಟಿ ಪ್ರಗತಿ ಭಾಗಿಯಾಗಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೊಫೆಷನಲ್ ಪವರ್‍ ಲಿಫ್ಟರ್‍ ಗಳ ಜೊತೆಗೆ ಪೈಪೋಟಿಗೆ ಬಿದ್ದು ಪ್ರಗತಿ ಮೂರನೇ ಪದಕ ಪಡೆದುಕೊಂಡರು.

Most Popular

To Top