ಐವರು ಪುಂಡರಿಂದ ಯುವಕನ ಮೇಲೆ ಹಲ್ಲೆ, ಭಕ್ತಿಗೀತೆ ಹಾಕಿದ್ದು ತಪ್ಪಯ್ತಾ?

Follow Us :

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ ಹೆಚ್ಚಾಗಿದೆ. ನಗರದ ನಗತರ ಪೇಟೆಯಲ್ಲಿ ನಿನ್ನೆಯಷ್ಟೆ ಐದಾರು ಮಂದಿ ಮುಸ್ಲೀಂ ಯುವಕರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಸ್ಪೇರ್‍ ಪಾರ್ಟ್ಸ್ ಮಾರಾಟ ಮಾಡುವ ಮುಖೇಶ್ ಎಂಬಾತನ ಅಂಗಡಿಯ ಬಳಿ ಬಂದ ಐದು ಮಂದಿ ಮುಸ್ಲೀಂ ಯುವಕರು ಕಿರಿಕ್ ಮಾಡಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮುಖೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಮುಖೇಶ್, ನನ್ನ ಅಂಗಡಿಯ ಬಳಿ ಆರು ಜನ ಬಂದಿದ್ದು, ಅವರು ಹೆಸರುಗಳು ಗೊತ್ತಿಲ್ಲ. ನಾನು ಸಂಜೆ ಆರು ಗಂಟೆ ಸಮಯದಲ್ಲಿ ಭಜನೆ ಹಾಡುಗಳನ್ನು ಹಾಕಿದ್ದೆ. ಆ ಸಮಯದಲ್ಲಿ ಅವರು ಬಂದು ನಮಗೆ ತೊಂದರೆ ಆಗ್ತಾ ಇದೆ ಹಾಡು ನಿಲ್ಲಿಸು ಎಂದು ಗಲಾಟೆ ಮಾಡಿದ್ರು, ಬಳಿಕ ನನ್ನ ಮೇಲೆ ಹಲ್ಲೆ ಮಾಡಿದ್ರು, ಅವರ ಪರಿಚಯ ನನಗೆ ಇಲ್ಲ. ರೋಲ್ ಕಾಲ್ ಮಾಡೋಕೆ ಆಗಾಗ ಅಂಗಡಿಯ ಬಳಿ ಬರ್ತಾ ಇದ್ರು, ನಾನು ಕೊಡುತ್ತಿರಲಿಲ್ಲ. ನನ್ನದು ಮೊಬೈಲ್ ಅಂಗಡಿಯಾದ್ದರಿಂದ ಹೆಡ್ ಪೋನ್, ಬ್ಲೂಟೂತ್ ಅಂತಾ ಬರುತ್ತಿದ್ದರು, ನಾನು ಏನು ಕೊಡುತ್ತಿರಲಿಲ್ಲ ಈ ಕಾರಣದಿಂದ ಅವರು ನನ್ನ ಮೇಲೆ ದ್ವೇಷ ಇಟ್ಟುಕೊಂಡು ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇನ್ನೂ ಅಂಗಡಿಗೆ ಬಂದ ಅವರು ಹಾಡು ನಿಲ್ಲಿಸು ಎಂದು ಗಲಾಟೆ ಮಾಡಿದರು. ಆಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದೇವೆ. ಈ ಸಂಬಂಧ ಎಲ್ಲಾ ಮಾಹಿತಿ ಹಾಗೂ ಸಿಸಿಟಿವಿ ಕ್ಲಿಪ್ಸ್ ಪೊಲೀಸರಿಗೆ ಕೊಟ್ಟಿದ್ದೇನೆ. ನನಗೆ ಕನ್ನಡ ಓದೋಕೆ ಬರುವುದಿಲ್ಲ. ಎಫ್.ಐ.ಆರ್‍ ನಲ್ಲಿ ಏನಿದೆ ಅಂತಾ ಗೊತ್ತಿಲ್ಲ ಎಂದಿದ್ದಾರೆ. ಮುಖೇಶ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಬೆನ್ನಲ್ಲೆ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ವರ್ತಕರು ಜಮಾಯಿಸಿದ್ದು, ಪುಂಡರನ್ನು ಬಂಧನ ಮಾಡುವಂತೆ ಒತ್ತಾಯಿಸಿದ್ದಾರೆ. 15 ದಿನಗಳಿಂದಲೂ ಅಂಗಡಿಗಳ ಮುಂದೆ ಬಂದು ಕಿರುಕುಳ ನೀಡುತ್ತಿದ್ದಾರೆ. ನಿನ್ನೆ ಸಂಜೆ ಬಂದು ಕಿರಕ್ ಮಾಡಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ನಾಳೆಯೊಳಗೆ ಬಂಧಿಸದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ವ್ಯಾಪಾರಿಗಳು ಎಚ್ಚರಿಕೆ ಸಹ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಹೆಚ್ಚು ಬಂದೋಬಸ್ತ್ ಮಾಡಿದ್ದಾರೆ. ಆರೋಪಿಯ ವಿರುದ್ದ ಐಪಿಸಿ 506, 504, 149, 307, 323 ಹಾಗೂ 324 ರ ಅಡಿಯಲ್ಲಿ ದೂರು ದಾಖಲು ಮಾಡಿದ್ದು, ಸುಲೇಮಾನ್, ಶನವಾಜ್, ರೋಹಿತ್, ದ್ಯಾನಿಶ್, ತರುಣ್ ಹಾಗು ಕೆಲವರ ವಿರುದ್ದ ಹಲ್ಲೆಗೊಳಗಾದ ಮುಕೇಶ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.