ಕ್ರೇಜಿ ಲುಕ್ಸ್ ನಲ್ಲಿ ಯುವಕರನ್ನು ಟೆಂಪ್ಟ್ ಮಾಡುವಂತಹ ಪೋಸ್ ಕೊಟ್ಟ ಶ್ರುತಿ ಹಾಸನ್, ವೈರಲ್ ಆದ ಪೊಟೋಸ್…..!

ಸ್ಟಾರ್‍ ನಟಿ ಶ್ರುತಿ ಹಾಸನ್ ವರ್ಷದ ಆರಂಭದಲ್ಲೇ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಆಕೆ ನಟಿಸಿದ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಎರಡು ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡವು. ಸದ್ಯ ಆಕೆ ಲಂಡನ್ ವೆಕೇಷನ್ ನಲ್ಲಿದ್ದು, ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಆಕೆಯ ಈ ಬೋಲ್ಡ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎನ್ನಲಾಗುತ್ತಿದೆ.

ನಟಿ ಶ್ರುತಿ ಹಾಸನ್ ಬ್ಯಾಕ್ ಟು ಬ್ಯಾಕ್ ಸೋಲಗಳನ್ನು ಕಂಡ ಹಿನ್ನೆಲೆಯಲ್ಲಿ ಆಕೆ ಐರನ್ ಲೆಗ್ ಎಂಬ ಮುದ್ರೆಯನ್ನು ಹಾಕಿಕೊಂಡರು. ಬಳಿಕ ಕೊಂಚ ಗ್ಯಾಪ್ ಕೊಟ್ಟು, ರವಿತೇಜ ಜೊತೆಗೆ ಕ್ಯ್ರಾಕ್, ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆಗೆ ವಕೀಲ್ ಸಾಬ್ ಸಿನೆಮಾಗಳ ಮೂಲಕ ಮತ್ತೆ ಸಕ್ಸಸ್ ಕಂಡುಕೊಂಡು ಬಹುಬೇಡಿಕೆ ನಟಿಯಾದರು. ಈ ಹಾದಿಯಲ್ಲೇ ಆಕೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‍ ನವರು ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳಲ್ಲಿ ನಟಿಸಲು ಅವಕಾಶ ಕೊಟ್ಟರು. ಈ ಎರಡೂ ಸಿನೆಮಾಗಳೂ ಒಳ್ಳೆಯ ಸಕ್ಸಸ್ ಕಂಡುಕೊಂಡವು.  ಈ ಎರಡೂ ಸಿನೆಮಾಗಳಿಗಾಗಿ ಆಕೆ ಬರೊಬ್ಬರಿ ಐದು ಕೋಟಿ ಸಂಭಾವನೆಯನ್ನು ಸಹ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ತನ್ನ ವೈಯುಕ್ತಿಕ ವಿಚಾರಗಳೊಂದಿಗೆ ಆಗಾಗ ಹಾಟ್ ಪೊಟೋಶೂಟ್ಸ್ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ. ಟ್ರಾನ್ಸಫರೆಂಟ್ ಗೌನ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಕ್ಲೀವೇಜ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಪೊಟೋಗಳು ಎಲ್ಲಾ ಕಡೆ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಶ್ರುತಿ ಹಾಸನ್ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸುದ್ದಿಯಾಗುತ್ತಿರುತ್ತಾರೆ. ಆಕೆ ಮುಂಬೈ ಮೂಲದ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಅವರಿಬ್ಬರೂ ತಿರುಗಾಡುತ್ತಿರುತ್ತಾರೆ. ಶಾಂತಾನು ಜೊತೆಗಿನ ಕೆಲವೊಂದು ಪೊಟೋಗಳು ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಶ್ರುತಿ ಹಾಸನ್ ಗೆ ಈ ವರ್ಷ ಒಳ್ಳೆಯ ಒಪೆನಿಂಗ್ ದೊರೆತಿದೆ ಎನ್ನಬಹುದಾಗಿದೆ. ಸದ್ಯ ಆಕೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಇದೇ ಸೆ.28 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಜೊತೆಗೆ ಆಕೆ ಹಾಲಿವುಡ್ ಸಿನೆಮಾವೊಂದರಲ್ಲಿ ಸಹ ನಟಿಸುತ್ತಿದ್ದಾರೆ.