Film News

ತನ್ನ ಮೇಲಿನ ರೂಮರ್ ಬಗ್ಗೆ ರಿಯಾಕ್ಟ್ ಆದ ಅದಿತಿ, ಶಾಕಿಂಗ್ ರಿಯಾಕ್ಷನ್ ಕೊಟ್ಟ ಬ್ಯೂಟಿ…!

ಸುಮಾರು ತಿಂಗಳುಗಳಿಂದ ಕಾಲಿವುಡ್ ಲವರ್‍ ಬಾಯ್ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇದರ ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಹ ಅವರಿಬ್ಬರೂ ಜೋಡಿಯಾಗಿ ಕಾಣಿಸಿಕೊಂಡು ಆ ಸುದ್ದಿಗೆ ಮತಷ್ಟು ಬಲ ಕೊಟ್ಟಂತಾಗಿದೆ. ಇತ್ತೀಚಿಗೆ ತೆಲುಗು ನಟ ಶರ್ವಾನಂದ ಎಂಗೇಜ್ ಮೆಂಟ್ ನಲ್ಲೂ ಸಹ ಅವರಿಬ್ಬರೂ ಒಟ್ಟಿಗೆ ಬಂದು ಪೊಟೋಗಳಿಗೆ ಪೋಸ್ ಸಹ ಕೊಟ್ಟಿದ್ದರು. ಇದು ಸಾಲದು ಎಂಬಂತೆ ಇತ್ತೀಚಿಗೆ ಹಾಡೊಂದಕ್ಕೆ ರೀಲ್ಸ್ ಸಹ ಜೊತೆಯಲ್ಲಿ ಮಾಡಿದ್ದು ಅವರು ಡೇಟಿಂಗ್ ನಲ್ಲಿದ್ದಾರೆ ಎಂದು ಅನೇಕರು ಫಿಕ್ಸ್ ಆಗಿದ್ದರು. ಆದರೆ ಈ ಬಗ್ಗೆ ಅದಿತಿ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಸುಮಾರು ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಅದಕ್ಕೆ ಬಲ ಕೊಡುವಂತಹ ಅನೇಕ ಸನ್ನಿವೇಶಗಳೂ ಸಹ ನಡೆದಿದೆ.  ಅದರಲ್ಲೂ ಇತ್ತೀಚಿಗೆ ನಡೆದ ಕೆಲವೊಂದು ಕಾರಣಗಳಿಂದ ಅವರು ಬಹಿರಂಗವಾಗಿಯೇ ಪ್ರೀತಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅದಿತಿ ಶಾಕೀಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಆಕೆ ಈ ರೂಮರ್‍ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಸಿದ್ದಾರ್ಥ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಎದುರಾಗಿದ್ದು, ಆ ಪ್ರಶ್ನೆಗೆ ಅದಿತಿ ಶಾಕ್ ಆಗುವಂತಹ ಉತ್ತರ ನೀಡಿದ್ದಾರೆ. ನಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ ಎಂದು ಫೈರ್‍ ಆಗಿದ್ದಾರೆ.

ಇನ್ನೂ ಸಂದರ್ಶನದಲ್ಲಿ ಮಾತನಾಡುತ್ತಾ ಅದಿತಿ ರೂಮರ್‍ ಗಳ ಬಗ್ಗೆ ಶಾಕಿಂಗ್ ಉತ್ತರ ನೀಡಿದ್ದಾರೆ. ನಾನು ಯಾರ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದೀನಿ ಎಂಬ ವಿಚಾರವನ್ನು ಬಿಟ್ಟು ಸಿನೆಮಾಗಳ ಬಗ್ಗೆ ಮಾತನಾಡಿದರೇ ಚೆನ್ನಾಗಿರುತ್ತದೆ. ಸದ್ಯ ನಾನು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಒಳ್ಳೆಯ ನಿದೇರ್ಶಕದರೊಂದಿಗೆ ಕೆಲಸ ಮಾಡುವುದು ನನಗೆ ತುಂಬಾ ಇಷ್ಟ. ಸದ್ಯ ನನ್ನ ಸಂಪೂರ್ಣ ಗಮನ ನನ್ನ ಕೆರಿಯರ್‍ ಮೇಲೆ ಇದೆ. ನನ್ನ ಸಿನೆಮಾಗಳನ್ನು ಪ್ರೇಕ್ಷಕರು ನೋಡುವವರೆಗೂ ನಾನು ಸಿನೆಮಾಗಳಲ್ಲಿ ನಟಿಸುತ್ತೇನೆ ಎಂದಿದ್ದಾರೆ. ಆದರೆ ಅದಿತಿ ತಾನು ಸಿದ್ದಾರ್ಥ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದಾರಾ ಅಥವಾ ಇಲ್ಲವಾ ಎಂಬ ಮಾತನ್ನು ಮಾತ್ರ ಆಕೆ ಹೇಳಲಿಲ್ಲ. ಇನ್ನೂ ಆಕೆ ರಿಲೇಷನ್ ಶಿಪ್ ಬಗ್ಗೆ ಮಾತನಾಡದೇ ಇರುವ ಕಾರಣ ಆ ಸುದ್ದಿಯಲ್ಲಿ ನಿಜವಿದೆ ಎಂದು ಅನೇಕರು ಅಭಿಪ್ರಾಯಪಡುತ್ತಿದ್ದಾರೆ.

ಇನ್ನೂ ತಮ್ಮ ಮೇಲಿನ ರೂಮರ್‍ ಬಗ್ಗೆ ಆಕೆ ಖಂಡಿಸಬೇಕಿತ್ತು. ಆದರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದಾದರೂ ಹೇಳಬೇಕಿತ್ತು. ಅದನ್ನು ಬಿಟ್ಟು ಬೇರೆ ವಿಚಾರ ಮಾತನಾಡಿ ವಿಷಯಾಂತರ ಮಾಡಿದ್ದು, ಅವರ ಲವ್ ನಿಜ ಇದೆ ಎಂಬ ಅಭಿಪ್ರಾಯಗಳನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. ಇನ್ನೂ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ರವರು ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top