ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಪುರುಷ ಇರುತ್ತಾನೆ ಎಂದ ಸುಧಾಮೂರ್ತಿ, ನೆಟ್ಟಿಗರಿಂದ ಮೆಚ್ಚುಗೆ……!

Follow Us :

ಇನ್ಫೋಸಿಸ್ ಪ್ರತಿಷ್ಟಾನದ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ದಿ ವಾಕ್ಸಿನ್ ವಾರ್‍ ಸಿನೆಮಾ ನೋಡಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಪ್ರತೀ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆಯಿರುತ್ತಾಳೆ, ಈ ಮಾತನ್ನು ನಾವು ಕೇಳಿರುತ್ತೇವೆ ಆದರೆ ಪ್ರತೀ ಯಶ್ವಸ್ವೀ ಮಹಿಳೆ ಹಿಂದೆ ಪುರುಷನ ಬೆಂಬಲ ಇರುತ್ತದೆ ಎಂದು ಅವರು ಹೇಳಿದ್ದು, ಅವರ ಹೇಳಿಕೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ದಿ ವಾಕ್ಸಿನ್ ವಾರ್‍ ಸಿನೆಮಾ ಕಳೆದೆರಡು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ. ಈ ಸಿನೆಮಾವನ್ನು ಇನ್ಫೋಸಿಸ್ ಪ್ರತಿಷ್ಟಾನದ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ವೀಕ್ಷಿಸಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿ ಹಾಗೂ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ಅವರ ಮಾತುಗಳು ಅನೇಕರಿಗೆ ಸ್ಪೂರ್ತಿಯಾಗಿದೆ. ಇದೀಗ ಆಕೆ ದಿ ವ್ಯಾಕ್ಸಿನ್ ವಾರ್‍ ಸಿನೆಮಾ ನೋಡಿ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ. ಸಿನೆಮಾದ ಬಗ್ಗೆ ಆಕೆ ಹೇಳಿದ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಸುಧಾಮೂರ್ತಿ ಸಿನೆಮಾದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ವಿವೇಖ್ ಅಗ್ನಿ ಹೋತ್ರಿ ಹಂಚಿಕೊಂಡಿದ್ದಾರೆ. ಈ ಸಿನೆಮಾವನ್ನು ಹೃದಯ ಸ್ಪರ್ಶಿ ಸಿನೆಮಾ ಎಂದು ಸುಧಾಮೂರ್ತಿ ರವರು ಕರೆದಿದ್ದಾರೆ. ಕೋವಿಡ್ 19 ಲಸಿಕೆಯನ್ನು ತಯಾರಿಸುವಲ್ಲಿ ಮಹಿಳಾ ವಿಜ್ಞಾನಿಗಳ ಪ್ರಯತ್ನವನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ. ಅರ್ಥ ಮಾಡಿಕೊಳ್ಳುವ ಪುರುಷನಿಂದ ಮಹಿಳೆಯ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಈ ಸಿನೆಮಾದಲ್ಲಿ ನಾನು ಮಹಿಳೆಯ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವಳು ತಾಯಿ, ಅವಳು ಹೆಂಡತಿ, ಅವಳು ವೃತ್ತಿ ಜೀವನದ ವ್ಯಕ್ತಿ. ಕುಟುಂಬ ಹಾಗೂ ಕೆಲಸವನ್ನು ಸಮರೋಪಾಧಿಯಲ್ಲಿ ನಡೆಸುವುದು ತುಂಬಾನೆ ಕಷ್ಟ ಸಾಧ್ಯ. ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಅರ್ಥಮಾಡಿಕೊಳ್ಳುವಂತಹ ಪುರುಷನಿದ್ದಾನೆ. ಇಲ್ಲದಿದ್ದರೇ ಅವಳು ಸಾಧನೆ ಮಾಡಲು ಸಾಧ್ಯವಾಗಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಸುಧಾ ಮೂರ್ತಿ ರವರು ಹೇಳಿದ ಹೇಳಿಕೆಗಳು ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ.