ವಿಜಯ್ ಆಂಟೋನಿ ಆರೋಗ್ಯದ ಬಗ್ಗೆ ಹುಟ್ಟಿಕೊಂಡ ರೂಮರ್, ಆಸ್ಪತ್ರೆಯಿಂದಲೇ ವಿಜಯ್ ಸ್ಪಷ್ಟನೆ….!

Follow Us :

ಬಿಚ್ಚಗಾಡು ಸಿನೆಮಾದ ಮೂಲಕ ಎಲ್ಲರಿಗೂ ಸುಪರಚಿತರಾದ ಸೌತ್ ಸಿನಿರಂಗದ ನಟ ವಿಜಯ್ ಆಂಟೋನಿ ಕೆಲವು ದಿನಗಳ ಹಿಂದೆಯಷ್ಟೆ ಮಲೇಷಿಯಾದಲ್ಲಿ ಅಪಘಾತಕ್ಕೆ ಗುರಿಯಾಗಿದ್ದರು. ಬಿಚ್ಚಗಾಡು 2 ಸಿನೆಮಾದ ಶೂಟಿಂಗ್ ನಡೆಯುತ್ತಿದ್ದಾರೆ ಜೋರಾಗಿ ಹೋಗುತ್ತಿದ್ದ ಬೋಟ್ ನಲ್ಲಿ ವಿಜಯ್ ಇದ್ದು, ಈ ವೇಳೆ ಅಫಗಾತಕ್ಕೆ ಗುರಿಯಾಗಿದ್ದಾರೆ. ಇನ್ನೂ ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನೂ ಅಂದಿನಿಂದ ವಿಜಯ್ ಆರೋಗ್ಯದ ಬಗ್ಗೆ ತುಂಬಾ ರೂಮರ್‍ ಗಳು ಹರಿದಾಡಿದ್ದು, ಇದಕ್ಕೆ ವಿಜಯ್ ಇದೀಗ ಆಸ್ಪತ್ರೆಯಿಂದಲೇ ಸ್ಪಷ್ಟನೆ ನೀಡಿದ್ದಾರೆ.

ಸೌತ್ ಸಿನಿರಂಗದಲ್ಲಿ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ನಟ ವಿಜಯ್ ಬಿಚ್ಚಗಾಡು ಸಿನೆಮಾದ ಮೂಲಕ ಸೆನ್ಷೇಷನಲ್ ನಟರಾದರು. ಬಿಚ್ಚಗಾಡು ಸಿನೆಮಾ ತೆಲುಗು ಹಾಗೂ ತಮಿಳಿನಲ್ಲಿ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕ ನಟ ವಿಜಯ್ ತುಂಬಾನೆ ಫೇಮಸ್ ಆದರು. ಇದೀಗ ಬಿಚ್ಚಗಾಡು 2 ಸಿನೆಮಾ ಸಹ ಘೋಷಣೆಯಾಗಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ವಿಜಯ್ ಆಂಟೋನಿ ಬಿಚ್ಚಗಾಡು ಸಿನೆಮಾಗೂ ಮುಂದೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರೂ ಸಹ ಅಷ್ಟೊಂದು ಫೇಂ ಆತನಿಗೆ ಸಿಕ್ಕಿರಲಿಲ್ಲ. ಆದರೆ ಬಿಚ್ಚಗಾಡು ಸಿನೆಮಾದ ಬಳಿಕ ವಿಜಯ್ ಆಂಟೋನಿ ತುಂಬಾನೆ ಪಾಪ್ಯುಲರ್‍ ಆದರು. ಇದೀಗ ಬಿಚ್ಚಗಾಡು 2 ಸಿನೆಮಾ ಶೂಟಿಂಗ್ ಮಲೇಷಿಯಾದಲ್ಲಿ ನಡೆಯುತ್ತಿದೆ. ಈ ವೇಳೆ ವಿಜಯ್ ಆಂಟೋನಿಗೆ ಅಪಘಾತವಾಗಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.

ಇನ್ನೂ ಬಿಚ್ಚಗಾಡು 2 ಶೂಟಿಂಗ್ ವೇಳೆ ವಿಜಯ್ ಆಂಟೋನಿ ತೀವ್ರವಾಗಿ ಗಾಯಗೊಂಡಿದ್ದು, ಮಲೇಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಆತನ ಕುಟುಂಬಸ್ಥರು ಆತನನ್ನು ಚೆನೈಗೆ ಕರೆತಂದಿದ್ದರು. ಇನ್ನೂ ವಿಜಯ್ ಆಂಟೋನಿಗೆ ತೀವ್ರ ಗಾಯಗಳಾಗಿದ್ದು, ಆತಮ ಪರಿಸ್ಥಿತಿ ತುಂಬಾ ಹದೆಗಟ್ಟಿದೆ ಎಂಬ ರೂಮರ್‍ ಗಳು ಹರಿದಾಡಿದವು. ಈ ಕಾರಣಕ್ಕಾಗಿ ವಿಜಯ್ ಅಭಿಮಾನಿಗಳೂ ಸಹ ತುಂಬಾನೆ ಆತಂಕಕ್ಕೆ ಗುರರಿಯಾದರು. ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿಜಯ್  ಆಸ್ಪತ್ರೆಯಿಂದಲೇ ತನ್ನ ಹೆಲ್ತ್ ಬಗ್ಗೆ ಅಪ್ಡೇಟ್ ಒಂದನ್ನು ನೀಡಿದ್ದಾರೆ. ನಾನು ಸೇಫ್ ಆಗಿಯೇ ಇದ್ದೀನಿ. ಶೂಟಿಂಗ್ ನಲ್ಲಿ ನನ್ನ ದವಡೆಗೆ, ಮೂಗಿಗೆ ತೀವ್ರ ಗಾಯಗಳಾಗಿದೆ. ಇದಕ್ಕೆ ಸರ್ಜರಿ ಸಹ ಯಶಸ್ವಿಯಾಗಿದೆ. ನಿಮ್ಮೆಲ್ಲಾ ಆರ್ಶಿವಾದದೊಂದಿಗೆ ನಾನು ಶೀಘ್ರದಲ್ಲೇ ಮಾತನಾಡುತ್ತೇನೆ. ನನಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳು ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಆಸ್ಪತ್ರೆಯಿಂದ ಪೊಟೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ಬಿಚ್ಚಗಾಡು 2 ಸಿನೆಮಾದ ಶೂಟಿಂಗ್ ಮಲೇಷಿಯಾದಲ್ಲಿ ನಡೆಯುತ್ತಿತ್ತು. ವೇಗವಾಗಿ ಬೋಟ್  ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ವಿಜಯ್ ಅಪಘಾತಕ್ಕೆ ಗುರಿಯಾಗಿದ್ದರು. ಬೋಟ್ ನಲ್ಲಿ ಒಂದು ಸನ್ನಿವೇಶಕ್ಕೆ ಸಂಬಂಧಿಸಿದ ಶೂಟಿಂಗ್ ನಡೆಯುತ್ತಿದ್ದು,  ಈ ವೇಳೆ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ಆತ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆಗಳನ್ನು ಸಹ ಮಾಡಿದ್ದರು.