Film News

ಕಾಸ್ಟಿಂಗ್ ಕೌಚ್ ಬಗ್ಗೆ ಸಂಚಲನಾತ್ಮಕ ವಿಚಾರಗಳನ್ನು ಹಂಚಿಕೊಂಡ ನಟಿ, ನನ್ನ ಬಳಿ ಸಹ ಕಮಿಟ್ ಮೆಂಟ್ ಕೇಳಿದ್ರು ಎಂದ ನಯನತಾರಾ….!

ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಸುದ್ದಿ ಮಿಟೂ ಬಳಿಕ ಅನೇಕ ನಟಿಯರು ಓಪೆನ್ ಆಗಿಯೇ ಹೇಳುತ್ತಿರುತ್ತಾರೆ. ಸಿನಿಮಾರಂಗಕ್ಕೆ ಬಂದ ಅನೇಕ ಹಿರೋಯಿನ್ ಗಳು ಸಕ್ಸಸ್ ಕಾಣುವುದಕ್ಕೂ ಮುಂಚೆ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಸಮಸ್ಯೆಗೆ ಸಿಲುಕಿರುತ್ತಾರೆ.  ಇನ್ನೂ ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ಎಂತಲೇ ಕರೆಯಲಾಗುವ ನಯನತಾರಾ ಸಹ ಇಂತಹ ಅನುಭವವನ್ನು ಕಂಡಿದ್ದರಂತೆ. ಈ ಕುರಿತು ನಯನತಾರಾ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ನಯನತಾರಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅನೇಕ ಅಡ್ಡಿಗಳನ್ನು ಎದುರಿಸಿ ಸ್ಟಾರ್‍  ನಟಿಯಾಗಿದ್ದಾರೆ. ಇದೀಗ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಫೇಂ ಸಂಪಾದಿಸಿಕೊಂಡ ಈಕೆ ಕಳೆದ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ರವರನ್ನು ಮದುವೆಯಾದರು. ಮದೆವೆಯಾದರೂ ಸಹ ಆಕೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಆಕೆ ಅತ್ಯಧಿಕ ಸಂಭಾವನೆಯನ್ನು ಸಹ ಪಡೆಯುತ್ತಿದ್ದಾರೆ. ಅನೇಕ ಸ್ಟಾರ್‍ ನಟರಿಗೆ ನಯನತಾರಾ ಮೊದಲ ಆಪ್ಷನ್ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಇನ್ನೂ ಅಂತಹ ಸ್ಟಾರ್‍ ನಟಿಗೂ ಸಹ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತಂತೆ. ಈ ಬಗ್ಗೆ ಆಕೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ನಯನತಾರಾ ಕಳೆದ ಎರಡು ದಶಕಗಳಿಂದ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಸಹ ಆಕೆ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಯನತಾರಾ ಕಾಸ್ಟಿಂಗ್ ಕೌಚ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ ಆದರೆ ನಮ್ಮ ವರ್ತನೆಯ ಮೇಲೆ ನಮಗೆ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಸಿನಿರಂಗಕ್ಕೆ ಬಂದ ಮೊದಲಲ್ಲಿ ನನ್ನನ್ನು ಸಹ ಅನೇಕರು ಕಮಿಟ್ ಮೆಂಟ್ ಕೇಳಿದ್ದರು. ಆದರೆ ನನಗೆ ಇಷ್ಟವಿಲ್ಲ ಎಂದು ನಿರ್ಭಯವಾಗಿಯೇ ಹೇಳುತ್ತಿದ್ದೆ. ನಾನು ಕೇವಲ ನನ್ನ ಟ್ಯಾಲೆಂಟ್ ನಂಬಿಕೊಂಡು ಸಿನಿರಂಗಕ್ಕೆ ಬಂದೆ. ನನ್ನ ಟ್ಯಾಲೆಂಟ್ ಕಾರಣದಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಇನ್ನೂ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಹಂಚಿಕೊಂಡ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಮಿಟೂ ಬಂದ ಬಳಿಕ ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನೂ ಸಿನಿರಂಗದಲ್ಲಿ ಮಾತ್ರವಲ್ಲ ಪ್ರತಿಯೊಂದು ರಂಗದಲ್ಲೂ ಸಹ ಕಾಸ್ಟಿಂಗ್ ಕೌಚ್ ಇದೆ. ಮಹಿಳೆಯರು ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ನಮ್ಮ ವರ್ತನೆಯ ಮೇಲೆ ಸಮಸ್ಯೆಗಳು ಎದುರಾಗುತ್ತಿರುತ್ತವೆ ಎಂದು ನಯನತಾರಾ ಹೇಳಿದ್ದಾರೆ.

Most Popular

To Top