Film News

ಪವಿತ್ರಾ ಕುರಿತು ಆಕೆಯ ಮಾಜಿ ಪತಿ ಸುಚೇಂದ್ರಾ ಸಂಚಲನಾತ್ಮಕ ಹೇಳಿಕೆಗಳು, ಆ ಕಾರಣದಿಂದಲೇ ನರೇಶ್ ಸಂಗ ಮಾಡಿದ್ದಾರಂತೆ ಪವಿತ್ರ….!

ಇತ್ತೀಚಿಗೆ ಕೆಲವು ದಿನಗಳಿಂದ ಟಾಲಿವುಡ್ ನ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ನಡುವಣ ಅಫೇರ್‍ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಇದೀಗ ಅವರು ತಾವು ಡೇಟಿಂಗ್ ಮಾಡುತ್ತಿರುವುದಾಗಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಬಹಿರಂಗಗೊಳಿಸಿದ್ದಾರೆ. ಅವರಿಬ್ಬರ ಅಭಿನಯ ಮಳ್ಳಿ ಪೆಳ್ಳಿ ಎಂಬ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ನರೇಶ್ ಹಾಗೂ ಪವಿತ್ರಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಒಪೆನ್ ಆಗಿದ್ದಾರೆ. ಇದೀಗ ಪವಿತ್ರಾ ಲೋಕೇಶ್ ಮಾಜಿ ಪತಿ ಸುಚೇಂದ್ರಾ ಪ್ರಸಾದ್ ಆಕೆಯ ಬಗ್ಗೆ ಕೆಲವೊಂದು ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ್ದಾರೆ.

ತೆಲುಗು ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಸುಮಾರು ದಿನಗಳಿಂದ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಅವರಿಬ್ಬರ ರದ್ದಾಂತ ತುಂಬಾನೆ ಜೋರಾಗಿ ನಡೆದಿತ್ತು. ಸುದ್ದಿವಾಹಿನಿಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಅವರದ್ದೆ ಸುದ್ದಿ ಕೇಳಿಬರುತ್ತಿತ್ತು. ಆದರೆ ಇತ್ತಿಚಿಗಷ್ಟೆ ತೆರೆಕಂಡ ಮಳ್ಳಿ ಪೆಳ್ಳಿ ಸಿನೆಮಾದ ಪ್ರಮೋಷನ್ ಸಮಯದಲ್ಲಿ ಅವರಿಬ್ಬರೂ ಡೇಟಿಂಗ್ ನಲ್ಲಿರುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಅವರಿಬ್ಬರೂ ಮದುವೆಯಾಗಿದ್ದಾರೆ ಎಂದು ಕೆಲವರು, ಮತ್ತೆ ಕೆಲವರು ಸಿನೆಮಾಗಾಗಿ ಮಾಡಿದ ಪ್ರಮೋಷನ್ ಗಿಮಿಕ್ ಎಂತಲೂ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದೀಗ ಪವಿತ್ರಾ ರವರ ಮಾಜಿ ಪತಿ ಸುಚೇಂದ್ರ ಆಕೆಯ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಕನ್ನಡ ಸಿನಿರಂಗದ ಕಲಾವಿದ ಸುಚೇಂದ್ರ ಪ್ರಸಾದ್ ಪವಿತ್ರಾ ಲೋಕೇಶ್ ರವರ ಮಾಜಿ ಪತಿ. ಆತ ಇದೀಗ ಕೆಲವೊಂದು ಕಾಮೆಂಟ್ ಗಳನ್ನು ಸಹ ಮಾಡಿದ್ದಾರೆ. ಸುಚೇಂದ್ರಾ ಹಾಗೂ ಪವಿತ್ರಾ ರವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಇಬ್ಬರ ನಡುವೆ ವಿಬೇಧಗಳು ಉಂಟಾಗಿ ಬೇರೆಯಾದರು. ಇದೀಗ ಆಕೆ ನರೇಶ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ. ಇನ್ನೂ ನರೇಶ್ ಹಾಗೂ ಪವಿತ್ರಾ ನಡುವೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿದ್ದು, ಇದೀಗ ಆಕೆಯ ಮಾಜಿ ಪತಿ ಸುಚೇಂದ್ರಾ ಸಹ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸುಚೇಂದ್ರಾ ಪವಿತ್ರಾ ಬಗ್ಗೆ ಕಾಮೆಂಟ್ಸ್ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಅವಕಾಶವಾದಿ. ಹಣಕ್ಕಾಗಿ ನರೇಶ್ ಸಂಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

ತೆಲುಗು ಸಿನಿರಂಗದ ವಿಜಯ ನಿರ್ಮಲರವರ ಸುಮಾರು 1500 ಕೋಟಿ ಆಸ್ತಿಯನ್ನು ಹೊಡೆದುಹಾಕಲು ಪವಿತ್ರಾ ಲೋಕೇಶ್ ನರೇಶ್ ಸಂಗ ಮಾಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಇಬ್ಬರೂ ಜಲ್ಸಾ ಮಾಡುತ್ತಿರುವುದು ನಿರ್ಮಲರವರ ಕಷ್ಟ. ಐಶಾರಾಮಿ ಜೀವನ ನಡೆಸಲು ಪವಿತ್ರಾಗೆ ತುಂಬಾ ಇಷ್ಟ. ಆಕೆಗೆ ಹಣದ ಅವಶ್ಯಕತೆ ತುಂಬಾನೆ ಇದೆ. ನನ್ನ ಬಳಿ ಹಣವಿಲ್ಲದ ಕಾರಣ ಆಕೆ ನರೇಶ್ ನನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಸುಚೇಂದ್ರಾ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top