Film News

ರಶ್ಮಿಕಾ ಮಂದಣ್ಣ ನಯಾ ಲುಕ್ ವೈರಲ್, ಟ್ರೆಡಿಷನಲ್ ಲುಕ್ಸ್ ನಲ್ಲೂ ತಗ್ಗೇದೆ ಲೇ ಎಂದು ಹಾಟ್ ಆಗಿ ಕಾಣಿಸಿಕೊಂಡ ರಶ್….!

ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಆಕ್ಟೀವ್ ಆಗಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದ್ಯ ಕ್ರೇಜಿ ಪ್ರಾಜೆಕ್ಟ್ ಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ಕೆಲವೊಂದು ಬ್ರಾಂಡ್ ಗಳನ್ನು ಪ್ರಮೋಷನ್ ಮಾಡುವ ನಿಟ್ಟಿನಲ್ಲಿ ಜಾಹಿರಾತುಗಳಲ್ಲೂ ಸಹ ನಟಿಸುತ್ತಿರುತ್ತಾರೆ. ಇದೀಗ ಆಕೆ ಒಂದು ಬ್ರಾಂಡ್ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದು, ಆ ಬ್ರಾಂಡ್ ನ ಡ್ರೆಸ್ ಧರಿಸಿ ಸಖತ್ ಹಾಟ್ ಆಗಿ ಹೊಸ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸೌತ್ ಸೇರಿದಂತೆ ನಾರ್ತ್‌‌ನಲ್ಲೂ ಕ್ರೇಜಿ ಆಫರ್‍ ಗಳನ್ನು ಪಡೆದುಕೊಂಡರು. ಇನ್ನೂ ಸೋಲು ಗೆಲುವು ಎಂಬುದನ್ನು ಲೆಕ್ಕಿಸದೇ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಇನ್ನೂ ಇತ್ತಿಚಿಗೆ ಆಕೆ ನಟಿಸಿದ ಬಹುತೇಕ ಎಲ್ಲಾ ಸಿನೆಮಾಗಳು ಆಕೆಗೆ ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ. ಆಡವಾಳ್ಳು ಮೀಕು ಜೋಹಾರ್ಲು, ಹಿಂದಿಯಲ್ಲಿ ಗುಡ್ ಬೈ, ಮಿಷನ್ ಮಜ್ನು ಸಿನೆಮಾಗಳು ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು. ಸೀತಾರಾಮಂ ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸಿದ್ದರು, ಆದರೆ ಈ ಸಿನೆಮಾದ ಹಿಟ್ ಮೃಣಾಲ್ ಠಾಕೂರ್‍ ಪಾಲಾಯಿತು. ದಳಪತಿ ವಿಜಯ್ ವಾರಸುಡು ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಯಾಗಿ ಕಾಣಿಸಿಕೊಂಡರು ಆದರೆ ಈ ಸಿನೆಮಾದಲ್ಲಿ ಆಕೆ ಹಾಡುಗಳಿಗೆ ಮಾತ್ರ ಸೀಮಿತರಾದರು ಎಂದು ಹೇಳಲಾಗುತ್ತಿದೆ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದೇ ಹೇಳಲಾಗುತ್ತಿದೆ.

ಇನ್ನೂ ನಟಿ ರಶ್ಮಿಕಾ ಮಂದಣ್ಣ ಸಿನೆಮಾಗಳ ಜೊತೆಗೆ ಆಗಾಗ ಜಾಹಿರಾತುಗಳಲ್ಲೂ ಸಹ ನಟಿಸುತ್ತಿರುತ್ತಾರೆ. ಅನೇಕ ಬ್ರಾಂಡ್ ಗಳನ್ನು ಪ್ರಮೋಟ್ ಮಾಡುತ್ತಾ ಅಭಿಮಾನಿಗಳನ್ನು ಸಹ ರಂಜಿಸುತ್ತಿರುತ್ತಾರೆ. ಇದೀಗ ಆಕೆ ಜನಸ್ಯ ಎಂಬ ಖ್ಯಾತ ಸಂಸ್ಥೆಯ ಡ್ರೆಸ್ ಗಳನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಜಾಹಿರಾತಿನಲ್ಲಿ ಆಕೆ ಆ ಬ್ರಾಂಡ್ ನ ಡ್ರೆಸ್ ಗಳನ್ನು ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲೂ ಸಹ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಇನ್ನೂ ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಟಿ ರಶ್ಮಿಕಾ ಕೈಯಲ್ಲಿ ಇದಿಗ ಕೆಲವೊಂದು ಕ್ರೇಜಿ ಪ್ರಾಜೆಕ್ಟ್ ಗಳಿವೆ. ಅಲ್ಲು ಅರ್ಜುನ್ ಜೊತೆಗೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಜೊತೆಗೆ ಆಕೆ ರೈಂಬೋ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಹಾಗೂ ನಿತಿನ್ ಹಾಗೂ ವೆಂಕಿ ಕುಡುಮುಲ ನಿರ್ದೇಶನದಲ್ಲಿ ಸಹ ಒಂದು ಸಿನೆಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಆಕೆ ಯಾನಿಮಲ್ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top