News

80 ವರ್ಷದ ವೃದ್ದೆಯ ಮೇಲೆ ಅತ್ಯಾಚಾರವೆಸಗಿದ 22 ವರ್ಷದ ವೃದ್ದೆಯ ಸಂಬಂಧಿ ಯುವಕ….!

ಸಮಾಜದಲ್ಲಿ ಎಷ್ಟೇ ಅರಿವು ಮೂಡಿಸುತ್ತಿದ್ದರೂ, ಕಾನೂನಿನಂತೆ ಶಿಕ್ಷೆಯಾಗುತ್ತಿದ್ದರೂ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪುಟ್ಟ ಮಕ್ಕಳಿಂದ ವಯೋವೃದ್ದರವರನ್ನು ಬಿಡದೇ ಕಾಮುಕರ ಅತ್ಯಾಚಾರ ವೆಸಗಿ ವಿಕೃತಿ ಮೆರೆಯುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ. 80ರ ವೃದ್ದೆಯ ಮೇಲೆ 22 ವರ್ಷ ಸಂಬಂಧಿಕ ಹುಡುಗ ಅತ್ಯಾಚಾರವೆಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕಾನ್ಪುರದ ಬಿಲ್ಲಾಪುರ ವ್ಯಾಪ್ತಿಯ ನಿವಾಸಿಯಾದ 80 ವರ್ಷದ ವೃದ್ದೆಯ ಮೇಲೆ 22 ವರ್ಷದ ಆಕೆಯ ಸಂಬಂಧಿಕ ಹುಡುಗ ಅತ್ಯಾಚಾರವೆಸಗಿದ್ದಾನೆ. ಕಳೆದ ಗುರುವಾರ ರಾತ್ರಿ ಅಜ್ಜಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದಾಗ ಮನೆಯೊಳಗೆ ನುಗ್ಗಿದ ಯುವಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಅಜ್ಜಿಗೆ ಹೊಡೆದಿದ್ದ ಹಿನ್ನೆಲೆಯಲ್ಲಿ ಅಜ್ಜಿಯ ಹಲ್ಲು ಮುರಿದಿದೆ. ಬಳಿಕ ಅಜ್ಜಿ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿ ಗೋಡೆ ಹಾರಿ ಓಡಿ ಹೋಗಿದ್ದಾನೆ. ಇನ್ನೂ ಅಪರಾಧಿ ಯುವಕ ಅಜ್ಜಿಯ ಸಂಬಂಧಿಕನಾಗಿದ್ದಾನೆ. ಜೊತೆಗೆ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇನ್ನೂ ಅಪರಾಧಿಯ ವಿರುದ್ದ ಐಪಿಸಿ ಸೆಕ್ಷನ್ 376, 325, 425 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಅಪರಾಧಿ ಯುವಕ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಅಜ್ಜಿಯ ಮೇಲೆ ಅತ್ಯಾಚಾರ ವೆಸಗುವುದಕ್ಕೂ ಮುನ್ನಾ ಗೆಳೆಯರ ಜೊತೆಗ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ.

Most Popular

To Top