ಅನಾಥ ಮಕ್ಕಳೊಂದಿಗೆ ಅದ್ದೂರಿಯಾಗಿ ಕ್ರಿಸ್ ಮಸ್ ಆಚರಿಸಿದ ಪವನ್ ಕಲ್ಯಾಣ್ ಪತ್ನಿ ಲೆಜಿನೋವಾ, ವೈರಲ್ ಆದ ಪೊಟೋಸ್……!

Follow Us :

ಟಾಲಿವುಡ್ ಸ್ಟಾರ್‍ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ರವರು ಸದ್ಯ ಸಿನೆಮಾಗಳಿಗೆ ಬ್ರೇಕ್ ಕೊಟ್ಟು ನಿರಂತರವಾಗಿ ರಾಜಕೀಯ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಿಮಿತ್ತ ಅವರು ರಾಜಕೀಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಪತ್ನಿ ಅನಾ ಲೆಜಿನೋವಾ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಇದೀಗ ಮೊದಲ ಬಾರಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಅನಾಥ ಮಕ್ಕಳೊಂದಿಗೆ ಕ್ರಿಸ್ ಮಸ್ ಆಚರಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟ ಪವನ್ ಕಲ್ಯಾಣ್ ರವರ ಪತ್ನಿ ಅನಾ ಕೊಣಿದೆಲಾ (ಲೆಜಿನೊವಾ) ಸಾಮಾನ್ಯವಾಗಿ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಆಕೆ ಕುಟುಂಬ ಹಾಗೂ ಖಾಸಗಿ ಜೀವನಕ್ಕೆ ಮಾತ್ರ ಸೀಮಿತವಾಗಿರುತ್ತಾರೆ. ಪವನ್ ಕಲ್ಯಾಣ್ ರವರೊಂದಿಗೂ ಸಹ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಮೆಗಾ ಕುಟುಂಬದ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೇ ಆಕೆ ಹೊರಗೆ ಬರೋದು ತುಂಬಾನೆ ವಿರಳ ಎಂದು ಹೇಳಬಹುದು. ಆಗಾಗ ವಿಮಾನ ನಿಲ್ದಾಣದ ಬಳಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆ ಸಮಯದಲ್ಲಿ ಕ್ಯಾಪ್ಚರ್‍ ಮಾಡಿದಂತಹ ಪೊಟೋಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಕೆಲವು ದಿನಗಳ ಹಿಂದೆಯಷ್ಟೆ ಇಟಲಿಯಲ್ಲಿ ನಡೆದ ವರುಣ್ ತೇಜ್ ಹಾಗೂ ಲಾವಣ್ಯ ಮದುವೆಗೆ ಹಾಜರಾಗಲು ಹೋಗುವಾಗ ಪವನ್ ಹಾಗೂ ಲೆಜಿನೋವಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ಹಾಗೂ ಪೊಟೋಗಳು ಭಾರಿ ವೈರಲ್ ಆಗಿತ್ತು.

ಇದೀಗ ಪವನ್ ಪತ್ನಿ ಅನಾ ಅನಾಥಾಶ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅನಾಥ ಮಕ್ಕಳ ಜೊತೆಗೆ ಆಕೆ ಕ್ರಿಸ್ ಮಸ್ ಆಚರಿಸಿದ್ದಾರೆ. ಹೈದರಾಬಾದ್ ನಲ್ಲಿರುವ ಬಾಲಾಜಿ ಸ್ವರ್ಣಪುರಿ ಕಾಲೋನಿಯಲ್ಲಿರುವ ಜಿವೋದಯ ಹೋಮ್ ಫಾರ್‍ ದಿ ಚಿಲ್ಡ್ರನ್ ಸಂಸ್ಥೆಗೆ ಆಕೆ ಭೇಟಿ ನೀಡಿದ್ದರು. ಅನಾಥ ಮಕ್ಕಳೊಂದಿಗೆ ಕೊಂಚ ಸಮಯ ಸಂತೋಷವಾಗಿ ಕಳೆದಿದ್ದಾರೆ. ಅವರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಅವರೊಂದಿಗೆ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ. ಇದರ ಜೊತೆಗೆ ಆಕೆ ಸಂಸ್ಥೆಗೆ ಬೇಕಾದ ಕೆಲವೊಂದು ಸರಕುಗಳನ್ನು ಸಹ ನೀಡಿದ್ದಾರೆ. ಈ ವೇಳೆ ಅನಾ ಕೊಣಿದೆಲಾ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪವನ್ ಕಲ್ಯಾಣ್ ಹಾಗೂ ಅನಾ ಲೆಜಿನೋವಾ ಕಳೆದ 2013 ರಲ್ಲಿ ಪ್ರೀತಿಸಿ ಮದುವೆಯಾದರು. ಆಕೆಯನ್ನು ತೀನ್ ಮಾರ್‍ ಸಿನೆಮಾ ಸಮಯದಲ್ಲಿ ಪ್ರೀತಿಸಿ ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡರು ಎನ್ನಲಾಗಿದೆ. ಇವರಿಬ್ಬರಿಗೂ ಪೊಲೆನಾ ಅಂಜನಾ ಹಾಗೂ ಮಾರ್ಕ್ ಶಂಕರ್‍ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.