News

ಪಕ್ಷಕ್ಕಾಗಿ ನೂರು ಕೋಟಿ ಬೆಲೆಬಾಳುವ ಆಸ್ತಿ ಮಾರುತ್ತಿದ್ದಾರಂತೆ ಪವರ್ ಸ್ಟಾರ್ ಪವನ್ ಕಲ್ಯಾಣ್, ವೈರಲ್ ಆದ ಸುದ್ದಿ……!

ಟಾಲಿವುಡ್ ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಸದ್ಯ ಆಂಧ್ರಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹೆಚ್ಚಿನ ಸಮಯವನ್ನು ಚುನಾವಣೆಯ ನಿಮಿತ್ತ ಮೀಸಲಿಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಸಹ ನಡೆಯಲಿದ್ದು, ಪವನ್ ಕಲ್ಯಾಣ್ ರವರು ಒಪ್ಪಿಕೊಂಡ ಸಿನೆಮಾಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಜನಸೇನಾ ಪಾರ್ಟಿ ಹಾಗೂ ನಾಯಕರನ್ನು ಚುನಾವಣೆಗೆ ರೆಡಿ ಮಾಡುತ್ತಿದ್ದಾರೆ. ಇದೀಗ ಚುನಾವಣೆಗಾಗಿ ಅವರು ನೂರು ಕೋಟಿ ಬೆಲೆಬಾಳುವಂತಹ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರಂತೆ.

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ನಿಮಿತ್ತ ಜನಸೇನಾ ಹಾಗೂ ಟಿಡಿಪಿ ನಡುವೆ ಮೈತ್ರಿ ಏರ್ಪಟ್ಟಿದೆ. ಈ ಮೈತ್ರಿಯಂತೆ ಜನಸೇನಾ ಪಕ್ಷಕ್ಕೆ 24 ಎಂ.ಎಲ್.ಎ ಹಾಗೂ 3 ಸಂಸದ ಸ್ಥಾನಗಳು ದೊರೆತಿದೆ. ಈ ಕಾರಣದಿಂದ ತಾವು ಸ್ಪರ್ಧೆ ಮಾಡಲಿರುವ ಎಲ್ಲಾ ಸ್ಥಾನದಲ್ಲಿ ಜಯ ಗಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಕಾರಣದಿಂದ ತುಂಬಾ ಹಣ ಸಹ ಬೇಕಾಗಿರುತ್ತದೆ. ಜನಸೇನಾ ಪಕ್ಷಕ್ಕೆ ದೇಣಿಗೆ ಇಲ್ಲದೇ ಪವನ್ ಕಲ್ಯಾಣ್ ಸಹ ತುಂಬಾನೆ ಕಷ್ಟಪಡುತ್ತಿದ್ದಾರೆ. ಚುನಾವಣಾ ಪ್ರಚಾರ ಎಂದರೇ ತುಂಬಾನೆ ಖರ್ಚಿನಿಂದ ಕೂಡಿರುವ ವ್ಯವಹಾರವಾಗಿದೆ. ಇತ್ತೀಚಿಗೆ ಪವನ್ ಕಲ್ಯಾಣ್ ಒಂದು ಹೆಲಿಕಾಪ್ಟರ್‍ ಬಾಡಿಗೆಗೆ ಸಹ ತೆಗೆದುಕೊಂಡಿದ್ದು, ಈ ಖರ್ಚನ್ನು ಭರಿಸಲು ಜನಸೇನ ಪಾರ್ಟಿ ಫಂಡ್ಸ್ ಸಾಲುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಪವನ್ ಕಲ್ಯಾಣ್ ರವರು ತಮ್ಮ ಆಸ್ತಿಯನ್ನು ಮಾರಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ, ಈಗಾಗಲೇ ಪವನ್ ಕಲ್ಯಾಣ್ ರವರು ಬೆಂಗಳೂರಿನಲ್ಲಿರುವ ಮನೆ, ಹೈದರಾಬಾದ್ ನಲ್ಲಿ ಸ್ಥಳವೊಂದನ್ನು ಮಾರಿದ್ದಾರಂತೆ. ಜನಸೇನಾ ಪಾರ್ಟಿಯಿಂದ ಸ್ಪರ್ಧೆ ಮಾಡುವಂತ ಅಭ್ಯರ್ಥಿಗಳ ಖರ್ಚು ಸಹ ಪವನ್ ಕಲ್ಯಾಣ್ ರವರ ಮೇಲೇ ಬೀಳುತ್ತದೆಯಂತೆ. ಈಗಾಗಲೇ ತಾನು ನಟಿಸುವಂತ ಸಿನೆಮಾಗಳ ಸಂಭಾವನೆಯಿಂದ 10 ಕೋಟಿ ಜನಸೇನಾ ಪಾರ್ಟಿಗೆ ಕೊಡುತ್ತಿದ್ದಾರೆ.  ಹೆಲಿಕಾಪ್ಟರ್‍ ಹಾಗೂ ಇತರೆ ಚುನಾವಣಾ ಖರ್ಚುಗಳಿಗಾಗಿ 20 ಕೋಟಿ ಆಸ್ತಿಯನ್ನು ಮಾರಿದ್ದಾರಂತೆ. ಸದ್ಯ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ. ಈ ಬಗ್ಗೆ ವಿವಿಧ ರೀತಿಯ ಅಭಿಪ್ರಾಯಗಳು ಬರುತ್ತಿದ್ದರೂ ಸಹ ಕೆಲವೊಂದು ಮೂಲಗಳಂತೆ ಪವನ್ ಕಲ್ಯಾಣ್ ನಿಜಕ್ಕೂ ಪಾರ್ಟಿಗಾಗಿ ಆಸ್ತಿ ಮಾರುತ್ತಿದ್ದಾರೆ ಎನ್ನಲಾಗುತ್ತಿದೆ.

Most Popular

To Top