ಅಭಿಮಾನದ ಪರಾಕಾಷ್ಟೆ, ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿದ ಮಹಿಳಾ ಅಭಿಮಾನಿ, ವೈರಲ್ ಆದ ವಿಡಿಯೋ….!

ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳಿಗೆ ಡೈ ಹಾರ್ಡ್ ಫ್ಯಾನ್ಸ್ ಇರುತ್ತಾರೆ. ಕೆಲವೊಮ್ಮೆ ಆ ಅಭಿಮಾನ ಮತಷ್ಟು ಮಿತಿ ಮೀರುತ್ತದೆ. ತಮ್ಮ ಅಭಿಮಾನದ ಸೆಲೆಬ್ರೆಟಿಗಳಿಗಾಗಿ ಕೆಲವೊಂದು ಕಡೆ ಪ್ರಾಣವನ್ನು ಸಹ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್‍ ನಟ ಕಿಚ್ಚ ಸುದೀಪ್ ಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೀಗ ಕಿಚ್ಚ ಸುದೀಪ್ ರವರ ಮಹಿಳಾ ಅಭಿಮಾನಿಯೊಬ್ಬರು ತನ್ನ ರಕ್ತದಲ್ಲಿ ಸುದೀಪ್ ರವರ ಚಿತ್ರ ಬಿಡಿಸಿ ತಮ್ಮ ಅಭಿಮಾನ ಸಾರಿದ್ದಾರೆ. ಈ ಸಂಬಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಿನೆಮಾ ಸೆಲೆಬ್ರೆಟಿಗಳಿಗೆ ಪ್ರಾಣಕೊಡುವಂತಹ ಅಪಾರ ಸಂಖ್ಯೆಯ ಅಭಿಮಾನಿಗಳಿರುತ್ತಾರೆ. ಆದರೆ ಕೆಲವೊಮ್ಮೆ ಆ ಅಭಿಮಾನ ಅತೀರೇಕ್ಕೆ ಹೋಗಿ ಕೆಲವರು ತಮ್ಮ ನಟ ನಟಿಯರನ್ನು ನೋಡಲು ಪ್ರಾಣವನ್ನು ಸಹ ಬಿಟ್ಟಿರುವಂತಹ ಅನೇಕ ಘಟನೆಗಳನ್ನು ನೋಡಿದ್ದೇವೆ. ಅದರಲ್ಲೂ ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಅಭಿಮಾನ ಮತಷ್ಟು ಜೋರಾಗಿದೆ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಅಭಿಮಾನದ ನಟ ನಟಿಯರಿಗಾಗಿ ಆಗಾಗ ವಾರ್‍ ಸಹ ನಡೆಯುತ್ತಿರುತ್ತದೆ. ಇದೀಗ ಕಿಚ್ಚ ಸುದೀಪ್ ರವರ ಅಭಿಮಾನಿಯೊಬ್ಬರು ತಮ್ಮ ರಕ್ತದಿಂದ ಆತನ ಚಿತ್ರ ಬಿಡಿಸಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟ ಕಿಚ್ಚ ಸುದೀಪ್ ಕನ್ನಡ ಸಿನಿರಂಗದಲ್ಲಿ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ಸಿನೆಮಾಗಳ ಪರವಾಗಿ ಮಾತ್ರವಲ್ಲದೇ ಅವರ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ರಕ್ತದಲ್ಲಿ ಲವ್ ಲೆಟರ್‍ ಬರೆದಿರುವಂತಹ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಕಿಚ್ಚ ಸುದೀಪ್ ಡೈ ಹಾರ್ಡ್ ಫ್ಯಾನ್ ಒಬ್ಬರು ತನ್ನ ರಕ್ತದಿಂದ ಕಿಚ್ಚ ಸುದೀಪ್ ರವರ ಚಿತ್ರ ಬಿಡಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯೆ ವೈಷ್ಣವಿ ಎಂಬಾಕೆ ರಕ್ತದಲ್ಲಿ ಕಿಚ್ಚ ಸುದೀಪ್ ರವರ ಚಿತ್ರವನ್ನು ಬಿಡಿಸಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಆಕೆಯ ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಈ ವಿಡಿಯೋ ನೋಡಿದ ಅನೇಕರು ಆಕೆಯ ಅಭಿಮಾನವನ್ನು ಮೆಚ್ಚಿಕೊಂಡಿದ್ದಾರೆ. ಬೇರೆಯವರು ಇಂತಹ ಹುಚ್ಚಾಟ ಬೇಕಿತ್ತಾ ಎಂದು ಅನೇಕರು ಕೈ ಮುಗಿಯುವಂತಹ ಎಮೋಜಿಗಳನ್ನು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಚ್ಚ ಸುದೀಪ್ ಸಹ ರಿಯಾಕ್ಟ್ ಆಗಿದ್ದಾರೆ. ನಮಸ್ಕಾರ ಎಮೋಜಿ ಮೂಲಕ ಅಭಿಮಾನಕ್ಕೆ ಕೈ ಮುಗಿದಿ‌ದ್ದಾರೆ.