ಐಪೋನ್ ಖರೀದಿ ಮಾಡಲು ಸ್ವಂತ ಮಗುವನ್ನೇ ಮಾರಿದ ದಂಪತಿ, ಅಷ್ಟಕ್ಕೂ ಆ ಫೋನ್ ಖರೀದಿಸಿದ್ದಾದರೂ ಏಕೆ ಗೊತ್ತಾ?

Follow Us :

ಇತ್ತೀಚಿಗೆ ಮೊಬೈಲ್ ಗಾಗಿ ಹುಚ್ಚು ಹೆಚ್ಚಾಗಿದ್ದು, ದುಬಾರಿ ಮೊಬೈಲ್ ಗಾಗಿ ಅನೇಕ ಕೆಟ್ಟ ಘಟನೆಗಳು ನಡೆದಿದೆ. ಮೊಬೈಲ್ ಗೀಳಿನಿಂದ ಅನೇಕರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಇದೀಗ ದುಬಾರಿ ಪೋನ್ ಖರೀದಿಸಲು ಹೆತ್ತ ಮಗುವನ್ನೆ ದಂಪತಿ ಮಾರಿಬಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಮೂಲದ ದಂಪತಿ ತಮ್ಮ ಎಂಟು ವರ್ಷದ ಮಗುವನ್ನು ಮಾರಿ ಐಪೋನ್ ಖರೀದಿಸಿದ್ದಾರೆ. ಅಷ್ಟಕ್ಕೂ ಆ ದಂಪತಿ ಮೊಬೈಲ್ ಖರೀದಿ ಮಾಡಿದ ಉದ್ದೇಶ ತಿಳಿದರೇ ನೀವು ಶಾಕ್ ಆಗುತ್ತೀರಾ.

ದುಬಾರಿ ಐಪೋನ್ ಖರೀದಿಯ ಬಗ್ಗೆ ಅನೇಕ ರೀಲ್ಸ್, ಮೀಮ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ನಾವು ನೋಡಿದ್ದೇವೆ. ಮನೆ ಮಾರಿ, ಕಿಡ್ನಿ ಮಾರಿ ಐಪೋನ್ ಖರೀದಿ ಮಾಡುವಂತ ರೀಲ್‌, ಮೀಮ್ಸ್ ನೋಡಿದ್ದೇವೆ. ಐಪೋನ್ ಅಷ್ಟೊಂದು ದುಬಾರಿ ಎಂದು ಅನೇಕರು ಆ ಮೂಲಕ ತಿಳಿಸುತ್ತಿರುತ್ತಾರೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಐಪೋನ್ ಖರೀದಿಗಾಗಿ ಒಂದು ವಿಚಿತ್ರ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ದಂಪತಿ ತಾವು ಹೆತ್ತ ಮಗುವನ್ನೇ ಮಾರಿ ಐಪೋನ್ ಖರೀದಿ ಮಾಡಿದಾರೆ. ಪಶ್ಚಿಮ ಬಂಗಾಳದಲ್ಲಿ ವಿಹರಿಸುತ್ತಾ ರೀಲ್ಸ್ ಮಾಡುವ ಕಾರಣಕ್ಕಾಗಿ ಐಪೋನ್ ಬೇಕು ಎಂದು ತಮ್ಮ ಮಗುವನ್ನೇ ಮಾರಿದ್ದಾರೆ.

ಪಶ್ಚಿಮ ಬಂಗಾಳದ ಮೂಲದ ದಂಪತಿ ತಮ್ಮ ಎಂಟು ವರ್ಷದ ಮಗುವನ್ನು ಐಪೋನ್ 14 ಖರೀದಿಸಲು ಮಾರಿಬಿಟ್ಟಿದದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ತಾಯಿಯನ್ನು ಸಹ ಬಂಧನ ಮಾಡಿದ್ದಾರೆ.  ಆದರೆ ಮಗುವಿನ ತಂದೆ ಜಯದೇಶ ಘೋಷ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ದಂಪತಿಯ ಮಗು ಕೆಲವು ದಿನಗಳಿಂದ ಕಾಣಿಸದೇ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮಗು ಕಾಣಿಸದೇ ಇದ್ದರೂ ಪೋಷಕರಲ್ಲಿ ಯಾವುದೇ ನೋವು ಕಾಣಿಸಿರಲಿಲ್ಲ. ಬಡವರಾಗಿದ್ದ ಜಯದೇವ್ ಬಳಿ ಐಪೋನ್ 14 ನೋಡಿ ಸ್ಥಳೀಯರಿಗೆ ಅನುಮಾನಗಳು ಮೂಡಿದೆ.  ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.