Film News

ನಿಗೂಢ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳ ತಲೆಗೆ ಹುಳ ಬಿಟ್ಟ ರಶ್ಮಿಕಾ, ಆಕೆಯ ಜೀವನದಲ್ಲಿ ಎಂಟ್ರಿ ಕೊಟ್ಟವರು ಯಾರು?

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್ ನಲ್ಲೂ ಭಾರಿ ಬೇಡಿಕೆಯಿರುವ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ರಶ್ಮಿಕಾ ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ತೆಲುಗು ಸಿನೆಮಾಗಳ ಜೊತೆಗೆ ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲೂ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಯಾನಿಮಲ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದನ್ನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೋಸ್ಟ್ ಒಂದು ಭಾರಿ ಸದ್ದು ಮಾಡುತ್ತಿದೆ. ಆಕೆ ಸಿನೆಮಾಗಳ ಜೊತೆಗೆ ಸೊಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿರುತ್ತಾರೆ.  ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಆಕೆ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಅವರು ಹಂಚಿಕೊಳ್ಳುವಂತಹ ಪೋಸ್ಟ್ ಗಳೂ ಸಹ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿರುತ್ತವೆ. ಯಾನಿಮಲ್ ಸಿನೆಮಾದಲ್ಲಿ ರಶ್ಮಿಕಾ ಕೆಲವೊಂದು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ ಕಾರಣದಿಂದ ಭಾರಿ ಸುದ್ದಿಯಾಗಿದ್ದರು. ಯಾನಿಮಲ್ ಸಿನೆಮಾದಲ್ಲಿನ ಕೆಲವೊಂದು ದೃಶ್ಯಗಳು ತುಂಬಾನೆ ಬೋಲ್ಡ್ ಆಗಿತ್ತು ಎನ್ನಲಾಗಿದೆ. ಇದೀಗ ಆಕೆ ನಿಗೂಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವಂತಹ ರಶ್ಮಿಕಾ ಮಂದಣ್ಣ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ನನ್ನ ಜೀವನದಲ್ಲಿ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂದು ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಇನ್ನೂ ಆಕೆ ಹಂಚಿಕೊಂಡ ಈ ಪೋಸ್ಟ್ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಜೀವನದಲ್ಲಿ ಎಂಟ್ರಿ ಕೊಟ್ಟ ಆ ನಿಗೂಡ ವ್ಯಕ್ತಿಯಾದರೂ ಯಾರು ಎಂದು ಅಭಿಮಾನಿಗಳು ತಲೆಗೆಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ರೌಡಿ ಹಿರೋ ಎಂದೇ ಕರೆಯಲಾಗುವ ವಿಜಯ್ ದೇವರಕೊಂಡ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇರುತ್ತದೆ. ಆಗಾಗ ಅವರು ಒಟ್ಟಿಗೆ ಕಾಣಿಸಿಕೊಳ್ಳುವ ಕಾರಣದಿಂದ ಈ ರೂಮರ್‍ ಮತಷ್ಟು ಹರಿದಾಡುತ್ತಿದೆ. ಇದೀಗ ರಶ್ಮಿಕಾ ಲೈಫ್ ನಲ್ಲಿ ಎಂಟ್ರಿ ಕೊಟ್ಟ ಆ ವ್ಯಕ್ತಿ ವಿಜಯ್ ದೇವರಕೊಂಡ ರವರೇ ಇರಬೇಕೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರಶ್ಮಿಕಾ ಹಾಗೂ ರಣಬೀರ್‍ ಅಭಿನಯದ ಯಾನಿಮಲ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲೇ ಕಲೆಕ್ಷನ್ ಮಾಡಿದೆ. ಇನ್ನೂ ಅಲ್ಲು ಅರ್ಜುನ್ ರವರ ಪುಷ್ಪಾ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top