News

10 ರೂಪಾಯಿ ಕೊಟ್ಟು ನಿರಂತರವಾಗಿ ಅಪ್ರಾಪ್ತ ಬಾಲಕಿಯ ಮೇಲೆ 68ರ ವೃದ್ದನಿಂದ ಅತ್ಯಾಚಾರ….!

ನಾಗರೀಕ ಸಮಾಜದಲ್ಲಿ ಕಾಮುಕರು ದಿನೇ ದಿನೇ ತಮ್ಮ ಕ್ರೂರ ಸ್ವಭಾವ ತೋರುತ್ತಿದ್ದಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಅವರ ಮನಸ್ಥಿತಿ ಬದಲಾಗುತ್ತಿಲ್ಲ ಎಂದೇ ಹೇಳಬಹುದಾಗಿದೆ. ಅಪ್ರಾಪ್ತರಿಂದ ಹಿಡಿದು ವಯೋವೃದ್ದರ ಮೇಲೂ ಸಹ ಅತ್ಯಾಚಾರಗಳು ನಡೆಯುತ್ತಿವೆ. ಇದೀಗ ಡಾರ್ಜಿಲಿಂಗ್ ನಲ್ಲಿ 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 68 ವರ್ಷದ ವೃದ್ದ ಹತ್ತು ರುಪಾಯಿ ಕೊಟ್ಟು ನಿರಂತರವಾಗಿ ಅತ್ಯಚಾರವೆಸಗಿದ ಆರೋಪದಲ್ಲಿ ಬಂಧಿಸಲಾಗಿದೆ.

ದಾಖಲಾದ ದೂರಿನ ಪ್ರಕಾರ ಭಾರತ-ನೇಪಾಳ ಗಡಿ ಬಳಿಯ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಬಾಲಕಿಯ ಮೇಲೆ 68 ರ ವೃದ್ದ ನಿರಂತರ ಅತ್ಯಾಚಾರವೆಸಗಿದ್ದಾನೆ. ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಅನೇಕ ಬಾರಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾನಂತೆ. ಸ್ಥಳೀಯ ನಿವಾಸಿಯಾದ ಆರೋಪಿ ಆಎಯ ಮೇಲೆ ಅತ್ಯಾಚಾರವೆಸಗಿ ಬಳಿಕ ಪ್ರತಿ ಬಾರಿ 10 ರೂಪಾಯಿ ನೀಡುತ್ತಿದ್ದನಂತೆ. ಜೊತೆಗೆ ಯಾರಿಗಾದರೂ ಈ ಬಗ್ಗೆ ಹೇಳಿದರೇ ಕತ್ತು ಹಿಸುಕಿ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದನಂತೆ.

ಇನ್ನೂ ಬಾಲಕಿ ಹೆದರಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ನೋವನ್ನು ತಾಳಲಾರದೆ ಆಕೆ ಈ ವಿಚಾರವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಬಾಲಕಿ ತನ್ನ ತಾಯಿಯ ಬಳಿ ವಿಚಾರ ತಿಳಿಸಿದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅತ್ಯಾಚಾರ ಮಾಡಿದ ಬಗ್ಗೆ ಯಾರಿಗಾದರೂ ಹೇಳಿದರೇ, ನಿನ್ನನ್ನು ಕೊಲ್ಲುತ್ತೇನೆ ಮತ್ತು ನಿನ್ನ ಕುಟುಂಬಕ್ಕೂ ಹಾನಿ ಮಾಡುತ್ತೇನೆ ಎಂದು ಆರೋಪಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

Most Popular

To Top