Film News

ಮಹೇಶ್ ಬಾಬು ಜೊತೆ ನಟಿಸಲು ಶ್ರೀಲೀಲಾ ಕಂಡಿಷನ್ಸ್? ಭಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ ಯಂಗ್ ಬ್ಯೂಟಿ..!

ಸಾಮಾನ್ಯವಾಗಿ ಸಿನಿರಂಗದಲ್ಲಿ ನಟ-ನಟಿಯರು ಹಿಟ್ ಸಿನೆಮಾಗಳ ಮೂಲಕ ಸ್ಟಾರ್‍ ಗಳಾಗುತ್ತಾರೆ. ಆದರೆ ಒಂದು ಪ್ಲಾಪ್ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದವರು ಕೆಲವರೇ ಇರುತ್ತಾರೆ. ಅವರಲ್ಲಿ ಕನ್ನಡ ಮೂಲದ ನಟಿ ಶ್ರೀಲೀಲಾ ಒಬ್ಬರಾಗಿದ್ದಾರೆ. ನಟಿ ಶ್ರೀಲೀಲಾ ಪೆಳ್ಳಿಸಂದಡಿ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗದೇ ಇದ್ದರೂ ಈ ಸಿನೆಮಾದ ಬಳಿಕ ಶ್ರೀಲೀಲಾಗೆ ಆಫರ್‍ ಗಳು ಹರಸಿ ಬಂದವು. ಬಹುಬೇಡಿಕೆ ನಟಿಯಾದ ಶ್ರೀಲೀಲಾ ಇದೀಗ ಮಹೇಶ್ ಬಾಬು ಜೊತೆ ನಟಿಸಲು ಕಂಡಿಷನ್ಸ್ ಹಾಕಿದ್ದಾರೆ ಎಂಬ ಸುದ್ದಿಗಳು ಸಿನಿವಲಯದಲ್ಲಿ ಕೇಳಿಬರುತ್ತಿದೆ.

ಸದ್ಯ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕವೇ ಆಕೆ ಓವರ್‍ ನೈಟ್ ಸ್ಟಾರ್‍ ನಟಿಯಾಗಿಬಿಟ್ಟರು. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಕೆ.ರಾಘವೇಂದ್ರರಾವ್ ಸಾರಥ್ಯದಲ್ಲಿ ಮೂಡಿಬಂದಿತ್ತು. ಈ ಸಿನೆಮಾದಲ್ಲಿ ರಾಘವೇಂದ್ರರಾವ್ ಆಕೆಯನ್ನು ಮತಷ್ಟು ಗ್ಲಾಮರಸ್ ಆಗಿ ತೋರಿಸಿದ್ದರು. ಈ ಹಾದಿಯಲ್ಲೇ ಆಕೆಗೆ ಸದ್ಯ ಸಾಲು ಸಾಲು ಅವಕಾಶಗಳು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಆಕೆ ಧಮಕಾ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಜೊತೆಗೆ ನಟಿಸಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ಸ್ ಮಾಡುತ್ತಿದೆ. ಈ ಹಾದಿಯಲ್ಲೇ ಆಕೆ ಮುಂದಿನ ಸಿನೆಮಾಗಳಿಗೆ ಭಾರಿ ಸಂಭಾವನೆಯನ್ನು ಸಹ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಜೊತೆಗೆ ಕಂಡಿಷನ್ಸ್ ಸಹ ಹಾಕುತ್ತಿದ್ದಾರಂತೆ.

ತೆಲುಗು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ SSMB28 ಎಂಬ ಟೈಟಲ್ ನಡಿ ಸಿನೆಮಾ ಒಂದು ಸೆಟ್ಟೇರಿದೆ. ಈ ಸಿನೆಮಾದಲ್ಲಿ ಶ್ರೀಲೀಲಾ ರನ್ನು ಸಹ ಆಯ್ಕೆ ಮಾಡಲಾಗಿತ್ತಂತೆ. ಈ ಸಿನೆಮಾದಲ್ಲಿ ನಟಿಸಲು ಶ್ರೀಲೀಲಾ ಇದೀಗ ಕಂಡಿಷನ್ಸ್ ಹಾಕುತ್ತಿದ್ದಾರಂತೆ. ಇನ್ನೂ ಆಕೆಯ ಡಿಮ್ಯಾಂಡ್ಸ್ ಕೇಳಿ ನಿರ್ದೇಶಕ ತ್ರಿವಿಕ್ರಮ್ ಸಹ ಶಾಕ್ ಆಗಿದ್ದಾರಂತೆ. ಈ ಸಿನೆಮಾದಲ್ಲಿ ಮೊದಲನೇ ನಟಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದು, ಎರಡನೇ ನಟಿಯಾಗಿ ಶ್ರೀಲೀಲಾ ರವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಸಿನೆಮಾದಲ್ಲಿ ಶ್ರೀಲೀಲಾ ಪಾತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನೂ ಶ್ರೀಲೀಲಾ ಈ ಸಿನೆಮಾಗಾಗಿ ಅನೇಕ ಕಂಡಿಷನ್ಸ್ ಹಾಕುತ್ತಿದ್ದಾರಂತೆ. ಅದು ಬೇಕು ಇದು ಬೇಕು, ಆ ಸೌಕರ್ಯಗಳಿರಬೇಕು ಎಂದು ಅನೇಕ ಕಂಡಿಷನ್ಸ್ ಹಾಕುತ್ತಿದ್ದಾರಂತೆ. ಈ ಎಲ್ಲಾ ಕಾರಣಗಳಿಂದ ಈ ಸಿನೆಮಾದಿಂದ ಆಕೆಯನ್ನು ಕೈ ಬಿಡಲಾಯಿತು ಎಂದೂ ಸಹ ಪ್ರಚಾರ ಆಗುತ್ತಿದೆ. ಸದ್ಯ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.

ನಟಿ ಶ್ರೀಲೀಲಾ ಅಭಿನಯದ ಧಮಾಕಾ ಸಿನೆಮಾ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಆಕೆ ಮಾಸ್ ಅಭಿನಯ ಹಾಗೂ ಡೈಲಾಗ್ ಗಳಿಗೆ ಥಿಯೇಟರ್‍ ಗಳಲ್ಲಿ ಶಿಳ್ಳೆಗಳು ಕೂಗುಗಳು ಕೇಳಿಬಂದಿದೆ. ಸದ್ಯ ಈ ಸಿನೆಮಾದ ಭಾರಿ ಸಕ್ಸಸ್ ಕಾರಣ ಶ್ರೀಲೀಲಾ ಕ್ರೇಜ್ ಹೆಚ್ಚಾಗಿದೆ. ಈಕೆಯ ಕಾಲ್ ಶೀಟ್ಸ್ ಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಸಹ ಕಾಯುತ್ತಿದ್ದಾರಂತೆ. ಇದೀಗ ಆಕೆಗೆ ಭಾರಿ ಆಫರ್‍ ಗಳು ಹುಡುಕಿಕೊಂಡು ಬರುತ್ತಿವೆ.

Most Popular

To Top