ನಾನು ಸತ್ತರೇ ನನ್ನ ಕುಟುಂಬ ಏನಾಗುತ್ತೆ ಎಂಬ ಭಯ ಕಾಡುತ್ತಿದೆ ಎಂದ ನಟಿ ಮೃಣಾಲ್ ಠಾಕೂರ್, ವೈರಲ್ ಆದ ಕಾಮೆಂಟ್ಸ್……!

Follow Us :

ಬಹುಬೇಡಿಕೆ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಎಂಬ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಕಾರ್ಯಕ್ರಮವೊಂದರಲ್ಲಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಮರಾಠಿ ಮೂಲದ ಯಂಗ್ ಬ್ಯೂಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರಿಗೆ ಪರಿಚಯವಾದರು. ಮೊದಲನೇ ಸಿನೆಮಾದ ಮೂಲಕವೇ ತೆಲುಗು ಪ್ರೇಕ್ಷರನ್ನು ಫಿದಾ ಮಾಡಿದರು. ನಟನೆ ಹಾಗೂ ಸೌಂದರ್ಯದ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದರು. ಮೊದಲನೇ ಸಿನೆಮಾದ ಮೂಲಕವೇ ಕ್ರೇಜಿ ಹಿರೋಯಿನ್ ಆದ ಮೃಣಾಲ್ ಬಾಲಿವುಡ್ ಜೊತೆಗೆ ಟಾಲಿವುಡ್ ನಲ್ಲೂ ಸಹ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಲೇ ಇದ್ದಾರೆ. ಸದ್ಯ ಆಕೆ ವಿಜಯ್ ದೇವರಕೊಂಡ ಜೊತೆಗೆ ಫ್ಯಾಮಿಲಿ ಸ್ಟಾರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ರವರ ಕಾಂಬಿನೇಷನ್ ನಲ್ಲಿ ಫ್ಯಾಮಿಲಿ ಸ್ಟಾರ್‍ ಸಿನೆಮಾ ಇದೇ ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸೆಲೆಬ್ರೆಟಿಯಾಗಿದ್ದರೇ ಈ ಪ್ರಪಂಚ ನಿನ್ನನ್ನು ಪ್ರೀತಿಸುತ್ತದೆ, ನಿನ್ನ ಕೆಲಸ ಸಮಾಜದಲ್ಲಿ ಬದಲಾವಣೆ ತರಬಹುದು. ಸೆಲೆಬ್ರೆಟಿ ಸ್ಟೇಟಸ್ ಇರುವಂತಹವರು ಶೂಟಿಂಗ್ ಕಾರಣದಿಂದ ಬೇರೆ ಬೇರೆ ಪ್ರದೇಶಗಳಿಗೆ ಹೋಗಬೇಕಾಗುತ್ತದೆ. ಅವಶ್ಯಕತೆ ಬಿದ್ದಾಗ ಕುಟುಂಬಸ್ಥರೊಂದಿಗೆ ಇರೋಕೆ ಆಗೊಲ್ಲ. ಕೆಲವೊಮ್ಮೆ ನನಗೂ ಸಾಮಾನ್ಯರಂತೆ ಜೀವನ ನಡೆಸಬೇಕು ಎಂದು ಅನ್ನಿಸುತ್ತದೆ.  ಹಳ್ಳಿ ಹುಡುಗಿಯಂತೆ 20 ವರ್ಷಕ್ಕೆ ಮದುವೆಯಾಗಿ ಮಕ್ಕಳನ್ನು ಹೆತ್ತು, ರೆಸ್ಟೋರೆಂಟ್ ಗಳಿಗೆ ಹೋಗಿ ಬರಬೇಕೆಂದು ಅನ್ನಿಸುತ್ತದೆ. ಸಾವಿನ ಬಗ್ಗೆ ಯೋಚನೆ ಮಾಡಿದರೇ ನನಗೆ ಭಯ ಆಗುತ್ತದೆ, ನಾನು ಸತ್ತರೇ ನನ್ನ ಕುಟುಂಬ ಏನಾಗುತ್ತೆ ಎಂದು ಆಲೋಚಿಸುತ್ತಿರುತ್ತೇನೆ ಎಂದು ಮೃಣಾಲ್ ಹೇಳಿದ್ದಾರೆ. ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.