ತಾತನಿಗೆ ಲವ್ ಆಗಿದೆ, 47ವರ್ಷದ ಮಹಿಳೆಯನ್ನು ಮದುವೆಯಾದ 76ರ ವೃದ್ಧ….!

Follow Us :

ಪ್ರೀತಿ ಕುರುಡು, ಪ್ರೀತಿಗೆ ವಯಸ್ಸಿನ ಜೊತೆ ಸಂಬಂಧವಿಲ್ಲ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಅದೇ ರೀತಿ ಅನೇಕರು ಅದು ನಿಜ ಎಂದೂ ಸಹ ನಿರೂಪಿಸಿದ್ದಾರೆ. ಇತ್ತೀಚಿಗೆ ಕೆಲವರು ಸೋಷಿಯಲ್ ಮಿಡಿಯಾ ಮೂಲಕ ಪ್ರೀತಿಸಿ ದೇಶದ ಗಡಿ ದಾಟಿ ಹೋಗಿ ಮದುವೆಯಾಗಿದ್ದಾರೆ. ಇದೀಗ 76 ವರ್ಷ ವಯಸ್ಸಿನ ವೃದ್ದನೋರ್ವ 47 ವರ್ಷದ ಮಹಿಳೆಯನ್ನು ಪ್ರೀತಿಸಿ ವಿವಾಹವಾಗಿರುವ ಘಟನೆಯೊಂದು ನಡೆದಿದೆ.

ರಾಕಿಂಗ್ ಸ್ಟಾರ್‍ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಡ್ರಾಮಾ ಸಿನೆಮಾದಲ್ಲಿ ಸಹ ವೃದ್ದರಿಗೆ ಮದುವೆ ಮಾಡಿಸುವ ದೃಶ್ಯವೊಂದಿರುತ್ತದೆ. ವೀಸೋ ಗಾಳಿಗೂ, ಬೀಳೋ ಮರಕ್ಕೂ ಲವ್ವಾಗಿದೆ ಎಂದು ಡೈಲಾಗ್ ಸಹ ಇದೆ. ಅದೇ ರೀತಿ  ಒಡಿಶಾದಲ್ಲಿ ಸಹ ನಡೆದಿದೆ. ಒಡಿಶಾದ ಗಂಜಾಂ ಜಿಲ್ಲೆಯ ಸನಖೆಮಂಡಿ ವ್ಯಾಪ್ತಿಯ ಅಡಪಾಡಾ ಎಂಬ ಗ್ರಾಮದಲ್ಲಿ ಈ ಮದುವೆ ನಡೆದಿದೆ.. ಗ್ರಾಮದ 76 ವರ್ಷ ವಯಸ್ಸಿನ ವೃದ್ದ ಹಾಗೂ 47 ವರ್ಷ ವಯಸ್ಸಿನ ಮಹಿಳೆಯನ್ನು ಮದುವೆಯಾಗಿದ್ದಾರೆ. ಕಳೆದ ಜು.19 ರಂದು ಈ ದಂಪತಿ ಭಂಜಾನಗರದ ಸಬ್ ರಿಜಿಸ್ಟ್ರಾರ್‍ ಕಚೇರಿಯಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.

76 ವರ್ಷದ ರಾಮಚಂದ್ರ ಸಾಹು ಹಾಗೂ 47 ವರ್ಷದ ಸುರೇಖಾ ಸಾಹು ರವರಯ ಸುಮಾರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದರಂತೆ. ಅಡಪದ ಗ್ರಾಮದ ರಾಮಚಂದ್ರ ಸಾಹು ಹಾಗೂ ಕುಲಾಡ್ ಗ್ರಾಮ ಸುರೇಖಾ ಸಾಹು ಮದುವೆಯಾಗಲು ತೀರ್ಮಾನ ತೆಗೆದುಕೊಂಡಿದ್ದರಂತೆ. ರಾಮಚಂದ್ರ ಸಾಹು ಮೊದಲ ಪತ್ನಿ ಕೆಲವು ವರ್ಷಗಳ ಹಿಂದೆಯಷ್ಟೆ ಮೃತಪಟ್ಟಿದ್ದರಂತೆ. ಏಳು ವರ್ಷಗಳ ಹಿಂದದೆ ಕುಲಾಡ್ ಎಂಬ ಗ್ರಾಮದಲ್ಲಿ ನಡೆದಂತಹ ಉತ್ಸವದ ವೇಳೆ ಅವರಿಬ್ಬರು ಭೇಟಿಯಾಗಿದ್ದರಂತೆ. ಬಳಿಕ ಇಬ್ಬರೂ ತಮ್ಮ ಮೊಬೈಲ್ ಸಂಖ್ಯೆಗಳನ್ನು ಸಹ ಬದಲಿಸಿಕೊಂಡಿದ್ದಾರೆ. ಮೊದಲಿಗೆ ಸ್ನೇಹಿತರಂತೆ ಮಾತನಾಡಿಕೊಳ್ಳುತ್ತಿರುವ ಈ ಜೋಡಿ ಪ್ರೀತಿ ಮಾಡಿಕೊಳ್ಳಲು ಶುರು ಮಾಡಿದ್ದರಂತೆ. ಇನ್ನೂ ಇಬ್ಬರೂ ಮದುವೆಯಾಗಲು ನಿರ್ಧರಿಸಿ ಕೆಲವು ದಿನಗಳ ಹಿಂದೆಯಷ್ಟೆ ಮದುವೆಯಾಗಿದ್ದಾರೆ.

ಇನ್ನೂ ಈ ಬಗ್ಗೆ ರಾಮಚಂದ್ರ ಸಾಹು ಸಹ ರಿಯಾಕ್ಟ್ ಆಗಿದ್ದಾರೆ. ಮೊದಲಿಗೆ ನಾವಿಬ್ಬರು ಕುಲಾಡ್ ಹಳ್ಳಿಯಲ್ಲಿ ನಡೆದ ಹಬ್ಬದಲ್ಲಿ ಭೇಟಿಯಾಗಿದ್ದೇವು. ಮೊದಲ ಭೇಟಿಯಲ್ಲೇ ನಾನು ಅವಳಿಗೆ ಪ್ರಪೋಸ್ ಮಾಡಲು ನಿರ್ಧರಿಸಿದ್ದೆ. ಬಳಿಕ ಮದುವೆಯಾಗುವ ಬಗ್ಗೆ ಆಕೆಯ ಬಳಿ ಕೇಳಿದ್ದೆ. ಆಕೆ ಸಹ ಸಂತೋಷದಿಂದ ಒಪ್ಪಿಕೊಂಡಳು ಎಂದಿದ್ದಾರೆ. ಅದೇ ರೀತಿ ಸುರೇಖಾ ಸಾಹು ಸಹ ತಮ್ಮ ಪ್ರೀತಿ ಮದುವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.