Film News

ಮಹಿಳೆಯರ ಒಳ ಉಡುಪುಗಳ ಬಗ್ಗೆ ಮಾಡಿದ ಹಳೇಯ ಟ್ವೀಟ್, ಟ್ರೋಲ್ ಆದ ಬಾಲಿವುಡ್ ಬಿಗ್ ಬಿ ಅಮಿತಾಬ್……!

ದೇಶದ ಸಿನಿರಂಗದಲ್ಲಿ ದೊಡ್ಡ ನೇಮ್, ಫೇಮ್ ಹೊಂದಿರುವ ನಟರಲ್ಲಿ ಅಮಿತಾಬ್ ಬಚ್ಚನ್ ಅಗ್ರ ಸ್ಥಾನದಲ್ಲಿದ್ದಾರೆ. ಇಂದಿಗೂ ಸಹ ಅಮಿತಾಬ್ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಂದಿಗೂ ಸಹ ಅಮಿತಾಬ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಅಮಿತಾಬ್ ಇದೀಗ ಮಹಿಳೆಯರ ಬ್ರಾ ಹಾಗೂ ಪ್ಯಾಂಟಿ ಬಗ್ಗೆ ಮಾಡಿದ ಹಳೇಯ ಟ್ವೀಟ್ ಕಾರಣದಿಂದ ಟ್ರೋಲ್ ಆಗಿದ್ದಾರೆ.

ಬಾಲಿವುಡ್ ಸಿನಿರಂಗದ ಮೇರು ನಟ ಬಿಗ್ ಬಿ ಎಂದೇ ಕರೆಯಲಾಗುವ ಅಮಿತಾಬ್ ಬಚ್ಚನ್ ಸಿನೆಮಾಗಳ ಮೂಲಕ ಭಾರಿ ಫೇಂ ಸಂಪಾದಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಸರಳ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಸಹ ಗೆದಿದ್ದಾರೆ. ಇನ್ನೂ ಅಮಿತಾಬ್ ಹೆಚ್ಚಾಗಿ ಟ್ವಿಟರ್‍ ಬಳಸುತ್ತಾರೆ. ಸುಮಾರು ದಶಕದಿಂದ ಅಮಿತಾಬ್ ಸೋಷಿಯಲ್ ಮಿಡಿಯಾದಲ್ಲಿ ಸಕ್ರೀಯರಾಗಿದ್ದಾರೆ. ಇನ್ನೂ ಮಹಿಳೆಯರ ಒಳ ಉಡುಪುಗಳ ಅಮಿತಾಬ್ ಮಾಡಿದಂತಹ ಟ್ವೀಟ್ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಸುಮಾರು ದಿನಗಳ ಹಿಂದೆ ಮಾಡಿದ ಟ್ವೀಟ್ ಇದೀಗ ಮತ್ತೆ ಚರ್ಚೆಯಾಗುತ್ತಿದ್ದು, ಅಮಿತಾಬ್ ರವರನ್ನು ಹಿಗ್ಗಾಮುಗ್ಗಾ ಟ್ರೋಲ್ ಸಹ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಮಿತಾಬ್ ಟ್ವೀಟ್ ನಲ್ಲಿ ಏನು ಹಾಕಿದ್ದರು ಎಂಬ ವಿಚಾರಕ್ಕೆ ಬಂದರೇ,

ನಟ ಅಮಿತಾಬ್ ಬಚ್ಚನ್ ಕಳೆದ ಜೂನ್ 12, 2010 ರಂದು ಮಹಿಳೆಯರ ಒಳ ಉಡುಪುಗಳ ಬಗ್ಗೆ ಟ್ವೀಟ್ ಮಾಡಿದ್ದರು. ಬ್ರಾ ಏಕವಚನ ಮತ್ತು ಪ್ಯಾಂಟೀಸ್ ಬಹುವಚನ ಏಕೆ ಎಂದು ಟ್ವಿಟ್ ಮಾಡಿದ್ದರು. ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.  ಇದೀಗ ಮತ್ತೆ ಟ್ವೀಟ್ ಅನ್ನು ರೆಡ್ಡಿಟ್ ಶೇರ್‍ ಮಾಡಿತ್ತು. ಇದಕ್ಕೆ ಅಮಿತಾಬ್ ರವರನ್ನು ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈ ಪೋಸ್ಟ್ ಗೆ ಇದು ಒಳ್ಳೆಯ ಪ್ರಶ್ನೆಯಾಗಿದ್ದು, ಮುಂದಿನ ಕೆಬಿಸಿ ಸೀಸನ್ ನಲ್ಲಿ ಕೇಳಿ ಎಂದರೇ, ಮತ್ತೋರ್ವ ಈ ಡೌಟ್ ಇಂದೇ ಇತ್ಯರ್ಥ ಆಗಬೇಕೆಂದು, ಮತ್ತೆ ಕೆಲವರು ನಿಮ್ಮಿಂದ ನಾವು ಇಂತಹ ಟ್ವೀಟ್ ನಿರೀಕ್ಷೆ ಮಾಡಿರಲಿಲ್ಲ ಎಂದೂ, ಮತ್ತೆ ಕೆಲವರು ನಿಜಕ್ಕೂ ಬಿಗ್ ಬಿ ಈ ಟ್ವೀಟ್ ಮಾಡಿದ್ರಾ ಎಂದು ಅನುಮಾನ ಸಹ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅಮಿತಾಬ್ ಮಾಡಿದ ಹಳೇಯ ಟ್ವೀಟ್ ಮತ್ತೆ ಸದ್ದು ಮಾಡುತ್ತಿದೆ. ಸದ್ಯ ಅಮಿತಾಬ್ ಬಹುನಿರೀಕ್ಷಿತ ಕಲ್ಕಿ 2898AD ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಪ್ಯಾನ್ ವರ್ಲ್ಡ್‌ ಸಿನೆಮಾ ಆಗಿರಲಿದೆ. ಇನ್ನೂ  ಈ ಸಿನೆಮಾ ಭಾರಿ ನಿರೀಕ್ಷೆ ಹುಟ್ಟಿಸಿದ್ದು, 2024 ರ ಮೊದಲಾರ್ಧದಲ್ಲಿ ಈ ಸಿನೆಮಾ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

Most Popular

To Top