ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್, ಅದೇ ಆಕೆಯ ಕೊನೆಯ ಸಿನೆಮಾ ಅಂತೆ…..!

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಅನೇಕ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದು ಸುಳ್ಳಾ, ಸತ್ಯಾನಾ ಎಂಬುದು ಒಂದು ಕಡೆಯಿದ್ದರೇ, ಸುದ್ದಿ ಹರಿದು ಬಂದರೇ ಸಾಕು ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿಯವರ ಬಗ್ಗೆ ಸಹ ಸುದ್ದಿಯೊಂದು ಹರಿದಾಡುತ್ತಿದೆ. ಆ ಸುದ್ದಿ ಆಕೆಯ ಅಭಿಮಾನಿಗಳಿಗೆ ಬೇಸರದ ವಿಚಾರ ಎಂದೇ ಹೇಳಬಹುದಾಗಿದೆ. ಆಕೆ ಮಿಸ್ ಶೆಟ್ಟಿ ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದ ಬಳಿಕ ಬೇರೆ ಯಾವುದೇ ಸಿನೆಮಾದಲ್ಲಿ ನಟಿಸುವುದಿಲ್ಲವಂತೆ. ಸದ್ಯ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿದೆ. ಬಾಹುಬಲಿ ಸೀರಿಸ್ ಬಳಿಕ ಅನುಷ್ಕಾ ಭಾಗಮತಿ, ನಿಶ್ಯಬ್ದಂ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಇತ್ತೀಚಿಗೆ ಆಕೆ ದಪ್ಪ ಆಗಿದ್ದಾರೆ. ಈ ಕಾರಣದಿಂದ ಆಕೆ ಸಿನೆಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಅನುಷ್ಕಾಶೆಟ್ಟಿ ಯುವಿ ಕ್ರಿಯೇಷನ್ ಬ್ಯಾನರ್‍ ನಟಿ ಯಂಗ್ ಹಿರೋ ನವೀನ್ ಪೊಲಿಶೆಟ್ಟಿ ಜೊತೆ ಸಿನೆಮಾ ಒಂದರಲ್ಲಿ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ಸಹ ಬಿಡುಗಡೆಯಾಗಲಿದೆ. ಕನ್ನಡ ನಾಡಿನಿಂದ ಬಂದ ಅನುಷ್ಕಾ ಶೆಟ್ಟಿ ಸೌತ್ ಸಿನೆಮಾಗಳ ಜೊತೆಗೆ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸಿ ಸ್ಟಾರ್‍ ಆಗಿದ್ದಾರೆ. ಅನೇಕ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಸಹ ಭಾರಿ ಫೇಂ ಪಡೆದುಕೊಂಡಿದ್ದರು.

ನಟಿ ಅನುಷ್ಕಾ ಶೆಟ್ಟಿ ಸ್ಟಾರ್‍ ನಟಿಯಾದರೂ ಸಹ ಎಂದೂ ಸಹ ಆಕೆ ದರ್ಪ ತೋರಲಿಲ್ಲ. ಸುಮಾರು ವರ್ಷಗಳ ಬಳಿಕ ಅನುಷ್ಕಾ ಮಿಸ್ ಶೆಟ್ಟಿ, ಮಿಸಸ್ ಪೊಲಿಶೆಟ್ಟಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದ ಬಳಿಕ ಆಕೆ ಸಿನೆಮಾಗಳಿಗೆ ಬ್ರೇಕ್ ನೀಡಲಿದ್ದಾರಂತೆ. ಇದೇ ಆಕೆಯ ಕೊನೆಯ ಸಿನೆಮಾ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದೆ. ಸಿನೆಮಾಗಳನ್ನು ಬಿಟ್ಟು ಆಕೆ ಮದುವೆಯಾಗಿ ಸೆಟಲ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸಿನೆಮಾದ ಬಿಡುಗಡೆಯಾದ ಬಳಿಕ ಆಕೆ ಸಿನೆಮಾಗಳಿಂದ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಸಿನಿವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದು ಇನಷ್ಟೆ ತಿಳಿದುಬರಬೇಕಿದೆ.

ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಅನುಷ್ಕಾ ತೆಲುಗು, ತಮಿಳು ಭಾಷೆಗಳಲ್ಲಿ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಖಾತೆಯಲ್ಲಿ ಅರುಂಧತಿ, ಬಾಹುಬಲಿ, ಭಾಗಮತಿ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಿವೆ. ಸದ್ಯ ಆಕೆ ಮಿಸ್ ಶೆಟ್ಟಿ, ಮಿಸಸ್ ಪೊಲಿಶೆಟ್ಟಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.