61ರ ಮುದುಕನಿಗೆ 16 ರ ಬಾಲಕಿಯ ಜೊತೆಗೆ ಅಕ್ರಮ ಸಂಬಂಧ, ಕೊಚ್ಚಿ ಕೊಂದ ಯುವತಿ ತಂದೆ……!

Follow Us :

ನಾಗರೀಕ ಸಮಾಜದಲ್ಲಿ ಇಡೀ ಮನುಕುಲ ತಲೆ ತಗ್ಗಿಸುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಉತ್ತರ ಪ್ರದೇಶದ ಹಮೀರ್‍ ಪುರ ಎಂಬ ಜಿಲ್ಲೆಯಲ್ಲಿ ಮನುಕುಲ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. 61 ವರ್ಷದ ವ್ಯಕ್ತಿಯ ಜೊತೆಗೆ 16 ವರ್ಷ ಯುವತಿ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಷಗೊಂಡ ಯವತಿಯ ತಂದೆ ಕೊಡಲಿಯಿಂದ ಆ ವೃದ್ದನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.

ಉತ್ತರ ಪ್ರದೇಶದ ಹಮೀರ್‍ ಪುರ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತನನ್ನು 61 ವರ್ಷದ ರಾಮ್ ಅಸರೆ ಕುಶ್ವಾಹ ಎಂದು ಗುರ್ತಿಸಲಾಗಿದೆ. ಕೊಲೆಯಾದ ವೃದ್ದನಿಗೆ ಎಂಟು ಜನ ಹೆಣ್ಣು ಮಕ್ಕಳಿದ್ದಾರೆ. ಇದೀಗ ಮೃತ ರಾಮ್ ಅಸರೆ ಕುಶ್ವಾಹ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ 16 ಸಂತ್ರಸ್ತೆ ಯುವತಿ ಗರ್ಭಿಣಿ ಎಂದು ತಿಳಿದುಬಂದಿದ್ದು, ಇದಕ್ಕೆ ಕಾರಣ ಯಾರು ಎಂಬುದನ್ನು ಕೇಳಿದಾಗ 61 ಹರೆಯದ ರಾಮ್ ಅಸರೆ ಎಂದು ಹೇಳಿದ್ದಾಳೆ. ಈ ವಿಚಾರವನ್ನು ಕೇಳಿದ ಕೂಡಲೇ ಆಕ್ರೋಷಗೊಂಡ ಬಾಲಕಿಯ ತಂದೆ ಕೊಡಲಿಯಿಂದ ಗಂಭೀರವಾಗಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ. ಗಾಯಗೊಂಡ ವೃದ್ದನನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಮೃತ ವೃದ್ದೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಗೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ. ಮೃತ ರಾಮ್ ಅಸರೆ ಕುಶ್ವಾಹ ಹಮೀರ್‍ ಪುರದ ಜಲಾಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂಲಿವಾಸಾ ಗ್ರಾಮದ ನಿವಾಸಿಯಾಗಿದ್ದರು. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಇನ್ನೂ ರಾಮ್ ಅಸರೆ ಗೆ ಎಂಟು ಮಂದಿ ಹೆಣ್ಣು ಮಕ್ಕಳಿದ್ದು, ಈ ಪೈಕಿ ಆರು ಮಂದಿಗೆ ಮದುವೆಯಾಗಿದೆ. ಇಬ್ಬರು ಹೆಣ್ಣು ಮಕ್ಕಳಿಗೆ ಇನ್ನೂ ಮದುವೆಯಾಗಿಲ್ಲ. ಸದ್ಯ ಕಲೆ ಮಾಡಿದ ಆರೋಪಿಗಳ ವಿರುದ್ದ ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ಮೃತರ ಅಳಿಯ ಬ್ರಿಜೇಂದ್ರ ಕುಶ್ವಾಹ ದೂರು ನೀಡಿದ್ದಾರೆ.