ನಿಹಾರಿಕಾ ಕಾಮೆಂಟ್ಸ್ ಗೆ ಸ್ಟ್ರಾಂಗ್ ಆಗಿಯೇ ರಿಯಾಕ್ಷನ್ ಕೊಟ್ಟ ಚೈತನ್ಯ, ನೋವು ಎರಡೂ ಕಡೆ ಇರುತ್ತೆ ಎಂದ ಚೈತನ್ಯ…..!

Follow Us :

ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಏರ್ಪಟ್ಟು ವಿಚ್ಚೇದನ ಪಡೆದುಕೊಂಡಿದ್ದಾರೆ. ಕಳೆದ ವರ್ಷವಷ್ಟೆ ಈ ಜೋಡಿ ಅಧಿಕೃತವಾಗಿ ವಿಚ್ಚೇದನ ಪಡೆದುಕೊಂಡರು. ಸದ್ಯ ನಿಹಾರಿಕಾ ಸಿನೆಮಾಗಳ ಮೇಲೆ ತುಂಬಾನೆ ಪೋಕಸ್ ಇಟ್ಟಿದ್ದಾರೆ. ಸಿನೆಮಾಗಳಲ್ಲಿ ನಟಿಯಾಗಿ ಸಕ್ಸಸ್ ಕಾಣಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮದುವೆಗೂ ಮುಂಚೆ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆಕೆ ವೆಬ್ ಸಿರೀಸ್ ಹಾಗೂ ಸಿನೆಮಾಗಳಲ್ಲಿ ನಾಯಕಿಯಾನಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಪಕಿಯಾಗಿ ಸಹ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಕಳೆದ ಡಿಸೆಂಬರ್‍ 2020ರ ಡಿಸೆಂಬರ್‍ 9 ರಂದು ರಾಜಸ್ಥಾನದ ಜೈಪುರದಲ್ಲಿ ಚೈತನ್ಯ ಹಾಗೂ ನಿಹಾರಿಕಾ ರವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು. ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಹೆಸರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಇಬ್ಬರ ನಡುವೆ ಕೆಲವೊಂದು ವಿಬೇಧಗಳು ಹುಟ್ಟಿಕೊಂಡು ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ಅವರಿಬ್ಬರು ವಿಚ್ಚೇದನ ಪಡೆದುಕೊಂಡಿದ್ದು ಯಾಕೆ ಎಂಬ ಕಾರಣ ಮಾತ್ರ ನಿಗೂಡವಾಗಿಯೇ ಇತ್ತು. ಆದರೆ ನಿಹಾರಿಕಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ಇತ್ತ ಚೈತನ್ಯ ಜೊನ್ನಲಗಡ್ಡ ಸಹ ಈ ಕುರಿತು ರಿಯಾಕ್ಟ್ ಆಗಿದ್ದಾರೆ.

ಸಂದರ್ಶನದಲ್ಲಿ ನಿಹಾರಿಕಾ ಮಾತನಾಡುತ್ತಾ ಮದುವೆ ಹಾಗೂ ಪ್ರೊಫೆಷನ್ ಗೂ ಏನು ಸಂಬಂಧ, ಮದುವೆಯಾದರೇ ನಟಿಸಬಾರದೇ, ನನಗೆ ಆಕ್ಟಿಂಗ್ ಅಂದರೇ ಇಷ್ಟ. ಆಗಿದ್ದು ಏನೋ ಆಗೋಗಿದೆ. ನನಗೆ ಇಷ್ಟವಾದಂತೆ ಬದುಕುವುದೇ ಸಂತೋಷ. ಇನ್ನು ಮುಂದೆ ಎರಡು ಪಟ್ಟು ಎನರ್ಜಿಯಿಂದ ಮುಂದೆ ಹೋಗುತ್ತೇನೆ. ಇನ್ನು ಮುಂದೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕಾಮೆಂಟ್ಸ್ ಮಾಡಿದ್ದರು. ಈ ಸಂದರ್ಶನವನ್ನು ನಡೆಸಿದ ನಿಖಿಲ್ ಎಂಬಾತ ಸೋಷಿಯಲ್ ಮಿಡಿಯಾದಲ್ಲಿ ಸಂದರ್ಶನದ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋಗೆ ಚೈಥನ್ಯ ರಿಯಾಕ್ಟ್ ಆಗಿದ್ದಾರೆ. ನಿಹಾರಿಕಾ ಮೇಲೆ ಇರುವಂತಹ ನೆಗೆಟಿವಿಟಿಯನ್ನು ತೊಡೆದು ಹಾಕಲು ನೀವು ಮಾಡುತ್ತಿರುವ ಪ್ರಯತ್ನ ತುಂಬಾನೆ ದೊಡ್ಡದು. ವೈಯುಕ್ತಿಕ ಬಿಕ್ಕಟ್ಟನ್ನು ಎದುರಿಸುವುದು ಸುಲಭದ ಕೆಲಸವಲ್ಲ. ಸಂತ್ರಸ್ತೆಯ ಟ್ಯಾಗ್ ಗಳನ್ನು ಬಳಸಿ ಪ್ರಚಾರ ಗಿಟ್ಟಿಸುವ ಕೆಲಸ ಸರಿಯಲ್ಲ. ವಾಸಿಯಾಗುತ್ತಿರುವ ಗಾಯದ ಮೇಲೆ ಮತ್ತೆ ಈ ರೀತಿಯಾಗಿ ಮಾಡುವುದು ಸರಿಯಲ್ಲ. ವಿಚ್ಚೇದನದ ವಿಚಾರದಲ್ಲಿ ಎರಡೂ ಕಡೆ ಪ್ರಭಾವ ಇರುತ್ತದೆ ಎಂಬುದನ್ನು ಮರೆಯಬಾರದು. ಇಂತಹ ವ್ಯವಹಾರಗಳಲ್ಲಿ ಬೇರೆಯವರ ಬಗ್ಗೆ ಆಸಕ್ತಿ ವಹಿಸುವುದು ಬಿಡಿ. ಸಂಪೂರ್ಣವಾಗಿ ವಿವರಗಳು ತಿಳಿಯದೇ ಜಡ್ಜ್ ಮಾಡುವುದು ನಿಲ್ಲಿಸಿ ಎಂದು ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಆಗಿದ್ದಾರೆ.