ನಾಗರ ಪಂಚಮಿಯಂದು ನಿಜ ನಾಗರನಿಗೆ ಪೂಜೆ ಮಾಡಿದ 1ನೇ ತರಗತಿ ಹುಡುಗ, ವೈರಲ್ ಆದ ಪೊಟೋಸ್….!

ನಾಗರ ಪಂಚಮಿ ಹಬ್ಬದಂದು ಭಕ್ತರು ಹುತ್ತಗಳಿಗೆ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ನಿಜವಾದ ನಾಗರಹಾವಿಗೆ ಪೂಜೆ ಮಾಡಿದ್ದಾನೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾವುಗಳನ್ನು ಕಂಡರೇ ಭಯದಿಂದ ಓಡಿ ಹೋಗುವವರು ಒಂದು ಕಡೆಯಾದರೇ, ಸಾಯಿಸಲು ಮುಂದಾಗುವವರ ಒಂದು ಕಡೆ ಎನ್ನಬಹುದು. ಇದೀಗ ಬಾಲಕ ನಾಗರನಿಗೆ ಪೂಜೆ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಶಾಂತ್ ಹುಲೇಕಲ್ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ಹಾವುಗಳ ರಕ್ಷಣೆಯಲ್ಲಿ ಪ್ರಶಾಂತ್ ಹುಲೇಕಲ್ ತುಂಬಾನೆ ಹೆಸರುವಾಸಿ.  ಅವರ ಮಗನೇ ಇದೀಗ ನಿಜ ನಾಗರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾನೆ. ಅಪ್ಪನ ಜೊತೆಗೆ ಮಗ ಧೀರಜ್ ಸಹ ಹಾವುಗಳನ್ನು ರಕ್ಷಣೆ ಮಾಡುವ ವಿದ್ಯೆಯನ್ನು ಕಲಿತಿದ್ದಾನೆ. ಇದೀಗ ನಾಗರ ಪಂಚಮಿಯಂದು ಇಬ್ಬರೂ ಸೇರಿ ಹಾವಿಗೆ ಪೂಜೆ ಮಾಡಿದ್ದಾರೆ.  ಒಂದನೇ ತರಗತಿಯ ಧೀರಜ್ ನಿಜವಾದ ನಾಗರಹಾವಿಗೆ ಪೂಜೆ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಪ್ರತೀ ವರ್ಷ ಇದೇ ಮಾದರಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಿರುತ್ತಾರೆ.

ಇನ್ನೂ ನಾಗರ ಪಂಚಮಿಯಂದು ನಿಜವಾದ ನಾಗರ ಹಾವಿಗೆ ಪೂಜೆ ಮಾಡಿ, ಸುರಕ್ಷಿತವಾಗಿ ಹಾವನ್ನು ಕಾಡಿಗೆ ಬಿಡಲಾಗಿದೆ. ಇನ್ನೂ ಇದೇ ರೀತಿ ಪ್ರತಿ ವರ್ಷ ಸಹ ನಿಜವಾದ ನಾಗರಹಾವಿಗೆ ಪೂಜೆ ಸಲ್ಲಿಸಲಾಗುತ್ತದೆ. ನಾಗರಹಾವು ಸಹ ನಮ್ಮಂತೆ ಪ್ರಾಣಿ ಎಂದು ಭಾವಿಸಿ ಈ ಕುಟುಂಬ ಪ್ರತೀ ವರ್ಷ ಹಬ್ಬವನ್ನು ಆಚರಿಸುತ್ತಾರೆ. ಪ್ರತೀ ವರ್ಷ ಈ ಆಚರಣೆಯನ್ನು ವೀಕ್ಷಣೆ ಮಾಡಲು ಅನೇಕರು ಪ್ರಶಾಂತ್ ಹುಲೇಕಲ್ ರವರ ಮನೆಗೆ ಬರುತ್ತಾರೆ. ಯಾರೂ ಕೂಡ ಹಾವುಗಳನ್ನು ಸಾಯಿಸದೇ ಅವು ನಮ್ಮಂತೆ ಜೀವಿಗಳು ಎಂದು ಭಾವಿಸಿ ಪೂಜೆ ಮಾಡಿ ಎಂದು ಆ ಕುಟುಂಬ ಮನವಿ ಸಹ ಮಾಡುತ್ತಿರುತ್ತದೆ.