ಮೊಬೈಲ್ ನಲ್ಲೇ ತಲಾಕ್ ಹೇಳಿ ಅತ್ತಿಗೆಯೊಂದಿಗೆ ಸಂಬಂಧ ಇಟ್ಟುಕೊಂಡ ಪತಿ, ದೂರು ನೀಡಿದ ಪತ್ನಿ…..!

Follow Us :

ಅನೈತಿಕ ಸಂಬಂಧಗಳು ನಾಗರೀಕ ಸಮಾಜದಲ್ಲಿ ಇನ್ನೂ ಜೀವಂತವಾಗಿಯೇ ಇರುತ್ತವೆ. ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡ ಓರ್ವ ವ್ಯಕ್ತಿ ಹೆಂಡತಿಗೆ ತ್ರಿವಳಿ ತಲಾಖ್ ಹೇಳಿದ್ದಾನೆ. ಇದರಿಂದ ದಿಕ್ಕು ತೋಚದಂತಾಗಿರುವ ಪತ್ನಿ ಪೊಲೀಸರ ಮೊರೆ ಹೋಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಗಂಡ ಹಾಗೂ ಅತ್ತಿಗೆ ವಿರುದ್ದ ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಳನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ವಾಸ ಮಾಡುತ್ತಿರುವ ಮಹಿಳೆಯೊಬ್ಬರು 15 ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ಅವರಿಗೆ ಒಬ್ಬ ಮಗಳಿದ್ದಾರೆ. ಆದರೆ ಮಗಳು ಜನವರಿ ಮಾಹೆಯಲ್ಲಿ ಮೃತಪಟ್ಟಿದ್ದಾಳೆ.  ಇನ್ನೂ ಪತಿ ಕುಡುಕನಾಗಿದ್ದು, ತನ್ನ ಅತ್ತಿಗೆಯೊಂದಿಗೆ ಮಾತ್ರವಲ್ಲದೇ ಬೇರೆ ಮಹಿಳೆಯರೊಂದಿಗೆ ಸಹ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ. ನನ್ನ ವಿರುದ್ದ ಸುಳ್ಳು ಆರೋಪಗಳನ್ನು ಮಾಡಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಅತ್ತಿಗೆಯ ಜೊತೆಗೆ ಸಹ ಅನೇಕ ಬಾರಿ ಜಗಳ ಆಗಿತ್ತಂತೆ. ಪೋಷಕರಿಗೂ ಸಹ ಅವರ ಜೊತೆಗೆ ಸಹ ಆತ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎಂದು ಸಂತ್ರಸ್ಥೆ ಆರೋಪ ಮಾಡಿದ್ದಾರೆ.

ಈ ಎಲ್ಲಾ ಘಟನೆಗಳ ಬಳಿಕ ನಾನು ನನ್ನ ತವರು ಮನೆಗೆ ಹೋಗಿದ್ದೆ. ಆಗ ಪೋನ್ ಮಾಡಿ ಮೂರು ಬಾರಿ ತಲಾಖ್ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿದ್ದು, ಈ ಸಂಬಂಧ ಪಳನಿ ಪೊಲೀಸ್ ಠಾಣೆಯಲ್ಲಿ ತ್ರಿವಳಿ ತಲಾಖ್ ವಿರುದ್ದ ದೂರು ನೀಡಿದ್ದಾರೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು ಪತಿ ಸೇರಿದಂತೆ ಮೂವರ ವಿರುದ್ದ ಎಫ್.ಐ.ಆರ್‍ ದಾಖಲಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.