ಬಾಯ್ ಫ್ರೆಂಡ್ ಮೊಬೈಲ್ ನೋಡಿ ಶಾಕ್ ಆದ ಯುವತಿ, ಆತನ ಮೊಬೈಲ್ ನಲ್ಲಿತ್ತು 13 ಸಾವಿರ ನಗ್ನ ಪೊಟೋ…..!

ಖಾಸಗಿ ಕಂಪನಿಯೊಂದರ ಯುವತಿ ತನ್ನ ಬಾಯ್ ಫ್ರೆಂಡ್ ಮೊಬೈಲ್ ಪೋನ್ ಅಚಾನಕ್ ಆಗಿ ನೋಡಿದ್ದು, ಪೋನ್ ನೋಡಿದ ಕೂಡಲೇ ಆಕ್ ಶಾಕ್ ಆಗಿದ್ದಾಳೆ. ಆತನ ಮೊಬೈಲ್ ನಲ್ಲಿ ಸುಮಾರು 13 ಸಾವಿರ ನಗ್ನ ಪೊಟೋಗಳಿದ್ದು,…

ಖಾಸಗಿ ಕಂಪನಿಯೊಂದರ ಯುವತಿ ತನ್ನ ಬಾಯ್ ಫ್ರೆಂಡ್ ಮೊಬೈಲ್ ಪೋನ್ ಅಚಾನಕ್ ಆಗಿ ನೋಡಿದ್ದು, ಪೋನ್ ನೋಡಿದ ಕೂಡಲೇ ಆಕ್ ಶಾಕ್ ಆಗಿದ್ದಾಳೆ. ಆತನ ಮೊಬೈಲ್ ನಲ್ಲಿ ಸುಮಾರು 13 ಸಾವಿರ ನಗ್ನ ಪೊಟೋಗಳಿದ್ದು, ಆಕೆ ಅಘಾತಕ್ಕೆ ಗುರಿಯಾಗಿದ್ದಾಳೆ. ಈ ಬಗ್ಗೆ ಆಕೆ ಸೈಬರ್‍ ಕ್ರೈಂ ಠಾಣೆಗೆ ದೂರು ಸಹ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡು‌ತ್ತಿದ್ದಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಆಕೆ ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರೂ ತುಂಬಾ ಗಾಡವಾದ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಇಬ್ಬರ ಕೆಲವೊಂದು ಖಾಸಗಿ ಪೊಟೋಗಳನ್ನು ವಿಡಿಯೋಗಳನ್ನು ಅವರಿಬ್ಬರು ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕೆ ಸಂತ್ರಸ್ತೆ  ಈ ವಿಡಿಯೋ ಹಾಗೂ ಪೊಟೋಗಳನ್ನು ಡಿಲೀಟ್ ಮಾಡಲು ಪ್ರಿಯಕರನಿಗೆ ತಿಳಿಯದೇ ಆತನ ಪೋನ್ ತೆಗೆದುಕೊಂಡಿದ್ದಾರೆ. ಆದರೆ ಆತನ ಪೋನ್ ಗ್ಯಾಲರಿ ನೋಡಿದ ಕೂಡಲೇ ಆಕೆಗೆ ಶಾಕ್ ಕಾದಿತ್ತು ಎನ್ನಲಾಗಿದೆ. ಆತನ ಪೋನ್ ಗ್ಯಾಲರಿಯಲ್ಲಿ ಬರೊಬ್ಬರಿ 13 ಸಾವಿರದಷ್ಟು ನಗ್ನ ಪೊಟೋಗಳನ್ನು ಕಂಡು ಆಕೆ ದಂಗಾಗಿದ್ದಾಳೆ.

ಪ್ರಿಯಕರನ ಮೊಬೈಲ್ ಗ್ಯಾಲರಿಯಲ್ಲಿ ಆಕೆ ಸಹುದ್ಯೋಗಿ ಸೇರಿದಂತೆ ಅನೇಕ ಮಹಿಳೆಯರ ನಗ್ನ ಪೋಟಗಳು ಆತನ ಪೋನ್ ನಲ್ಲಿ ಪತ್ತೆಯಾಗಿದೆ. 13 ಸಾವಿರ ನಗ್ನ ಪೊಟೋಗಳನ್ನು ಕಂಡು ಆಕೆ ವಿಚಲಿತಳಾಗಿದ್ದಾಳೆ. ಕೂಡಲೇ ಆತನೊಂದಿಗೆ ಆಕೆ ಸಂಬಂಧ ಕಡಿದುಕೊಂಡಿದ್ದಾಳೆ. ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಲೀಗಲ್ ತಂಡಕ್ಕೆ ಮಾಹಿತಿ ನೀಡಿದ್ದಾಳೆ. ಬಳಿಕ ನ.23 ರಂದು ಕಂಪನಿಯ ಪ್ರತಿನಿಧಿಯೊಬ್ಬರು ಸೈಬರ್‍ ಕ್ರೈಂ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಅದರಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಮೊಬೈಲ್ ನಲ್ಲಿರುವಂತಹ ಪೊಟೋಗಳು ಮಾರ್ಫಿಂಗ್ ಮಾಡಿದ ಪೊಟೋಗಳು ಎಂದು ಶಂಕಿಸಲಾಗಿದೆ. ಇನ್ನೂ ಆರೋಪಿಯು ಕಂಪನಿಯ ಯಾವುದೇ ಡಿವೈಸ್ ಬಳಸಿಲ್ಲ ಎಂದು ಕಂಪನಿ ಸಹ ಸ್ಪಷ್ಟಪಡಿಸಿದೆ. ಇನ್ನೂ ಪೊಲೀಸರು ಆರೋಪಿಯ ಕಡೆಯಿಂದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.