ಬಾಲಿವುಡ್ ಸ್ಟಾರ್ ನಟಿ ಕತ್ರೀನಾ ಕೈಫ್ ಗೆ 5 ಕೋಟಿ ಸಾಲ ಹಿಂದುರಿಗಿಸಿಲ್ಲವಂತೆ ಆ ಟಾಲಿವುಡ್ ಯಂಗ್ ಹಿರೋ, ಆತ ಯಾರು?

Follow Us :

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ. ಕೆಲವರು ಮಾತ್ರ ಮದುವೆಯಾದರೂ ಭರ್ಜರಿ ಆಫರ್‍ ಗಳನ್ನು ಪಡೆದುಕೊಳ್ಳುವುದರ ಜೊತೆಗೆ ಅವರು ನೀಡುವಂತಹ ಹಾಟ್ ಟ್ರೀಟ್ ಗೆ ಆಕೆ ಮದುವೆಯಾದರೂ ಸಹ ಯಂಗ್ ಬ್ಯೂಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಸದ್ದು ಮಾಡುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹ ಸೇರುತ್ತಾರೆ. ಇದೀಗ ಆಕೆಗೆ ಟಾಲಿವುಡ್ ಯಂಗ್ ಹಿರೋ ಒಬ್ಬರು 5 ಕೋಟಿ ಸಾಲ ವಾಪಸ್ಸು ನೀಡಿಲ್ಲ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚನೀಯ ಅಂಶವಾಗಿದೆ.

ಸ್ಟಾರ್‍ ನಟಿ ಕತ್ರಿನಾ ಕೈಫ್ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ವೆಂಕಟೇಶ್ ಜೋಡಿಯಾಗಿ ಮಲ್ಲೇಶ್ವರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ಕೂಡಲೇ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಬಾಲಿವುಡ್ ನಲ್ಲಿ ಅನೇಕ ಸ್ಟಾರ್‍ ನಟರೊಂದಿಗೆ ತೆರೆಹಂಚಿಕೊಂಡು ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಬ್ಯಾಕ್ ಟು ಬ್ಯಾಕ್ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಕಡಿಮೆ ಸಮಯದಲ್ಲೇ ಸ್ಟಾರ್‍ ಆದರು. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡಿದರು. ಬಿಕಿನಿ ಪೊಟೋಗಳು, ವಿಡಿಯೋಗಳ ಮೂಲಕ ನೆಟ್ಟಿಗರಿಗೆ ನಿದ್ದೆಯಿಲ್ಲದೇ ಮಾಡಿದರು, ಜೊತೆಗೆ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡರು. ಇದೀಗ ಆಕೆಗೆ ಟಾಲಿವುಡ್ ಯಂಗ್ ಹಿರೋ ಒಬ್ಬರು ಆಕೆಯ ಬಳಿ ಐದು ಕೋಟಿ ಸಾಲ ಪಡೆದು ವಾಪಸ್ಸು ಮಾಡಲಿಲ್ಲ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ನಟಿ ಕತ್ರಿನಾ ಮಲ್ಲೇಶ್ವರಿ ಸಿನೆಮಾದಿಂದ ಇಲ್ಲಿಯವರೆಗೂ ತೆಲುಗು ಹಿರೋಗಳ ಜೊತೆಗೆ ಟಚ್ ನಲ್ಲೇ ಇದ್ದಾರಂತೆ. ಅನೇಕ ಕಾರ್ಯಕ್ರಮಗಳಿಗೂ ಆಕೆ ಬರುತ್ತಿರುತ್ತಾರಂತೆ. ಟಾಲಿವುಡ್ ಯಂಗ್ ಹಿರೋ ಒಬ್ಬರು ಕತ್ರಿನಾ ರವರಿಂದ ಐದು ಕೋಟಿ ಸಾಲ ಪಡೆದಿದ್ದಾರಂತೆ. ಅಂದಿನ ಕಾಲದ ತೆಲುಗು ಇಂಡಸ್ಟ್ರಿಗೆ ಸೇರಿದ ಯಂಗ್ ಹಿರೋ ಒಂದು ಸಿನೆಮಾ ಮಾಡಿ, ಆತನೆ ಅದನ್ನು ನಿರ್ಮಾಣ ಸಹ ಮಾಡಿದ್ದರಂತೆ. ಆದರೆ ಆತನ ಸಿನೆಮಾ ಸಕ್ಸಸ್ ಕಂಡರೂ ಸಹ ಕಲೆಕ್ಷನ್ ಮಾಡಿರಲಿಲ್ಲವಂತೆ. ಈ ಕಾರಣದಿಂದ ಆತ ಮಾಡಿ ಸಾಲ ತೀರಿಸಲಾಗದೇ ಕತ್ರಿನಾ ರವರ ಬಳಿ ಐದು ಕೋಟಿ ಸಾಲ ಕೇಳಿದ್ದರಂತೆ. ಆತ ಸಾಲ ಕೇಳಿದ ಕೂಡಲೇ ಕತ್ರಿನಾ ಸಹ ಐದು ಕೋಟಿ ಸಾಲ ಕೊಟ್ಟರಂತೆ. ಆದರೆ ಆ ಹಿರೋ ಇಲ್ಲಿಯವರೆಗೂ ಆಕೆಗೆ ಸಾಲವನ್ನು ಮರುಪಾವತಿಸಲ್ಲವಂತೆ. ಆ ಯಂಗ್ ಹಿರೋ ಯಾರು, ಈ ಸುದ್ದಿ ನಿಜವೇ, ಇಲ್ಲಾ ಫೇಕ್ ಸುದ್ದಿಯೇ ಎಂಬುದನ್ನು ಪಕ್ಕಕ್ಕಿಟ್ಟರೇ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.