Film News

ರೇಪ್ ಆಗಿ ಬೆತ್ತಲೆಯಾಗಿ ನಡೆದುಬಂದ 12 ವರ್ಷದ ಬಾಲಕಿಗೆ ಸಹಾಯ ಮಾಡಲು ಮುಂದೆ ಬರದ ಜನತೆ….!

ಹನ್ನೇರಡು ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ದೈಹಿಕ ಹಿಂಸೆ ಮಾಡಿದ್ದಾರೆ. ದೈಹಿಕ ಹಿಂಸೆ ಅನುಭವಿಸಿದ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಕೊಂಡು ಬರುತ್ತಾ, ಮನೆ ಮನೆಗೆ ಭೇಟಿ ನೀಡಿ ಸಹಾಯಕ್ಕೆ ಅಂಗಲಾಚಿದರೂ ಸಹ ಜನರ ಮನಸ್ಸು ಕರಗದೇ ಯಾರೂ ಸಹಾಯಕ್ಕೆ ಬಂದಿಲ್ಲ. ಅದರಲ್ಲೂ ಓರ್ವ ಆಕೆಯನ್ನು ನಾಯಿಯಂತೆ ಓಡಿಸಲು ಮುಂದಾಗಿದ್ದ ಅಮಾನುಷ ಘಟನೆಯೊಂದು ನಡೆದಿದೆ.

ಮಧ್ಯಪ್ರದೇಶದ ಉಜ್ಜಯನಿಯಲ್ಲಿ 12 ವರ್ಷದ ಬಾಲಕೀಯ ಮೇಲೆ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ಆಕೆಗೆ ತುಂಬಾನೆ ದೈಹಿಕ ಹಿಂಸೆ ಸಹ ನೀಡಿದ್ದಾರೆ. ಸಂತ್ರಸ್ತ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದು ಬರುತ್ತಾ, ಮಾರ್ಗದಲ್ಲಿ ಪ್ರತಿ ಮನೆಯ ಬಾಗಿಲಿಗೆ ತೆರಳಿ ಸಹಾಯಕ್ಕಾಗಿ ಬೇಡಿದ್ದಾಳೆ. ಆದರೆ ಅಲ್ಲಿದ್ದ ವ್ಯಕ್ತಿಗಳು ಆಕೆಯನ್ನು ನೊಡುತ್ತಾ ಸುಮ್ಮನಿದ್ದಾರೆ ವಿನಃ ಮಾನವೀಯತೆಯನ್ನು ತೋರಿಲ್ಲ. ಆಕೆಗೆ ಸಹಾಯ ಮಾಡಲು ಮುಂದಾಗದ ಓರ್ವ ವ್ಯಕ್ತಿ ನಾಯಿಯನ್ನು ಓಡಿಸುವಂತೆ ಆಕೆಯನ್ನು ಓಡಿಸಿದ್ದಾನಂತೆ. ಉಜ್ಜಯನಿಯಿಂದ ಸುಮಾರು 15 ಕಿ.ಮೀ ದೂರದ ಬದ್ ನಗರದ ರಸ್ತೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ.

ಈ ವಿಡಿಯೋದಲ್ಲಿ ಸಂತ್ರಸ್ತ ಬಾಲಕಿ ಸಣ್ಣ ಬೆಡ್ ಶೀಟ್ ನಲ್ಲಿ ತನ್ನ ದೇಹವನ್ನು ಮುಚ್ಚಿಕೊಂಡು ಅರೆ ಬೆತ್ತಲೆಯಾಗಿ ಅಲೆದಾಡುತ್ತಿದ್ದಾಳೆ. ಅಲ್ಲಿದ್ದ ಆಶ್ರಮವೊಂದಕ್ಕೆ ತಲುಪಿದ್ದು, ಅಲ್ಲಿನ ಅರ್ಚಕರೊಬ್ಬರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಅತ್ಯಾಚಾರ ಆಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಆಕೆಯ ದೇಹವನ್ನು ಮುಚ್ಚಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಖಚಿತವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಪೊಲೀಸ್ ಅಧಿಕಾರಿಯೊಬ್ಬರು ಬಾಲಕಿಯ ಮಾಹಿತಿಯನ್ನು ಕೇಳಿದ್ದು, ಆಕೆಗೆ ಸರಿಯಾಗಿ ಉತ್ತರ ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇನ್ನೂ ಈ ಸಂಬಂಧ ಅನಾಮಿಕ ವ್ಯಕ್ತಿಯ ವಿರುದ್ದ ಪೋಕ್ಸೋ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡ ರಚಿಸಿದ್ದು, ತನಿಖೆಯನ್ನು ಆರಂಭ ಮಾಡಿದ್ದಾಗಿ ಉಜ್ಜಯನಿ ಪೊಲೀಸ್ ಮುಖ್ಯಸ್ಥ ಸಚಿನ್ ಶರ್ಮಾ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top