Film News

ವೈರಲ್ ಆದ ಸ್ಟಾರ್ ಜೋಡಿಯ ಮಕ್ಕಳ ಪೊಟೋಸ್, ನಯನ್ ವಿಕ್ಕಿ ಮುದ್ದಿನ ಮಕ್ಕಳ ಹುಟ್ಟುಹಬ್ಬಕ್ಕೆ ಎಮೋಷನಲ್ ನೋಟ್ ಹಂಚಿಕೊಂಡ ನಯನತಾರಾ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಬಳಿಕ ಕಳೆದ ವರ್ಷ ಜೂನ್ 9 ರಂದು ಸಪ್ತಪದಿ ತುಳಿದರು. ಚೆನೈನ ಮಹಾಬಲಿಪುರಂ ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿತು. ಅಕ್ಟೋಬರ್‍ ಮಾಹೆಯಲ್ಲೇ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಇದೀಗ ತಮ್ಮ ಮಕ್ಕಳ ಹುಟ್ಟುಹಬ್ಬದ ಅಂಗವಾಗಿ ಎಮೋಷನಲ್ ಪೋಸ್ಟ್ ಹಾಗೂ ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

2022 ಜೂನ್ 9 ರಂದು ಮಹಾಬಲಿಪುರಂ ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಅವರು ಅಕ್ಟೋಬರ್‍ 22 ರಲ್ಲೇ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಅವಳಿ ಮಕ್ಕಳ ತಾಯಿಯಾದ ಬಳಿಕ ನಯನತಾರಾ ಹೆಚ್ಚಿನ ಸಮಯ ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ತಮ್ಮ ಮುದ್ದಿನ ಮಕ್ಕಳಿಗೆ ಉಯರ್‍ ಹಾಗೂ ಉಲಗ್ ಎಂಬ ಹೆಸರುಗಳನ್ನು ಸಹ ಇಟ್ಟಿದ್ದಾರೆ. ಇನ್ನೂ ತಮ್ಮ ಅವಳಿ ಮಕ್ಕಳ ಮೊದಲನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಕೆಲವೊಂದು ರೇರ್‍ ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ನಯನತಾರಾ ತಮ್ಮ ಅವಳಿ ಮಕ್ಕಳ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ತಾನು ಸುಮಾರು ದಿನಗಳಿಂದ ಫ್ಯಾಮಿಲಿ ಪೊಟೋಗಳನ್ನು ಹಂಚಿಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಆದರೆ ಇದೀಗ ಸಮಯ ಬಂದಿದೆ ಎಂದು ತಮ್ಮ ಮಕ್ಕಳಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಮಾತಿನಲ್ಲಿ ಹೇಳಲು ಸಾಧ್ಯವಾಗದ ರೀತಿಯಲ್ಲಿ ಪ್ರೀತಿಸುತ್ತಿರುವುದಾಗಿ ಜೀವನದಲ್ಲಿ ಎಲ್ಲದಕ್ಕಿಂತಲೂ ಮೀರಿದ ಆನಂದ ಅವರೇ. ನಮ್ಮ ಜೀವನದಲ್ಲಿ ಬಂದಿದ್ದಕ್ಕಾಗಿ, ಸಂತೋಷ ನೀಡಿದಕ್ಕಾಗಿ ಧನ್ಯವಾದಗಳು ಎಂದು ನಿಮ್ಮ ಮೇಲೆ ಎಲ್ಲರ ಆರ್ಶಿವಾದ ಇರಬೇಕು ಎಂದು ಎಮೋಷನಲ್ ಪೋಸ್ಟ್ ಮಾಡಿದ್ದಾರೆ.

ಇನ್ನೂ ನಯನತಾರಾ ತಮ್ಮ ಇಬ್ಬರೂ ಮಕ್ಕಳಿಗೂ ಒಂದೇ ರೀತಿಯ ಬಟ್ಟೆಗಳನ್ನು ಹಾಕಿದ್ದು, ಮಕ್ಕಳು ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮದುವೆಯಾದ ಬಳಿಕವೂ ಸಹ ನಯನತಾರಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಕೊನೆಯದಾಗಿ ಆಕೆ ಜವಾನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿಯನ್ನು ಎಬ್ಬಿಸಿದೆ.

Most Popular

To Top