News

ರೀಲ್ಸ್ ಮಾಡೋ ಹುಡ್ಗ ಬೇಕೆಂದು ಜಾಹಿರಾತು, ಯುವತಿ ನೀಡಿದ ಜಾಹಿರಾತು ಸಿಕ್ಕಾಪಟ್ಟೆ ವೈರಲ್…..!

ಮದುವೆಗಾಗಿ ಅನೇಕ ಮ್ಯಾಟ್ರಿಮೋನಿಯಲ್ ಆಪ್ ಗಳಿವೆ. ಜೊತೆಗೆ ವಿವಿಧ ಕಡೆ ವಿವಿಧ ರೀತಿಯ ಜಾಹಿರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸರ್ಕಾರಿ ನೌಕರ ಬೇಕು, ಅಂತಹ ವಿದ್ಯಾರ್ಹತೆ ಇರಬೇಕು, ಗುಣವಂತನಾಗಿರಬೇಕು, ಶ್ರೀಮಂತನಿರಬೇಕು ಎಂಬ ಅನೇಕ ಜಾಹಿರಾತುಗಳನ್ನು ನೋಡಿದ್ದೇವೆ. ಆದರೆ ಇದೀಗ ಯುವತಿಯೊಬ್ಬಳು ಹುಡುಗ ಬೇಕು ಎಂದು ಹಾಕಿರುವಂತಹ ಜಾಹಿರಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಕೆಯ ಜಾಹಿರಾತಿನಲ್ಲಿ ಏನಿತ್ತು ಎಂಬ ವಿಚಾರಕ್ಕೆ ಬಂದರೇ,

ಈ ಹಿಂದೆ ಮದುವೆಯಾಗಬೇಕಾದರೇ ಜಾತಕ ಹಿಡಿದು ಮನೆ ಮನೆ ಹುಡುಕುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಆನ್ ಲೈನ್ ನಲ್ಲಿಯೇ ಎಲ್ಲವೂ ನಡೆದುಹೋಗುತ್ತದೆ. ತಮ್ಮ ಬಾಳಸಂಗಾತಿಯನ್ನು ಹುಡುಕಲು ಅನೇಕ ಮ್ಯಾಟ್ರಿಮೋನಿಯಲ್ ತಾಣಗಳಿವೆ. ಮ್ಯಾಟ್ರಿಮೋನಿ ತಾಣಗಳಲ್ಲಿ ತಮ್ಮ ಎಲ್ಲಾ ವಿವರಗಳನ್ನು ಹಾಕಿ ತಮಗೆ ಹೊಂದಾಣಿಕೆಯಾಗುವಂತಹ ಸಂಗಾತಿಯನ್ನು ಹುಡುಕಿಕೊಳ್ಳಬಹುದಾಗಿದೆ. ಈ ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ತಮಗೆ ಹೊಂದಾಣಿಕೆಗೆ ಬೇಕಾಗುವಂತಹ ಎಲ್ಲಾ ವಿವರಗಳನ್ನು ಸಹ ಹಾಕುತ್ತಾರೆ. ಅದರಲ್ಲೂ ಕೆಲವರು ವಿಚಿತ್ರ ಜಾಹಿರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇಂಜಿನಯರ್‍ ವರ ಬೇಕು, ಡಾಕ್ಟರ್‍ ವರ ಬೇಕು, ವೆಜಿಟೆರಿಯನ್ ವರ ಬೇಕು ಎಂಬೆಲ್ಲಾ ಕಂಡಿಷನ್ ಗಳನ್ನು ಹಾಕಿರುತ್ತಾರೆ.

ಆದರೆ ಇಲ್ಲೊಬ್ಬ ಯುವತಿ ಮಾತ್ರ ತುಂಬಾನೆ ವಿಚಿತ್ರವಾಗಿರುವಂತಹ ಜಾಹಿರಾತನ್ನು ಹಾಕಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಿಯಾ ಎಂಬ ಸೋಷಿಯಲ್ ಮಿಡಿಯಾ ಇನ್ ಪ್ಲುಯೆನ್ಸರ್‍ ಈ ವಿಚಿತ್ರ ಜಾಹಿರಾತನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಆಖೆ ಕ್ಯಾಮೆರಾ ಶೈ ಇಲ್ಲದಂತಹ ಹುಡುಗನನ್ನು ಹುಡುಕುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲೈಫ್, ರಿಲೇಶನ್ ಶಿಪ್, ರೀಲ್ಸ್ ಮಾಡಲು ಆತ ಹಿಂಜರಿಯಬಾರದು. ಯಾರಾದರೂ ನನ್ನನ್ನು ಅಪ್ರೋಚ್ ಮಾಡುವ ಮೊದಲು Amazon miniTV ‘Half Love Half Arranged’ ವೀಕ್ಷಣೆ ಮಾಡಬೇಕು. ಸೋಷಿಯಲ್ ಮಿಡಿಯಾ ಬಳಸುವಂತಹ ಪರಣಿತಿ ಹೊಂದಿರಬೇಕು ಎಂದು ಜಾಹಿರಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.  ಆಕೆ ಸಂಗಾತಿಯನ್ನು ಹುಡುಕುತ್ತಿದ್ದಾರೆಯೇ ಅಥವಾ ಯಾವುದಾದರೂ ಪೋಸ್ಟ್ ಗೆ ಉದ್ಯೋಗಿಯನ್ನು ಹುಡುಕುತ್ತಿದ್ದಾರೇಯೇ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇತ್ತಿಚಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಭಾರಿ ಸಂಪಾದನೆ ಸಹ ಮಾಡುತ್ತಿದ್ದಾರೆ. ಅದರಲ್ಲೂ ಕಪಲ್ಸ್ ಮಾಡುವ ರೀಲ್ಸ್ ವಿಡಿಯೋಗಳಿಗೆ ತುಂಬಾನೆ ಡಿಮ್ಯಾಂಡ್ ಇದೆ. ಆದ್ದರಿಂದಲೇ ರಿಯಾ ಎಂಬ ಯುವತಿ ತನ್ನ ಬಾಳ ಸಂಗಾತಿಗಾಗಿ ಅಂತಹ ಜಾಹಿರಾತನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top