News

ಪುಷ್ಪಾ ಸ್ಟೆಪ್ಸ್ ಹಾಕಿದ ಡೇವಿಡ್ ವಾರ್ನರ್‍, ಕ್ರೀಡಾಂಗಣದಲ್ಲಿ ಫೀಲ್ಡಿಂಗ್ ಮಾಡುತ್ತಾ ಶ್ರೀವಲ್ಲಿ ಸ್ಟೆಪ್ಸ್ ಹಾಕಿದ ಕ್ರಿಕೆಟಿಗ, ವೈರಲ್ ಆದ ವಿಡಿಯೋ…..!

ಖ್ಯಾತ ಆಸ್ಟ್ರೇಲಿಯನ್ ಕ್ರಿಕೆಟರ್‍ ಡೇವಿಡ್ ವಾರ್ನರ್‍ ಈಗಾಗಲೇ ತಾನು ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಫ್ಯಾನ್ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅಲಾ ವೈಕುಂಟಪುರಂಲೋ ಎಂಬ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಸುದ್ದಿಯಾಗಿದ್ದರು. ಜೊತೆಗೆ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೂ ಸಹ ಪುಷ್ಪಾ ಡೈಲಾಗ್ ಹೇಳುವ ಮೂಲಕ ವಿಶೇಷವಾಗಿ ವಿಶ್ ಮಾಡಿದ್ದರು. ಇದೀಗ ವಾರ್ನರ್‍ ಮತ್ತೊಮ್ಮೆ ಪುಷ್ಪಾ ಸ್ಟೈಲ್ ರಿಮೇಕ್ ಮಾಡಿದ್ದಾರೆ.

ಪುಷ್ಪಾ ಸಿನೆಮಾದ ಮೂಲಕ ಅಲ್ಲು ಅರ್ಜುನ್ ಕೇವಲ ತೆಲುಗು ಸಿನಿರಂಗದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಖ್ಯಾತಿ ಪಡೆದುಕೋಂಡರು. ಈ ಸಿನೆಮಾ ಕೇವಲ ಅವರ ಅಭಿಮಾನಿಗಳನ್ನು ಮಾತ್ರವಲ್ಲದೇ ವಿವಿಧ ರಂಗಗಳ ಸೆಲೆಬ್ರೆಟಿಗಳನ್ನೂ ಸಹ ಫಿದಾ ಆಗುವಂತೆ ಮಾಡಿದೆ. ಅದರಲ್ಲೂ ಪುಷ್ಪಾ ಸಿನೆಮಾದಲ್ಲಿನ ತಗ್ಗೇದೆ ಲೇ ಎಂಬ ಡೈಲಾಗ್ ಜೊತೆಗೆ ಶ್ರೀವಲ್ಲಿ ಹಾಡು ಸಹ ತುಂಬಾನೆ ಫೇಮಸ್ ಆಗಿದೆ. ಇನ್ನೂ ಅಲ್ಲು ಅರ್ಜುನ್ ರವರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸೆಲೆಬ್ರೆಟಿಗಳು ಫಾಲೋ ಮಾಡುತ್ತಿರುತ್ತಾರೆ. ಅವರಲ್ಲಿ ಸ್ಟಾರ್‍ ಕ್ರಿಕೆಟರ್‍ ಡೇವಿಡ್ ವಾರ್ನರ್‍ ಸಹ ಒಬ್ಬರಾಗಿದ್ದು, ಸುಮಾರು ವರ್ಷಗಳಿಂದ ಅಲ್ಲು ಅರ್ಜುನ್ ರವರನ್ನು ಫಾಲೋ ಮಾಡುತ್ತಿದ್ದಾರೆ. ಈ ಹಿಂದೆ ಅಲಾ ವೈಕುಂಠಪುರಂ ನ ಬುಟ್ಟಬೊಮ್ಮ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಈ ರೀಲ್ಸ್ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಮತ್ತೊಮ್ಮೆ ಡೇವಿಡ್ ವಾರ್ನರ್‍ ಬನ್ನಿ ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ. ಕ್ರೀಡಾಂಗಣದಲ್ಲೇ ಪುಷ್ಪಾ ಸಿನೆಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ಸ್ ಹಾಕಿದ್ದಾರೆ. ಕ್ರೀಕೆಟ್ ಆಡುತ್ತಾ ಬಾರ್ಡರ್‍ ಲೈನ್ ನಲ್ಲಿ ಶ್ರೀವಲ್ಲಿ ಹಾಡಿನಲ್ಲಿ ಬನ್ನಿ ಕುಂಟುತ್ತಾ ಡ್ಯಾನ್ಸ್ ಮಾಡುವ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಇದನ್ನು ಕಂಡ ಇಡೀ ಸ್ಟೇಡಿಯಂ ಜೋರಾಗಿ ಕೂಗಾಡಿದೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳು ಸಹ ಹರಿದುಬರುತ್ತಿದೆ. ಇನ್ನೂ ಕಳೆದ ಶುಕ್ರವಾರ (ಅ.27) ರಂದು ಡೇವಿಡ್ ವಾರ್ನರ್‍ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವಾರ್ನರ್‍ ಹುಟ್ಟುಹಬ್ಬಕ್ಕೆ ಬನ್ನಿ ಸಹ ಶುಭಾಷಯ ಕೋರಿದ್ದು ವಿಶೇಷ ಎನ್ನಬಹುದು. ವಾರ್ನರ್‍ ತಗ್ಗೇದೇ ಲೇ ಎಂದು ಆಕ್ಟ್ ಮಾಡಿದ ಪೊಟೋ ಶೇರ್‍ ಮಾಡಿ, ಕ್ರಿಕೆಟ್ ಸೂಪರ್‍ ಸ್ಟಾರ್‍ ಡೇವಿಡ್ ವಾರ್ನರ್‍ ರವರಿಗೆ ಹುಟ್ಟುಹಬ್ಬದ ಶುಭಾಷಯಗಳು, ನಿಮ್ಮ ಕನಸುಗಳು ನನಸಾಗಬೇಕೆಂದು ಕೋರುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

Most Popular

To Top